ಕೊಡಗಿನಲ್ಲಿ ತಗ್ಗಿದ ಮಳೆ, ಮೂಡಿಸಿದೆ ಚಿಂತೆಯ ಗೆರೆ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜುಲೈ 19 : ಕೆಲವು ದಿನಗಳ ಹಿಂದೆ ಅಬ್ಬರಿಸಿದ ವರುಣ ಇದೀಗ ಜಿಲ್ಲೆಯಾದ್ಯಂತ ಶಾಂತವಾದಂತೆ ಕಾಣುತ್ತಿದೆ. ಬಹುತೇಕ ಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು, ಮಡಿಕೇರಿ, ಭಾಗಮಂಡಲ, ತಲಕಾವೇರಿ ಸೇರಿದಂತೆ ನಾನಾ ಪ್ರದೇಶಗಳಲ್ಲಿ ತುಂತುರು ಮಳೆ ಹೊರತುಪಡಿಸಿದರೆ ಭಾರೀ ಮಳೆ ಸುರಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಜಿಲ್ಲೆಯಲ್ಲಿ ವಾಡಿಕೆ ಮಳೆ 1669.86 ಮಿ.ಮೀ.ಗಳಾಗಬೇಕಿತ್ತಾದರೂ ಈ ವರ್ಷ ಇಲ್ಲಿಯವರೆಗೆ ಸುರಿದಿರುವುದು 1065.27 ಮಿ.ಮೀ. ಮಾತ್ರ. ಜನವರಿಯಿಂದ ಜೂನ್ ವರೆಗೆ ವಾಡಿಕೆ ಮಳೆ 731.53 ಮಿ.ಮೀ.ಗಳಾಗಿದ್ದರೆ, ಈ ವರ್ಷ ಜೂನ್ ಅಂತ್ಯದವರೆಗೆ 661.51 ಮಿ.ಮೀ. ಮಳೆಯಾಗಿದೆ.

Monsoon week in Madikeri district, shortage of rain

ಆದರೆ ಜುಲೈ ಮಾಹೆಯಲ್ಲಿ ವಾಡಿಕೆ ಮಳೆ 938.33 ಮಿ.ಮೀ. ಆಗಿದ್ದು, ಈ ವರ್ಷ ಜುಲೈ ಮಾಹೆಯಲ್ಲಿ ಇಂದಿನವರೆಗೆ ಕೇವಲ 403.75 ಮಿ.ಮೀ. ಮಳೆಯಾಗಿದೆ. ಅಂದರೆ ಸುಮಾರು 534.58 ಮಿ.ಮೀ.ನಷ್ಟು ಮಳೆ ಕಡಿಮೆಯಾಗಿರುವುದು ಮುಂಗಾರು ದುರ್ಬಲವಾಗಿರುವುದನ್ನು ಸೂಚಿಸುತ್ತದೆ.

Read also :ಸೀತೆ ಮಿಂದ ಧನುಷ್ಕೋಟಿಯಲ್ಲಿ ಕಾವೇರಿಯ ರುದ್ರನರ್ತನ

ಇದೇ ರೀತಿ ತಾಲೂಕುವಾರು ಮಳೆ ಪ್ರಮಾಣವನ್ನು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಜುಲೈ 19ರವರೆಗೆ 1986.65 ಮಿ.ಮೀ. ಮಳೆಯಾಗಿತ್ತು, ಈ ವರ್ಷ ಜುಲೈ 19ರವರೆಗೆ 1581.02 ಮಿ.ಮೀ. ಮಳೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 405.63 ಮಿ.ಮೀ. ಮಳೆ ಕಡಿಮೆಯಾಗಿದೆ.

ವಿರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 1205.44 ಮಿ.ಮೀ. ಮಳೆಯಾಗಿದ್ದರೆ, ಈ ವರ್ಷ ಇದರ ಪ್ರಮಾಣ 788.92 ಮಿ.ಮೀ. ಮಾತ್ರ. ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 416.52 ಮಿ.ಮೀ. ಕಡಿಮೆ ಮಳೆಯಾಗಿದೆ.

Monsoon week in Madikeri district, shortage of rain

ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 970.33 ಮಿ.ಮೀ. ಮಳೆಯಾಗಿದ್ದರೆ, ಈ ವರ್ಷ ಇದರ ಪ್ರಮಾಣ 825.87 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 144.46 ಮಿ.ಮೀ. ಮಳೆ ಕಡಿಮೆಯಾಗಿದೆ.

Read also :ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ

ಕಳೆದ ಒಂಬತ್ತು ವರ್ಷಗಳಲ್ಲಿ ಜನವರಿಯಿಂದ ಜುಲೈ 19ರವರೆಗೆ ಮಳೆಯ ಪ್ರಮಾಣವನ್ನು ಅವಲೋಕಿಸಿದಾಗ 2007ರಲ್ಲಿ 2039.90 ಮಿ.ಮೀ., 2008ರಲ್ಲಿ 941.81 ಮಿ.ಮೀ, 2009ರಲ್ಲಿ 1609.02, 2010ರಲ್ಲಿ 759.18 ಮಿ.ಮೀ., 2011ರಲ್ಲಿ 1359.75 ಮಿ.ಮೀ., 2012ರಲ್ಲಿ 733.04 ಮಿ.ಮೀ., 2013ರಲ್ಲಿ 1681.53 ಮಿ.ಮೀ., 2014ರಲ್ಲಿ 1138.03 ಮಿ.ಮೀ, 2015ರಲ್ಲಿ 1428.33 ಮಿ.ಮೀ., 2016ರ ಇದೇ ದಿನ 1065.27 ಮಿ.ಮೀ ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ.

Read also :ತುಂಬಿ ಹರಿವ ಲಕ್ಷ್ಮಣತೀರ್ಥವನ್ನು ನೋಡುವುದೇ ಆನಂದ

ಒಟ್ಟಾರೆ ಮುಂಗಾರು ಚೇತರಿಸಿಕೊಳ್ಳದೆ ಹೀಗೆಯೇ ಮುಂದುವರೆದರೆ ಭಾರೀ ಸಂಕಷ್ಟ ಅನುಭವಿಸಬೇಕಾಗಿ ಬರಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Monsoon has become weak in entire Madikeri district. Though it was raining heavily as monsoon progressed till 19th July, there is huge shortage of rain compared to previous year. Farmers are hoping for more rain in the coming days.
Please Wait while comments are loading...