Madikeri: ಪತ್ನಿಗೆ ಪರ ಪುರುಷನ ಕರೆ: ಕೋಪಗೊಂಡ ಪತಿ ಮಾಡಿದ್ದೇನು ಗೊತ್ತಾ?

ಮಡಿಕೇರಿ ಜುಲೈ 21: ಪರ ಪುರುಷನೊಂದಿಗೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಪತ್ನಿಯನ್ನು ಪತಿ ಗುಂಡಿಕ್ಕಿ ಕೊಂದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 40 ವರ್ಷದ ಶಿಲ್ಪಾ ಸೀತಮ್ಮ ಮೃತ ದುರ್ದೈವಿ, 45 ವರ್ಷದ ನಾಯಕಂಡ ಬೋಪಣ್ಣ ಗುಂಡಿಕ್ಕಿ ಕೊಂದ ಆರೋಪಿ. ತನ್ನ ಪತ್ನಿ ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದುದ್ದಕ್ಕೆ ಆಕ್ಷೇಪಿಸಿದ್ದಕ್ಕೆ ಗಂಡ ಹೆಮಡತಿ ನಡುವೆ ಜಗಳ ಬಂದಿದೆ. ಇದರಿಂದ ಕೋಪಗೊಂಡ ಪತಿ ಬೋಪಣ್ಣ ತನ್ನ ಪತ್ನಿ ಶಿಲ್ಪಾಗೆ ಗುಂಡಿಕ್ಕಿ ಕೊಂದು ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.

Madikeri Pro man call to wife wife was shot dead by her husband

ಶಿಲ್ಪಾ 2012 ರಿಂದ 2017ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿದ್ದರು. ಅಲ್ಲದೆ ಅವರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆಯಾಗಿದ್ದರು. ಶಿಲ್ಪಾ ಶುಕ್ರವಾರ ರಾತ್ರಿ ಬೇರೆಯವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು.

ಫೋನ್‌ನಲ್ಲಿ ಪತ್ನಿ ಶಿಲ್ಪ ಇಂದು ಬೆಳಗ್ಗೆ ಕೂಡ ಮಾತನಾಡಿದ್ದರು. ಇದಕ್ಕೆ ಪತ್ನಿಯಿಂದ ಮತ್ತೆ ಆಕ್ಷೇಪವಿತ್ತು. ಇದರಿಂದಾಗಿ ಇಂದು ಬೆಳಗ್ಗೆ ಪತ್ತೆ ಇಬ್ಬರ ನಡುವೆ ಜಗಳವಾಗಿತ್ತು. ಈ ಜಗಳ ವಿಕೋಪಕ್ಕೆ ಇರುಗಿ ಪತಿ ಪತ್ನಿಗೆ ಗುಂಡಿಕ್ಕಿ ಕೊಂದಿದ್ದಾನೆ. ಹತ್ಯೆ ಮಾಡಿ ಪೊಲೀಸರಿಗೆ ತಾನೇ ಶರಣಾಗಿದ್ದಾನೆ.

ಬೋಪಣ್ಣ ವಿರಾಜಪೇಟೆ ತಾಲೂಕಿನ ಅರ್ಜಿ ಗ್ರಾಮದಲ್ಲಿ ಸರ್ವಿಸ್ ಸ್ಟೇಷನ್ ಹಾಗೂ ಕಾಫಿ ತೋಟದ ಮಾಲೀಕನಾಗಿದ್ದಾರೆ. ಇವರು ಹದಿನೇಳು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಪರಸ್ಪರ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ಶುಕ್ರವಾರ ರಾತ್ರಿ ಗಲಾಟೆ ದೊಡ್ಡದಾಗಿ ನಡೆದಿತ್ತು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+