Get Updates
Get notified of breaking news, exclusive insights, and must-see stories!

ಕೊಡಗು ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿಸಿದ ಕೇಂದ್ರ ಸರ್ಕಾರ

ಮಡಿಕೇರಿ, ಜುಲೈ 30; "ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ದೂರ ಸಂಪರ್ಕ ಸಚಿವರಲ್ಲಿ ಮನವಿ ಮಾಡಿದಾಗ ಕೊಡಗು ಜಿಲ್ಲೆಯ 62 ಸ್ಥಳಗಳಲ್ಲಿ ಬಿಎಸ್‍ಎನ್‍ಎಲ್ 4 ಜಿ ಟವರ್ ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿದ ಸಂಸದರು, ' ಕೊಡಗು ಜಿಲ್ಲೆಯ 62 ಕಡೆಗಳಲ್ಲಿ 4ಜಿ ಟವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದೇ ನವೆಂಬರ್ ಮೊದಲ ವಾರದಲ್ಲಿ ಚಾಲನೆಗೊಳ್ಳಲಿದೆ' ಎಂದರು. ಸಭೆಯಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು.

Union Govt Approves To Install 62 BSNL Mobile Towers In Kodagu

"ಈಗಾಗಲೇ ಕಂದಾಯ ಇಲಾಖೆಯಿಂದ 6 ಕಡೆಗಳಲ್ಲಿ ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆ ಭೂಮಿ ಕಾಯ್ದಿರಿಸಿದ್ದು, ಈ ನಿಟ್ಟಿನಲ್ಲಿ ಟವರ್ ನಿರ್ಮಾಣ ಮಾಡಿ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತದೆ" ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಬಹುದಿನದ ಬೇಡಿಕೆ; "ಜಿಲ್ಲೆಯ ಜನರ ದಿನದ ಬೇಡಿಕೆ ಈಡೇರಿದೆ. ಜಿಲ್ಲೆಯ 6 ಕಡೆಗಳಲ್ಲಿ ಮಾತ್ರ ಅರಣ್ಯ ಹಾಗೂ ಅರಣ್ಯ ಪೈಸಾರಿ ಜಾಗದಲ್ಲಿ ಅರಣ್ಯ ಇಲಾಖೆಯವರು ಜಾಗ ಕಾಯ್ದಿರಿಸುವ ಸಂಬಂಧ ಮಾಹಿತಿ ನೀಡಲಿದ್ದಾರೆ. ಕೊಡಗು ಜಿಲ್ಲೆ ಜನತೆಯ ಬಹು ದಿನದ ಬೇಡಿಕೆ ಸದ್ಯ ಈಗ ಈಡೇರುತ್ತಿದೆ" ಎಂದು ಸಂಸದರು ಹೇಳಿದರು.

"ಈ 62 ಸ್ಥಳಗಳ ಜೊತೆಗೆ ಉಳಿದಂತೆ ಪೆರಾಜೆ, ಚೆಂಬು, ಮೇಲ್‍ಚೆಂಬು, ಒಣಚಲು, ವಿ.ಬಾಡಗ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಟವರ್ ಅಳವಡಿಕೆಗೆ ಬೇಡಿಕೆ ಇದ್ದು, ಅದನ್ನು ಸಹ ಪ್ರಸ್ತಾವನೆ ಪಡೆದು ಇನ್ನೂ ಹೆಚ್ಚಿನ ಟವರ್ ನಿರ್ಮಾಣ ಮಾಡಲಾಗುವುದು" ಎಂದು ಸಂಸದರು ಸಭೆಯಲ್ಲಿ ಭರವಸೆ ನೀಡಿದರು.

"ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ರಸ್ತೆ, ವಿದ್ಯುತ್, ಅಂತರ್ಜಾಲ ಸಂಪರ್ಕಕ್ಕೆ ಮನವಿ ಮಾಡುತ್ತಾರೆ. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ದೂರ ಸಂಪರ್ಕ ಸಚಿವರಲ್ಲಿ ಮನವಿ ಮಾಡಿದಾಗ 62 ಸ್ಥಳಗಳಲ್ಲಿ ಬಿಎಸ್‍ಎನ್‍ಎಲ್ ಟವರ್ ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಸಾಧ್ಯವಾದಷ್ಟು ಅಂತರ್ಜಾಲ ಸಂಪರ್ಕ ಕಲ್ಪಿಸಿದಂತಾಗುತ್ತದೆ" ಎಂದರು.

