ನಿರಾಳವಾಗಿದ್ದ ಕೊಡಗಿಗೆ ಮತ್ತೆ ವಕ್ಕರಿಸಿತಲ್ಲಾ ಕೊರೊನಾ

ಮಡಿಕೇರಿ, ಮೇ 18: ಇಡೀ ದೇಶದೆಲ್ಲೆಡೆ ಕೊರೊನಾ ಸೋಂಕು ಆವರಿಸಿದಾಗ ಈ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೇವಲ ಒಂದು ಸೋಂಕು ಪ್ರಕರಣ ಪತ್ತೆ ಆಗಿತ್ತು.

ಅದೂ ಕೊಲ್ಲಿ ರಾಷ್ಟ್ರದಿಂದ ಬಂದ ವ್ಯಕ್ತಿಯೊಬ್ಬರಿಂದ ಕೊರೊನಾ ತಗುಲಿದ್ದು, ಅವರೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್ಸಾಗಿದ್ದರು. ಆ ನಂತರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದ ಜಿಲ್ಲಾಡಳಿತ, ಕೊರೊನಾ ಜಿಲ್ಲೆಗೆ ತಾಗದಂತೆ ಎಚ್ಚರಿಕೆಯಿಂದ ನೋಡಿಕೊಂಡಿತ್ತು. ಹೀಗಾಗಿ ಜಿಲ್ಲೆ ಗ್ರೀನ್‌ ಝೋನ್ ಪಟ್ಟಿಯಲ್ಲಿ ಕಾಣಿಸಿಕೊಂಡು, ಇಲ್ಲಿನ ಜನರೂ ನೆಮ್ಮದಿಯಿಂದ ಇದ್ದರು.

Women Returned From Mumbai To Kodagu Tested Corona positive

ಆದರೆ ಸತತ ಎರಡು ತಿಂಗಳ ನಂತರ ಇದೀಗ ಕೊಡಗಿನಲ್ಲಿ ಮತ್ತೊಂದು ಸೋಂಕು ಪ್ರಕರಣ ಪತ್ತೆ ಆಗಿದೆ. ಈ ಒಂದು ಸಂಗತಿ ಜಿಲ್ಲೆಯಲ್ಲಿ ಆತಂಕವನ್ನು ಉಂಟು ಮಾಡಿದೆ. ಇತ್ತೀಚೆಗೆ ಮುಂಬೈನಿಂದ ಬಂದಿದ್ದ ಮಹಿಳೆಯೊಬ್ಬರಲ್ಲಿ ಇಂದು ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಆದರೆ ಮುಂಬೈನಿಂದ ಬಂದಿದ್ದ ಈ ಮಹಿಳೆಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಇದರಿಂದ ಇತರರಿಗೆ ಸೋಂಕು ಹರಡಿಲ್ಲ ಎನ್ನಲಾಗಿದೆ.

ಆದರೂ ಕಳೆದ ಎರಡು ತಿಂಗಳಿನಿಂದಲೂ ಗ್ರೀನ್‌ ಜೋನ್‌ ನಲ್ಲಿದ್ದ ಕೊಡಗಿನ ಜನತೆಗೆ ಈ ಹೊಸ ಸೋಂಕು ಪ್ರಕರಣದಿಂದ ಆತಂಕ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+