ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕೊಡಗಿನ ಯುವತಿಯರು: ಪರಿಚಯ ಇಲ್ಲಿದೆ
ಮಡಿಕೇರಿ, ಜನವರಿ 24: ದೆಹಲಿಯ ಕರ್ತವ್ಯ ಪಥದಲ್ಲಿ ಜ.26ರಂದು ನಡೆಯಲಿರು ಐತಿಹಾಸಿಕ ಪಥಸಂಚಲದಲ್ಲಿ ಕೊಡಗಿನ ಮೂವರು ಯುವತಿಯರು ಪಾಲ್ಗೊಳ್ಳುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷವೂ ಜಿಲ್ಲೆಯ ಕೊಡುಗೆ ಇದ್ದೇ ಇರುತ್ತದೆ. ಈ ಬಾರಿ ಕ್ಯಾಪ್ಟನ್ ಶರಣ್ಯ ರಾವ್, ಪುಣ್ಯ ಪೊನ್ನಮ್ಮ ಮತ್ತು ಬಾಳಾಡಿ ಶ್ರೇಯ ಭಾಗವಹಿಸುತ್ತಿದ್ದಾರೆ.
ಹಾಗೆನೋಡಿದರೆ ಸೇನೆ ಸೇರಬೇಕೆನ್ನುವ ವಿದ್ಯಾರ್ಥಿಗಳಿಗೆ ಹಾಗೂ ಸೇನೆಯ ವಿವಿಧ ದಳಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಒಮ್ಮೆಯಾದರೂ ದೆಹಲಿಯ ಹಿಂದಿನ ರಾಜ್ ಪಥ್ ಈಗಿನ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವದ ವೇಳೆ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಲೇ ಬೇಕೆಂಬ ಬಯಕೆ ಇದ್ದೇ ಇರುತ್ತದೆ. ಅದು ಕೆಲವರಿಗೆ ಮಾತ್ರ ಆ ಅದೃಷ್ಟ ದೊರೆಯುತ್ತದೆ. ಈ ಬಾರಿ ಕೊಡಗಿನ ಮೂವರು ಯುವತಿಯರಿಗೆ ಅಂಥದೊಂದು ಅವಕಾಶ ದೊರೆಯುತ್ತಿರುವುದು ಎಲ್ಲರೂ ಖುಷಿಪಡುವ ವಿಷಯವಾಗಿದೆ.