ಬ್ರಾಡ್‌ ಬ್ಯಾಂಡ್‌ ಸಂಪರ್ಕ; ಸಭೆಯಲ್ಲಿ ಮಾತನಾಡಿದ ಭಾರತೀಯ ಸಂಚಾರ ನಿಗಮ ವಿಭಾಗದ ಇಂಜಿನಿಯರ್ ಪೊನ್ನುರಾಜು, "ಜಿಲ್ಲೆಯ 103 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವಿದೆ. ಉಳಿದಂತೆ ಹಲವು ಕಡೆಗಳಲ್ಲಿ 2ಜಿ ಮತ್ತು 3ಜಿ ಒಳಗೊಂಡ ಬಿಎಸ್‍ಎನ್‍ಎಲ್ ಟವರ್ ಇದೆ. ಜೊತೆಗೆ 4ಜಿ ಆಗಿ ಪರಿವರ್ತನೆ ಮಾಡಲಾಗುತ್ತದೆ" ಎಂದು ಮಾಹಿತಿ ನೀಡಿದರು.

"ಬಿಎಸ್‍ಎಲ್‍ಎನ್ ಸಂಸ್ಥೆಯವರು ಸಾಧ್ಯವಾದಷ್ಟು ಹೆಚ್ಚಿನ ಬ್ಯಾಟರಿ ದಾಸ್ತಾನು ಮಾಡಿಕೊಳ್ಳುವಂತೆ ಸಲಹೆ ಮಾಡಿದರು. ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ವಿದ್ಯುತ್ ವ್ಯತ್ಯಯ ಆಗಾಗ ಉಂಟಾಗುತ್ತಿದ್ದು, ಆದಷ್ಟು ವಿದ್ಯುತ್ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು" ಎಂದು ಸಂಸದರು ಸಲಹೆ ಕೊಟ್ಟರು.

ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಮಾತನಾಡಿ, "ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ಆದರೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇದನ್ನು ರೀ ಸ್ಟೋರ್ ಮಾಡಲು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಹ ಅತಿ ಮುಖ್ಯವಾಗಿದೆ. ವಿದ್ಯುತ್ ಮಾರ್ಗ ಸರಿಪಡಿಸುವ ಸಂದರ್ಭದಲ್ಲಿ ನೆಟ್‍ವರ್ಕ್ ಇಲ್ಲದೆ ನಾವು ಸಹ ಪರಿತಪಿಸುವಂತಾಗುತ್ತದೆ" ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಮಾತನಾಡಿ, "ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 3 ಟವರ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಇದ್ದು, ಇದನ್ನು ಪರಿಶೀಲಿಸಿ ವರದಿ ನೀಡಲಾಗುವುದು. ಉಳಿದ 3 ಅರಣ್ಯ ಪೈಸಾರಿ ಜಾಗವೆಂದು ದಾಖಲಾಗಿದ್ದು, ಈ ಬಗ್ಗೆ ಅಭಿಪ್ರಾಯ ನೀಡಲಾಗುತ್ತದೆ" ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, "ಕೊಡಗು ಜಿಲ್ಲೆಯಲ್ಲಿ ಈ ಬಾರಿ ಪ್ರತಿ ಗಂಟೆಗೆ 32 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸಿರುವುದು ವರದಿಯಾಗಿದೆ. ಮಳೆಗಾಲದ ಅವಧಿಯಲ್ಲಿ 3-4 ತಿಂಗಳ ಮಟ್ಟಿಗಾದರೂ ಹೆಚ್ಚಿನ ಸಿಬ್ಬಂದಿಯನ್ನು ಸೆಸ್ಕ್ ವಿಭಾಗಕ್ಕೆ ಒದಗಿಸಬೇಕಿದೆ" ಎಂದು ಮನವಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+