Get Updates
Get notified of breaking news, exclusive insights, and must-see stories!

ಕೇರಳ, ಕೊಡಗು ಪ್ರವಾಹ ಪೀಡಿತರ ನೆರವಿಗೆ ಶ್ರೀ ರವಿಶಂಕರ್‌ ಗುರೂಜಿ

ಬೆಂಗಳೂರು, ಆಗಸ್ಟ್22: ಪ್ರವಾಹ ಪೀಡಿತ ಕೊಡಗು ಜನರ ನೆರವಿಗೆ ಆರ್ಟ್‌ ಆಫ್‌ ಲಿವಿಂಗ್‌ ಮುಂದಾಗಿದೆ.ಭಾರತದ ಎಲ್ಲಾ ಕಡೆಗಳಿಂದಲೂ 60 ಲಾರಿಗಳಲ್ಲಿ ಪರಿಹಾರ ವಸ್ತುಗಳನ್ನು ಕೇರಳಕ್ಕೆ ಕಳುಹಿಸಿದೆ.

ಕೊಡಗಿಗೂ ಇದೇ ರೀತಿಯ ಪರಿಹಾರ ವಸ್ತುಗಳನ್ನು ಆರ್ಟ್ ಆಫ್ ಲಿವಿಂಗ್‌ ವತಿಯಿಂದ ಕಳುಹಿಸಿಕೊಡಲು ವೇಗವಾಗಿ ಸಿದ್ಧತೆ ಮಾಡಲಾಗುತ್ತಿದೆ. ಇದರಲ್ಲಿ 9.35 ಕೋಟಿಗಳಷ್ಟು ಬೆಲೆಬಾಳುವ 500 ಟನ್‌ಗಳಷ್ಟು ಅತ್ಯಗತ್ಯ ವಸ್ತುಗಳಾದ ಬಟ್ಟೆಗಳು, ಔಷಧಿಗಳು, ಆಹಾರ, ನೀರು, ಶೌಚದ ವಸ್ತುಗಳು ಸೇರಿವೆ.

ಆರ್ಟ್ ಆಫ್ ಲಿವಿಂಗ್ ನ 100ಕ್ಕಿಂತಲೂ ಹೆಚ್ಚು ಯುವ ಸೇವಕರಾದ ಯುವಾಚಾರ್ಯರು ಎಡೆಬಿಡದೆ ಹಗಲು ಇರುಳು ಕೇರಳದಲ್ಲಿ ಸೇವೆ ಮಾಡುತ್ತಿದ್ದಾರೆ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು 500 ಟನ್‌ಗಳಷ್ಟು ಪರಿಹಾರ ವಸ್ತುಗಳನ್ನು ಒಳಗೊಂಡ 60 ಲಾರಿಗಳನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ.

Sri Sri Ravishankar Guruji will help to kerala,Kodagu flood victims

ಇವುಗಳನ್ನು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಕೇಂದ್ರ, ಚೆನ್ನೈ, ಹೈದರಾಬಾದ್, ನಾಗ್ಪುರ್, ಕೊಲ್ಕತ್ತಾ ಇನ್ನಿತರೆ ಸ್ಥಳಗಳಿಂದ ಕಳುಹಿಸಿಕೊಡಲಾಗಿದೆ. ಕೊಡಗು ಜಿಲ್ಲೆಯೂ ಅಪಾರ ಹಾನಿಯಿಂದ ತತ್ತರಿಸಿ ಹೋಗಿರುವ ಹಿನ್ನೆಲೆಯಲ್ಲಿ ಜನರಿಗೆ ಆಸರೆಯನ್ನು ಒದಗಿಸಲು ಭರದಿಂದ ಪರಿಹಾರ ವಸ್ತುಗಳನ್ನು ಶೇಖರಿಸಲಾಗುತ್ತಿದೆ . ಮಳೆ ಇದೀಗ ಕಡಿಮೆಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ ನ ಸ್ವಯಂಸೇವಕರು ಅಲ್ಲಿಗೆ ತೆರಳಿ ಪುನರ್ವಸತಿ ಕಾರ್ಯ ದಲ್ಲಿ ಕೈಜೋಡಿಸಲಿದ್ದಾರೆ.

ಪ್ರಾಣಹಾನಿ ಮತ್ತು ಅಪಾರ ಆಸ್ತಿಪಾಸ್ತಿಗಳ ನಷ್ಟದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಕೇರಳದ 14 ಜಿಲ್ಲೆಗಳಲ್ಲೂ ಕಾರ್ಯಪ್ರವೃತ್ತರಾಗಿ 50,000ಕ್ಕಿಂತಲೂ ಹೆಚ್ಚು ಜನರನ್ನು ತಲುಪಿರುವುದಲ್ಲದೆ ಅವರನ್ನು ಸುರಕ್ಷಿತವಾದ ಸ್ಥಳಗಳಿಗೆ ಕೊಂಡೊಯ್ಯಲಾಗಿದೆ. ಅವರೆಲ್ಲರಿಗೂ ಊಟ, ನೀರು, ಬಟ್ಟೆ, ಮತ್ತಿನ್ನಿತರ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಾರವಿಡೀ ಉಭಯ ರಾಜ್ಯಗಳ ಭಾಧಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲಾಗುವುದು. ಇದಕ್ಕಾಗಿ ಬೆಂಗಳೂರು ನಗರದ ಹಲವೆಡೆ ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಕೈಜೋಡಿಸಲು ಬಯಸುವವರು tiny.cc/floodreliefಗೆ ಭೇಟಿ ನೀಡಬಹುದು ಅಥವಾ ಕೆಳಗಿನ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+