ಕೊನೆಗೂ ಕೊಡಗು ಬಾಲಕಿ ಕೈ ಸೇರಿದ ಅಮ್ಮನ ನೆನಪಿನ ಮೊಬೈಲ್!

ಮಡಿಕೇರಿ, ಆಗಸ್ಟ್ 19; ಕೊಡಗು ಜಿಲ್ಲೆಯ ಕುಶಾಲನಗರದ ಪುಟ್ಟ ಬಾಲಕಿ ಹೃತಿಕ್ಷ ಪ್ರಾರ್ಥನೆ ಫಲಿಸಿದೆ. ಕೋವಿಡ್‌ನಿಂದ ಮೃತಪಟ್ಟ ತಾಯಿಯ ನೆನಪು ಇರುವ ಮೊಬೈಲ್ ಸುಮಾರು 4 ತಿಂಗಳ ಬಳಿಕ ಆಕೆಯ ಕೈ ಸೇರಿದೆ.

ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಹೃತಿಕ್ಷ ತಾಯಿ ಮೇ 16ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಆದರೆ ತಾಯಿಯ ಜೊತೆಗಿದ್ದ ಮೊಬೈಲ್ ವಾಪಸ್ ಸಿಕ್ಕಿರಲಿಲ್ಲ. ತಾಯಿಯ ನೆನಪು ಇರುವ ಮೊಬೈಲ್ ಹುಡುಕಿಕೊಡಿ ಎಂದು ಬಾಲಕಿ ಮನವಿ ಮಾಡಿದ್ದ ಮನವಿಯ ವಿಡಿಯೋ ವೈರಲ್ ಆಗಿತ್ತು.

"ನನ್ನ ಜೀವನದ ಅಮೂಲ್ಯ ಜೀವವಾಗಿದ್ದ ತಾಯಿ ಹೋಗಿಬಿಟ್ಟರು. ಅವರ ನನ್ನ ನೆನಪಾಗಿ ಇರುವುದು ಅಮೂಲ್ಯ ಫೋಟೋಗಳು. ಆ ಮೊಬೈಲ್‌ ಕಳೆದು ಹೋಗಿದೆ. ದಯವಿಟ್ಟು ಮೊಬೈಲ್ ಕೊಡಿಸಿಕೊಡಿ" ಎಂದು ಜಿಲ್ಲಾ ಪೊಲೀಸರು ಸೇರಿದಂತೆ ಎಲ್ಲರಿಗೂ ಮನವಿ ಮಾಡಿದ್ದಳು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Kushalnagar Child Get Her Mother Mobile After 4 Months

ಮೊಬೈಲ್ ಹುಡುಕಿ ಕೊಡಿ ಎಂದು ಬಾಲಕಿ ಕೊಡಗು ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಮಡಿಕೇರಿ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗೆ ಪತ್ರವನ್ನು ಬರೆದಿದ್ದಳು. ಯುವ ಕಾಂಗ್ರೆಸ್ ಕಾರ್ಯಕರ್ತರು ಬಾಲಕಿಗೆ ಹೊಸ ಮೊಬೈಲ್ ಕೊಡಿಸಿದ್ದರು. ಮೊಬೈಲ್ ಕಳೆದು ಹೋಗಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.

ಈಗ ಮಡಿಕೇರಿ ನಗರ ಠಾಣೆಯಿಂದ ಬಂದ ಫೋನ್ ಕರೆ ಬಾಲಕಿ ಹೃತಿಕ್ಷಳಲ್ಲಿ ಹೊಸ ಸಂಚಲನ ಮೂಡಿಸಿದೆ. ಮೊಬೈಲ್ ಸಿಕ್ಕಿದೆ ಠಾಣೆಗೆ ಬಂದು ಪಡೆದುಕೊಳ್ಳುವಂತೆ ಪೊಲೀಸರು ಕರೆ ಮಾಡಿ ತಿಳಿಸಿದ್ದರು. ಮಾವ ಟಿ. ಕೆ. ಸಂತೋಷ್ ಜೊತೆ ಗುರುವಾರ ಬಾಲಕಿ ಠಾಣೆಗೆ ತೆರಳಿದ್ದಳು.

ಮಡಿಕೇರಿ ಕೋವಿಡ್ ಆಸ್ಪತ್ರೆ ಗೋದಾಮಿನಲ್ಲಿ ಮೊಬೈಲ್ ಸಿಕ್ಕಿದ್ದು, ಆಸ್ಪತ್ರೆಯ ಸಿಬ್ಬಂದಿ ಅದನ್ನು ಮಡಿಕೇರಿ ನಗರ ಠಾಣೆಗೆ ನೀಡಿದ್ದರು. ಗುರುವಾರ ಬಾಲಕಿ ಹೃತಿಕ್ಷ ಮೊಬೈಲ್ ಪರಿಶೀಲಿಸಿ ತನ್ನ ತಾಯಿಯದ್ದು ಎಂದು ಖಚಿತಪಡಿಸಿದಳು. ಅದರಲ್ಲಿ ತಾಯಿಯ ಜೊತೆ ತೆಗೆಸಿಕೊಂಡಿದ್ದ ಫೋಟೋಗಳಿದ್ದು, ಅವನ್ನು ನೋಡಿ ಸಂತಸಪಟ್ಟಳು.

ಕೋವಿಡ್‌ನಿಂದ ಮೃತಪಟ್ಟ ಅಮ್ಮನ ಫೋಟೋ ನೋಡಿ ಬಾಲಕಿ ಹೃತಿಕ್ಷ ಸಂತಸಪಟ್ಟಿದ್ದು ನೋಡಿ ಪೊಲೀಸರು, ಠಾಣೆಯಲ್ಲಿ ಸೇರಿದ್ದದರು ಕ್ಷಣಕಾಲ ಮೌನಕ್ಕೆ ಶರಣಾದರು. ಮಹಾಮಾರಿಗೆ ತಾಯಿ ಬಲಿಯಾದರೂ ಮೊಬೈಲ್ ಮೂಲಕ ಆಕೆಯ ನೆನಪನ್ನು ಬಾಲಕಿ ಹೃತಿಕ್ಷ ಜೀವಂತವಾಗಿ ಇಟ್ಟುಕೊಂಡಿದ್ದಾಳೆ.

ಮೊಬೈಲ್ ಕಳೆದುಕೊಂಡಾಗ ವಿಡಿಯೋ ಮಾಡಿದ್ದ ಹೃತಿಕ್ಷ, "ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ" ಎಂದು ಮನವಿ ಮಾಡಿದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+