Kodagu Meena Murder Case: ಕೊಡಗು 10ನೇ ತರಗತಿ ಪಾಸಾದ ವಿದ್ಯಾರ್ಥಿನಿ ತಲೆ ಕಡಿದು ಹತ್ಯೆ ಮಾಡಿದ್ದ ಆರೋಪಿ ಬಂಧನ
ಕೊಡಗು ಮೇ 11: ಕೊಡಗುವಿನಲ್ಲಿ 10ನೇ ತರಗತಿ ಪಾಸಾದ ವಿದ್ಯಾರ್ಥಿನಿ ತಲೆ ಕಡಿದು ಹತ್ಯೆ ಮಾಡಿದ್ದ ಆರೋಪಿ ಬಂಧಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ದಿನಾಂಕದಂದು ಬಾಲಕಿಯ ರುಂಡ ಕತ್ತರಿಸಿ ಆರೋಪಿ ಎಸ್ಕೇಪ್ ಆಗಿದ್ದನು. ಪೊಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ್ದರು.
ಸದ್ಯ ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಅಡಗಿದ್ದ ಆರೋಪಿ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆದಿದೆ ಎಂದು ಮಡಿಕೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಎಸ್ಎಸ್ಎಲ್‌ಸಿಯಲ್ಲಿ ಪಾಸಾದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ (16) ಪರೀಕ್ಷೆ ಫಲಿತಾಂಶ ದಿನವೇ ಬರ್ಬರವಾಗಿ ಹತ್ಯೆ ಆಗಿದ್ದಳು. ಆಕೆಯ ರುಂಡ ಕತ್ತರಿಸಿ ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಸೋಮವಾರಪೇಟೆ ತಾಲೂಕಿನ ಮುಟ್ಲು ಗ್ರಾಮದಲ್ಲಿ ಈ ಭೀಕರ ಘಟನೆ ಸ್ತಳೀಯರನ್ನು ಬೆಚ್ಚಿ ಬೀಳಿಸಿದೆ. ಮೀನಾಳ ಹತ್ಯೆ ಪ್ರಕರಣ ಸಂಬಂಧ ಕೊಡಗು ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದರು. ಪರೀಕ್ಷೆ ಪಾಸಾದ ಸಂತಸದಲ್ಲಿದ್ದ ಆಕೆಯ ತಲೆಯನ್ನು ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಯಾನೆ ಪಾಪು (34) ಕತ್ತರಿಸಿ ಭೀಕರ ಹತ್ಯೆ ಮಾಡಿದ್ದನು.
ಹತ್ಯೆಗೆ ಕಾರಣವೇನು?
ಅಪ್ರಾಪ್ತ ಬಾಲಕಿ ಮೀನಾಳ ಜೊತೆ ಆರೋಪಿ ಮೊಣ್ಣಂಡ ಪ್ರಕಾಶ್ ಮದುವೆಗೆ ಮುಂದಾಗಿದ್ದನು. ಹೀಗಾಗಿ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದನು. ಆದರೆ ಬಾಲ್ಯವಿವಾಹದ ವಿಚಾರ ತಿಳಿದ ಸೋಮವಾರ ಪೇಟೆ ಪೋಲೀಸರು ಬಾಲಕಿಯ ನಿಶ್ಚಿತಾರ್ಥ ತಡೆದು ಬುದ್ದಿ ಹೇಳಿದ್ದರು. ಹೀಗಾಗಿ ಬಾಲಕಿಗೆ 18 ವರ್ಷ ಆಗುತ್ತಿದ್ದಂತೆ ಮದುವೆ ಮಾಡಲು ಎರಡು ಕುಟುಂಬಗಳು ಮುಂದಾಗಿದ್ದವು. ಬಾಲಕಿಗೆ 18 ವರ್ಷ ಆಗದ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೌನ್‌ಸಿಲಿಂಗ್ ಮಾಡಿ, ಎಂಗೇಜ್ಮೆಂಟ್ ತಡೆದಿದ್ದರು.
ಇದರಿಂದ ತೀವ್ರ ಸಿಟ್ಟಿಗೆದ್ದ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಜಗಳವಾಡಿದ್ದ. ಹತ್ಯೆಗೂ ಮುನ್ನ ಹುಡುಗಿಯ ಮನೆಗೆ ನುಗ್ಗಿದ್ದ ಪಾಪಿ ಪ್ರಕಾಶ್ ಹುಡುಗಿಯ ತಂದೆ ತಾಯಿಯೊಂದಿಗೆ ಕೂಡ ಗಲಾಟೆ ಮಾಡಿ ಅವರ ಮೇಲೆ ಕೂಡ ಹಲ್ಲೆ ನಡೆಸಿದ್ದ, ಬಳಿಕ ಬಾಲಕಿ ಮೀನಾಳನ್ನು 100 ಮೀಟರ್ ದೂರ ಬಲವಂತಾಗಿ ಮನೆಯಿಂದ ಎಳೆದೊಯ್ದು ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ. ಮಾತ್ರವಲ್ಲ ಮುಂಡವನ್ನು ಅಲ್ಲೇ ಬಿಟ್ಟು, ರುಂಡವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಬೆಚ್ಚಿಬಿದ್ದ ಕೊಡಗು
ತಂದೆ ತಾಯಿ ಮುಂದೆಯೇ ಬಾಲಕಿಯನ್ನು ಎಳೆಯೊಯ್ದು ಅಪ್ರಾಪ್ತ ಬಾಲಕಿಯ ಹತ್ಯೆ ಮಾಡಿದ್ದು, ಈ ಭೀಕರ ಘಟನೆಗೆ ಇಡೀ ಕೊಡಗು ಬೆಚ್ಚಿ ಬಿದ್ದಿದೆ. ಸ್ಥಳಕ್ಕೆ ಕೊಡಗು ಎಸ್ಪಿ ಭೇಟಿ, ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಬಾಲಕಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಪ್ರಾಪ್ತ ಬಾಲಕಿಯ ತಂದೆ ಸುಬ್ರಹ್ಮಣಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೂರ್ಲಬ್ಬಿ ಶಾಲೆಯ 10ನೇ ತರಗತಿಯ ಏಕೈಕ ವಿದ್ಯಾರ್ಥಿಯಾಗಿದ್ದ ಯು.ಎಸ್.ಮೀನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಇದರಿಂದ ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಬಂದಂತಾಗಿತ್ತು. ಪರೀಕ್ಷೆಯಲ್ಲಿ ಪಾಸ್ ಆಗಿದ್ದರಿಂದ ಮೀನ ಮಾತ್ರವಲ್ಲದೆ ಇಡೀ ಗ್ರಾಮವೇ ಖುಷಿಯಲ್ಲಿತ್ತು. ಅಷ್ಟರಲ್ಲೇ ರಾತ್ರಿ ಅವಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿ ಆಕೆಯ ತಲೆ ಕತ್ತರಿಸಿ ದೇಹವನ್ನು ಮನೆ ಬಳಿ ಎಸೆದು ಹೋಗಿದ್ದನು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications