ಮಡಿಕೇರಿಯಲ್ಲಿ ಸಾವಿನಲ್ಲಿ ಕೊನೆಯಾಯ್ತು ಗಂಡನಿಗಾಗಿ ನಡೆದ ಅಕ್ಕ ತಂಗಿಯರ ಜಗಳ

ಮಡಿಕೇರಿ, ಜನವರಿ 6: ಇಬ್ಬರು ಹೆಂಡತಿಯರ ನಡುವಿನ ಜಗಳ ಒಬ್ಬಳ ಕೊಲೆಯಲ್ಲಿ ಕೊನೆಯಾಗಿದೆ. ಮಡಿಕೇರಿಯ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ಎಸ್ಟೇಟ್ ಲೈನ್ ಮನೆಯಲ್ಲಿ ಅಕ್ಕನೇ ತನ್ನ ತಂಗಿಯನ್ನು ಕೊಲೆಗೈದು ಪರಾರಿಯಾಗಿದ್ದಾಳೆ.

ಕೊಲೆಯಾದ ಮಹಿಳೆಯನ್ನು ವಶಿಕಾ ದೇವಿ (27) ಎಂದು ಗುರುತಿಸಲಾಗಿದೆ. ಆಕೆಯ ಅಕ್ಕ ಆಶಿಕಾ ಕೊಲೆ ಮಾಡಿದ ಆರೋಪಿ.

ಕಾಫಿ ತೋಟದಲ್ಲಿ ಕೆಲಸ ಮಾಡುವ ಜಾರ್ಖಂಡ್ ಮೂಲದ ದಯಾನಂದ್ ಎಂಬಾತ ಏಳು ವರ್ಷಗಳ ಹಿಂದೆ ಆಶಿಕಾ ಎಂಬಾಕೆಯನ್ನು ಮದುವೆಯಾಗಿದ್ದ. ಇದಾದ ಕೆಲವೇ ವರ್ಷಗಳ ನಂತರ ಆಶಿಕಾ ಸಹೋದರಿ ವಶಿಕಾಳನ್ನೂ ಪ್ರೀತಿಸಿ ವಿವಾಹವಾಗಿದ್ದ. ಈ ಮೂವರೂ ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದರು.

Women Killed Her Sister In Virajpete

ಆದರೆ ಕೆಲ ದಿನಗಳಿಂದ ಆಶಿಕಾ ಮತ್ತು ವಶಿಕಾ ನಡುವೆ ಜಗಳ ಹೆಚ್ಚಾಗಿತ್ತು. ಶನಿವಾರ ಸಂಜೆ ಕಾಫಿ ತೋಟದಿಂದ ಇಬ್ಬರೂ ಬಂದ ನಂತರ ಮತ್ತೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಕೊನೆಯಾಗಿದೆ. ಆಶಿಕಾ ತಂಗಿಯನ್ನು ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾಳೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+