ಪ್ರೀತಿ ನಿರಾಕರಣೆ: 3ನೇ ಮಹಡಿಯಿಂದ ಬಾಲಕಿಯ ನೂಕಿದ ಬಾಲಕ
ಪ್ರೀತಿಸಲು ನಿರಾಕರಿಸಿದಕ್ಕೆ ಅಪ್ರಾಪ್ತ ಬಾಲಕಿಯನ್ನು ಅಪ್ರಾಪ್ತ ಬಾಲಕನೊಬ್ಬ ಶಾಲೆಯ 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಅಘಾತಕಾರಿ ಘಟನೆ ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸಲು ನಿರಾಕರಿಸಿದಕ್ಕೆ ಅಪ್ರಾಪ್ತ ಬಾಲಕಿಯನ್ನು ಅಪ್ರಾಪ್ತ ಬಾಲಕನೊಬ್ಬ ಶಾಲೆಯ 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಅಘಾತಕಾರಿ ಘಟನೆ ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನದೇ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಾರ್ಚ್ 16 ರಂದು ಶುಲ್ಕ ಕಟ್ಟಲು ಬಾಲಕಿ ಶಾಲೆಗ ತೆರಳಿದಾಗ ಹಿಂದಿನಿಂದ ಆಕೆಯ ಸ್ನೇಹಿತೆಯಂತೆ ಬಂದ ಬಾಲಕ, ಬಾಲಕಿಯ ಕಣ್ಣು ಕಟ್ಟಿ ಶಾಲೆಯ 3ನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ.[ದೆಹಲಿಯ ಅಪ್ರಾಪ್ತೆಯ ಮೇಲೆ ಇಬ್ಬರು ಬಾಲಾಪರಾಧಿಗಳಿಂದ ಅತ್ಯಾಚಾರ]

ಅನುಮಾನಗೊಂಡ ಬಾಲಕಿ, ಅವನ ಕೈ ಬಿಡಿಸಿಕೊಂಡು ನೋಡಿ ಗಾಬರಿಯಾಗಿದ್ದಾಳೆ. ಅಲ್ಲಿಯೂ ಆತ ತನ್ನನ್ನು ಪ್ರೀತಿಸುವಂತೆ ಕೇಳಿದ್ದಾನೆ. ಆದರೆ ಆಕೆ ನಿರಾಕರಿಸಿ ಶಿಕ್ಷಕಿಯೊಬ್ಬರನ್ನು ಕೂಗಿದ್ದಾಳೆ. ಇದರಿಂದ ಭಯಗೊಂಡ ಬಾಲಕ ವಿದ್ಯಾರ್ಥಿಯನ್ನು ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ್ದಾನೆ. ಗಾಯಗೊಂಡ ಬಾಲಕಿ ಸದ್ಯ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ.[ಅಪ್ರಾಪ್ತೆ ಮೇಲೆ ಕ್ಯಾಮರಾಮನ್ ನಿಂದ ಅತ್ಯಾಚಾರ]
ಬಾಲಕ ನಾಪತ್ತೆಯಾಗಿದ್ದು, ಅತನ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ವಿದ್ಯಾರ್ಥಿನಿ ಬಾಲಕನ ಕುರಿತು ಶಾಲೆಯ ಶಿಕ್ಷಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶಿಕ್ಷಕರು ವಿದ್ಯಾರ್ಥಿನಿಗೆ ಮನೆಯಲ್ಲಿ ಪೋಷಕರಿಗೆ ತಿಳಿಸದಂತೆ ಹೇಳಿದ್ದರು ಎನ್ನಲಾಗಿದೆ. ಬಾಲಕ ಕಿರುಕುಳ ನೀಡುತ್ತಿರುವ ವಿಷಯ ತಿಳಿದಿದ್ದರೂ ಕ್ರಮ ಕೈಗೊಳ್ಳದ ಶಿಕ್ಷಕರ ವಿರುದ್ಧ ಶಿಕ್ಷಣ ಸಂಸ್ಥೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿ ಹಾಗು ಆಕೆಯ ತಾಯಿ ಕೇಳಿಕೊಂಡಿದ್ದಾರೆ. ಪ್ರಕರಣ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.[ಅತ್ಯಾಚಾರವಾಗಿ ಆಯ್ತು ವಾರ: ಆರೋಪಿ ಇನ್ನೂ ನಾಪತ್ತೆ]












Click it and Unblock the Notifications