ಕೊಡಗು 1500 ನಿರಾಶ್ರಿತ ಕುಟುಂಬಗಳಿಗೆ 50 ಸಾವಿರ ಪರಿಹಾರ
ಮಡಿಕೇರಿ, ಸೆಪ್ಟೆಂಬರ್ 21: ಇತ್ತೀಚೆಗೆ ಪ್ರವಾಹಕ್ಕೆ ತುತ್ತಾಗಿ ನಲುಗಿರುವ ಕೊಡಗಿಗೆ ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲು ನಿರ್ಧರಿಸಿದೆ. ಕೊಡಗು ನಿರಾಶ್ರಿತರ ಕುಟುಂಬಕ್ಕೆ ತಲಾ 50 ಸಾವಿರ ನೀಡಲು ಸರ್ಕಾರ ಮುಂದಾಗಿದೆ.
ಕಳೆದ ಆಗಸ್ಟ್ ಮಾಸದಲ್ಲಿ ಬಂದ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದ್ದು, ಕೊಡಗು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ, ಲಕ್ಷಾಂತರ ಮಂದಿ ಆಸ್ತಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ, ಕೊಡಗು ನಿರಾಶ್ರಿತರಿಗೆ ತಲಾ 50 ಸಾವಿರ ನೀಡಲು ಸರ್ಕಾರ ಮುಂದಾಗಿದೆ.
ಒಟ್ಟು 1500 ಕುಟುಂಬಗಳಿಗೆ ಹಣ ನೀಡಲು ಆರ್ಥಿಕ ಇಲಾಖೆ ಸಮ್ಮತಿ ಸೂಚಿಸಿದೆ. ಸಿಎಂ ಪರಿಹಾರ ನಿಧಿಯಲ್ಲಿ ಸಾಕಷ್ಟು ಮೊತ್ತ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ಧನ ಸಹಾಯ ಮಾಡಲು ಸರ್ಕಾರ ಮುಂದಾಗಿದೆ.

ಈ ಸಾಲಿನ ಮಳೆಯಿಂದಾಗಿ ಮಡಿಕೇರಿ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿನ ಒಳ ಚರಂಡಿ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದು ಬಟಾಬಯಲಾಗಿದೆ. ಪ್ರಸ್ತುತ ಸುರಿದ ಒಂದೊಂದು ಮಳೆಯ ಸಂದರ್ಭದಲ್ಲೂ ಮಡಿಕೇರಿ ನಗರಗಳ ಪ್ರಮುಖ ರಸ್ತೆಗಳು ಚರಂಡಿಗಳಾಗಿ ಮಾರ್ಪಟ್ಟಿದ್ದವು. ಪ್ರವಾಹದ ಬಳಿಕ ಇದೀಗ ಕುಡಿಯಲು ನೀರು ಇಲ್ಲದಿರುವಂತಹ ಪರಿಸ್ಥಿತಿ ಎದುರಾಗಿದೆ.












Click it and Unblock the Notifications