ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಗರ್ಭ ಶಾಸ್ತ್ರಜ್ಞರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕೆ.ಜಿ.ಬೋಪಯ್ಯ

|
Google Oneindia Kannada News

ಮಂಗಳೂರು, ಆಗಸ್ಟ್ 23: ಭೂ ಕುಸಿತ ಪ್ರದೇಶಗಳ ಪರಿಶೀಲನೆ ನಡೆಸಿದ ವಿಜ್ಞಾನಿಗಳು ದುರಂತಕ್ಕೀಡಾದ ಜೋಡುಪಾಲ ಹಾಗೂ ಅರೆಕಲ್ಲು ಗ್ರಾಮಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು
ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಮಡಿಕೇರಿ ಶಾಸಕ ಕೆಜಿ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾಜೆಯ ಸಂತ್ರಸ್ತರ ಆಶ್ರಯ ಕೆಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಭೂಗರ್ಭ ಶಾಸ್ತ್ರಜ್ಞರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೊಡಗಿನ ದುರಂತದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳುಕೊಡಗಿನ ದುರಂತದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳು

ತಜ್ಞರು ಏನೇ ವರದಿ ಕೊಡಲಿ, ಅದರ ಹಿಂದೆ ಏನಿದೆ ಅನ್ನೋದು ಗೊತ್ತು. ಈ ಪ್ರದೇಶದಲ್ಲಿ ನಾನು ಉಳಿಯಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ನಿರ್ಧರಿಸುವುದು ನಾವು ಎಂದು ಅವರು ವ್ಯಂಗ್ಯವಾಗಿ ಹೇಳಿದರು.

MLA KG Bopaiah opposed the statements of geologists

ಹೋಮ್ ಸ್ಟೇ ಇರುವಲ್ಲಿ ಯಾವುದೇ ದುರಂತಗಳು ಸಂಭವಿಸಿಲ್ಲ. ಹೆಚ್ಚು ದುರ್ಘಟನೆ ಆಗಿರುವುದು ಬಡವರು ವಾಸವಿದ್ದ ಪ್ರದೇಶಗಳಲ್ಲಿ. ಕೊಡಗಿನ ಗಡಿ ಭಾಗ ಮೊಣ್ಣಂಗೇರಿ ಪೂರ್ತಿಯಾಗಿ ನಾಶವಾಗಿದೆ. ಅಲ್ಲಿ ಪುನರ್ವಸತಿ ಕಷ್ಟ. ಉಳಿದಂತೆ ಸೂಕ್ತ ಜಾಗದಲ್ಲಿ ಪುನರ್ವಸತಿ ಮಾಡಲಾಗುವುದು ಎಂದು ಹೇಳಿದರು.

ಅಲ್ಲದೇ, ಹೆಚ್ಚು ಮಳೆ ಬಂದಿದ್ದರಿಂದ ದುರಂತ ಆಗಿದೆ. ಪ್ಲಾಂಟೇಶನ್ ಅಥವಾ ಹೋಮ್ ಸ್ಟೇಯಂತಹ ವಿಚಾರಗಳು ದುರಂತಕ್ಕೆ ಕಾರಣವಲ್ಲ ಎಂದು ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Madikeri MLA KG Bopaiah opposed the statements of geologists. Bopaiah said No tragedies have occurred near stay home. Too much disaster occurred where the poor people lived.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X