ಡಿ.13ರಂದು ಕೊಡಗಿನಲ್ಲಿ ಹುತ್ತರಿ ಹಬ್ಬ ಆಚರಣೆ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಡಿಸೆಂಬರ್. 08 : ಕೊಡಗಿನ ಸುಗ್ಗಿಹಬ್ಬ ಎಂದೇ ಕರೆಯಲ್ಪಡುವ ಹುತ್ತರಿ ಹಬ್ಬವು ಡಿಸೆಂಬರ್ 13 ರಂದು ಸಡಗರ ಸಂಭ್ರಮದಿಂದ ಸಂಪ್ರದಾಯಬದ್ಧವಾಗಿ ನಡೆಯಲಿದೆ.

ಈಗಾಗಲೇ ಕೊಡಗಿನ ಕುಲದೈವ ಕಕ್ಕಬೆ ಪಾಡಿ ಶ್ರೀ ಇಗ್ಗುತಪ್ಪ ದೇವಳದಲ್ಲಿ ಪಾರಂಪರಿಕ ಜೋತಿಷ್ಯರಾದ ಅಮ್ಮಂಗೇರಿ ಕಣಿಯರ ಶಶಿಕುಮಾರ್ ಅವರು, ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಕಲಾಡ್ಚ ಹಬ್ಬ, ಹುತ್ತರಿ ಹಬ್ಬದ ಶುಭ ದಿನ, ಶುಭ ಗಳಿಗೆಯನ್ನು ನಿಗದಿಪಡಿಸಿದ್ದಾರೆ.

ಅದರಂತೆ ಡಿ. 12ರ ಸೋಮವಾರ ಪಾಡಿ ಶ್ರೀ ಇಗ್ಗುತಪ್ಪ ದೇವಳದಲ್ಲಿ ಹುತ್ತರಿ ಕಲಾಡ್ಚ ಹಬ್ಬ, 13ರ ಮಂಗಳವಾರ ಸಂಜೆ 6.35ಕ್ಕೆ ದೇವಳದಲ್ಲಿ (ದೇವ ಪೋದ್) ನೆರೆ ಕಟ್ಟುವುದು. 7.35ಕ್ಕೆ ಕದಿರು ತೆಗೆಯುವುದು ಮತ್ತು 8.35ಕ್ಕೆ ಪ್ರಸಾದ ಭೋಜನಕ್ಕೆ ಪ್ರಶಸ್ತ ಸಮಯವೆಂದು ತೀರ್ಮಾನಿಸಲಾಗಿದೆ.

Kodavas to celebrate Huttari festival at Kodagu on December 13

ಜನತೆ (ನಾಡ್ ಪೋದ್) ಸಂಜೆ 7.05ಕ್ಕೆ ನೆರೆ ಕಟ್ಟುವದು, 8.05ಕ್ಕೆ ಕದಿರು ತೆಗೆಯುವದು ಮತ್ತು 9.05ಕ್ಕೆ ಭೋಜನವನ್ನು ಮಾಡಬಹುದಾಗಿದೆ. ಹುತ್ತರಿ ಹಬ್ಬದ ಪ್ರಯುಕ್ತ ಪಾಡಿ ಶ್ರೀ ಇಗ್ಗುತಪ್ಪ ದೇವರ ಆದಿ ಸ್ಥಳ ಮಲ್ಮದಲ್ಲಿ ದೇಶ ಕಟ್ಟು ವಿಧಿಸಲಾಗಿದ್ದು.

ಡಿ. 12 ರಂದು ದೇವಳದಲ್ಲಿ ಕಲಾಡ್ಚ ಹಬ್ಬ ನಡೆದು ಎತ್ತುಪೋರಾಟ, ದುಡಿಕೊಟ್ಟ್ ಪಾಟ್ ಮತ್ತು ದೇವರ ಮೂರ್ತಿಯೊಂದಿಗೆ ಆದಿ ಸ್ಥಳ ಮಲ್ಮಕ್ಕೆ ತೆರಳಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

ನಂತರ ಕಟ್ಟು ಸಡಿಲಿಸಲಾಗುವದು. ಈ ಸಮಯದಲ್ಲಿ ಹಸಿರು ಮರ ಕಡಿಯುವದು, ರಕ್ತಪಾತ, ಪ್ರಾಣಿ ಹಿಂಸೆ, ಮಾಂಸ ಸೇವನೆ ಹಾಗೂ ಸಭೆ ಸಮಾರಂಭಗಳನ್ನು ನಡೆಸುವದನ್ನು ನಿಷೇಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kodavas to celebrate Huttari festival at Kodagu on December 13, 2016. Huttari is festival of harvest and getting the harvested paddy home.
Please Wait while comments are loading...