ಮೂವರು ಯುವತಿಯರ ಪೈಕಿ ಕ್ಯಾಪ್ಟನ್ ಶರಣ್ಯ ರಾವ್ ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭೂ ಸೇನೆಯ ಅಗ್ನಿವೀರರು ತಂಡವನ್ನು ಮುನ್ನಡೆಸಲಿದ್ದಾಳೆ. ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೇನೆಯ ಮೂರು ವಿಭಾಗಗಳು ಒಟ್ಟಿಗೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿವೆ. ಶರಣ್ಯ ರಾವ್ ರವರು ಮೂಲತಃ ವಿರಾಜಪೇಟೆಯ ಕುಕ್ಕಲೂರು ಗ್ರಾಮದ ನಿವಾಸಿಯಾದ ಬಿಟ್ಟಂಗಾಲದ ಗಾಲ್ಫ್ ಕ್ಲಬ್ ನ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ರಾವ್ ಹಾಗೂ ಎಸ್.ಎಂ.ಎಸ್ ವಿದ್ಯಾ ಸಂಸ್ಥೆಯ ಶಿಕ್ಷಕಿಯಾದ ಮೈತ್ರಿ ರಾವ್ ರವರ ಪ್ರಥಮ ಪುತ್ರಿ ಆಗಿದ್ದಾಳೆ.
ಭೂ ಸೇನೆಯ ತಂಡಕ್ಕೆ ಕ್ಯಾಪ್ಟನ್
ಇವರು ವಿರಾಜಪೇಟೆಯ ಸೈoಟ್ ಅನ್ಸ್ ಶಾಲೆಯಲ್ಲಿ ಎಸ್ ಎಲ್ ಸಿ ವರೆಗೆ ವ್ಯಾಸಂಗ ಮಾಡಿ ನಂತರ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರೈಸಿ, ಸಿ ಐ.ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಗಳಿಸಿ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಂ.ಎಸ್ ಡಬ್ಲ್ಯೂ ವ್ಯಾಸಂಗ ಮಾಡಿರುತ್ತಾರೆ. ಕಳೆದ ಮೂರು ವರ್ಷಗಳ ಹಿಂದೆ ಸೇನೆಗೆ ಆಯ್ಕೆಗೊಂಡ ಇವರು ಪ್ರಸ್ತುತ ಸೇನೆಯ (608) ಇ.ಎಂ.ಇ ವಿಭಾಗದ ಕಾರ್ಗಿಲ್ನಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರಧಾನ ಮಂತ್ರಿಗಳು ಘೋಷಿಸಿದ "ನಾರಿ ಶಕ್ತಿ" ವಿಷಯದ ಭೂ ಸೇನೆಯ ತಂಡವನ್ನು ಮುನ್ನಡೆಸಲಿದ್ದಾರೆ.
ಪುಣ್ಯ ಪೊನ್ನಮ್ಮ ಕಮಾಂಡರ್
ಇನ್ನೊಬ್ಬರು ಮಡಿಕೇರಿಯ ಪುಣ್ಯ ಪೊನ್ನಮ್ಮ ಅವರು ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪೆರೆಡ್ ನಲ್ಲಿ ಎನ್.ಸಿ.ಸಿ.ಯ ಅಖಿಲ ಭಾರತ ಯುವತಿಯರ ವಿಭಾಗದ ಕಮಾಂಡರ್ ಆಗಿ ಪಾಲ್ಗೊಳ್ಳುತ್ತಿದ್ದಾರೆ. ಇವರು ಮಡಿಕೇರಿಯ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಅನೂಪ್ ಮಾದಪ್ಪ ಮತ್ತು ಫೀಲ್ಡ್ ಕಾರ್ಯಪ್ಪ ಕಾಲೇಜು ಉಪನ್ಯಾಸಕಿ ವಿನಿತ ದೇಚಮ್ಮ ದಂಪತಿಯ ಪುತ್ರಿಯಾಗಿದ್ದಾರೆ. ಎನ್ಸಿಸಿ ಕೆಡೆಟ್ ಆಗಿ ಹಲವಾರು ಕ್ಯಾಂಪ್ ಗಳಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆ ತೋರಿದ್ದಾಳೆ. ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಮೂರನೇ ವರ್ಷದ ಲಾ ಶಿಕ್ಷಣ ಪಡೆಯುತ್ತಿದ್ದಾರೆ.

ಪಥಸಂಚಲದಲ್ಲಿ ಶ್ರೇಯಾ ಭಾಗಿ
ಮತ್ತೊಬ್ಬರು ಶ್ರೇಯಾ ರುವುದಕ್ಕೆ ಮನೆಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಜತೆಗೆ ಜಿಲ್ಲೆಗೆ ಹೆಮ್ಮೆಯಾಗಿದೆ.ಅವರು ಕೂಡ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲಿದ್ದಾರೆ. ಇವರು ಮಡಿಕೇರಿ ತಾಲೂಕಿನ ಅರುವತೊಕ್ಲು ಗ್ರಾಮದ ಬಾಳಾಡಿ ಮನೆ ಪ್ರತಾಪ್ ಮತ್ತು ಚಂದ್ರಿಕ ದಂಪತಿ ಪುತ್ರಿಯಾಗಿದ್ದಾರೆ. ಸದ್ಯ ಶ್ರೇಯ ಅವರು ಮೈಸೂರಿನ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಮೂವರು ಯುವತಿಯರು ಪಥಸಂಚಲದಲ್ಲಿ ಭಾಗವಹಿಸುತ್ತಿ












Click it and Unblock the Notifications