Heavy Rain: ಇಂದಿನಿಂದ ಜುಲೈ 30ರವರೆಗೆ ಈ ಹೆದ್ದಾರಿಯಲ್ಲಿ ವಾಹನಗಳಿಗೆ ನಿಷೇಧ, ಗಮನಿಸಿ
ಕೊಡಗು, ಜುಲೈ 01: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮುಂಗಾರು ಮತ್ತ ಚುರುಕಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಹೆದ್ದಾರಿಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವಾಹನ ಸವಾರರು ಗಮನಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟ್ ರಾಜಾ ವಾಹನ ಸಂಚಾರ ನಿಷೇಧಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಕೊಡಗು ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ, ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಜುಲೈ 1ರಿಂದ ಜುಲೈ 30 ರವರೆಗೆ ಭಾರಿ ವಾಹನಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿರ್ಬಂಧ ಹೇರಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸಾರ್ವಜನಿಕ ಪ್ರಯಾಣಿಕರ ವಾಹನಗಳ ಸಂಚಾರದಕ್ಕೆ ನಿರ್ಬಂಧ ಹೇರಿಲ್ಲ.
ನಿರಂತರ ಬಂದ ಮಳೆಗೆ ಗುಡ್ಡದ ಮಣ್ಣು ಹೆದ್ದಾರಿ ಒಂದು ಬದಿಗೆ ಕುಸಿದಿದೆ. ಅಲ್ಲದೇ ಮಳೆ ಮುಂದುವರಿದ ಪರಿಣಾಮ ಇನ್ನೂಷ್ಟು ಗುಡ್ಡ, ಮಣ್ಣು ಕುಸಿತ ಸಂಭವಿಸಬಹುದು ಎಂಬ ಕಾರಣಕ್ಕೆ ಅಗತ್ಯ ಮುಂಜಾಗೃತ ದೃಷ್ಟಿಯಿಂದ ಈ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹೆದ್ದಾರಿಯಲ್ಲಿ ನಿರ್ಬಂಧವಾದ ವಾಹನಗಳು
ಯಾವ ವಾಹನಗಳ ತೂಕವು ಬರೋಬ್ಬರಿ 18,500 ಕೆ.ಜಿ.ಗಿಂತ ಹೆಚ್ಚಿರುವ ಅಂದರೆ, ಬುಲೆಟ್ ಟ್ಯಾಂಕರ್‌ಗಳು, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್(ಮಲ್ಟಿ ಆಕ್ಸಿಲ್), ಆರ್ಟಿಕ್ಯೂಲೇಟೆಡ್ ವಾಹನಗಳು ಮತ್ತು ಮರಳು ಸಾಗಾಣಿಕೆ ವಾಹನಗಳು ಹಾಗೂ ಮರದ ದಿಮ್ಮಿ ಹೊತ್ತು ತರುವ ಭಾರೀ ಗಾತ್ರದ ವಾಹನಗಳಿಗೆ ಈ ಹೆದ್ದಾರಿಯಲ್ಲಿ ಸಂಚಾ ನಿಷೇಧಿಸಲಾಗಿದೆ.
ಇಂತಹ ದೊಡ್ಡ ವಾಹನಗಳು ಬಂದರೆ ಮಳೆಗೆ ರಸ್ತೆ ಕುಸಿಯಬಹುದು. ಇಲ್ಲವೇ ನಡು ರಸ್ತೆಯಲ್ಲಿ ವಾಹನಗಳು ಸಿಲುಕಿ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದೆಲ್ಲ ಕಾರಣದಿಂದ ಸುರಕ್ಷತೆ ದೃಷ್ಟಿಯಿಂದ ವಾಹನಗಳನ್ನು ನಿರ್ಬಂಧ ಹೇರಲಾಗಿದೆ.

ಈ ವಾಹನಗಳು ಹೆದ್ದಾರಿ ಪ್ರವೇಶಿಸಬಹುದು
ಇನ್ನೂ ಅಗತ್ಯತೆ ಪೂರೈಕೆಯ ಸಣ್ಣ ಸರಕು ವಾಹನಗಳ ಪಟ್ಟಿಗೆ ಸೇರುವ ಇಂಧನ ಪೂರೈಕೆ ವಾಹನಗಳು, ಹಾಲು ಸರಬರಾಜು, ಸರ್ಕಾರಿ ಕೆಲಸಗಳಿಗೆ ತೆರಳುವ ವಾಹನಗಳು ಹಾಗೂ ಶಾಲಾ ಕಾಲೇಜು, ಬಸ್ ಸೇರಿದದಂತೆ ಸಾರ್ವಜನಿಕ ಪ್ರಯಾಣಿಕರ ವಾಹನಗಳು ಮಾತ್ರ ಈ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಚರಿಸಬಹುದು. ಇವುಗಳಿಗೆ ನಿರ್ಬಂಧ ಪಟ್ಟಿಯಿಂದ ಹೊರಗಿಡಲಾಗಿದೆ.
ನಿಯಮ ಮೀರಿದ ಭಾರೀ ವಾಹನಗಳ ವಿರುದ್ಧ ಕ್ರಮ
ಸದ್ಯ ಸೋಮವಾರ ಆದೇಶ ಹೊರಡಿಸಿರುವ ಬೆನ್ನಲ್ಲೆ ಹೆದ್ದಾರಿಗಳಲ್ಲಿ ನಿರ್ಬಂಧ ಹೇರಿ, ದಂಡ ಕ್ರಮ ಬಗ್ಗೆ ಅಗತ್ಯ ಸೂಚನಾ ಪಲಕ ಅಳವಡಿಸುವಂತೆ ತಿಳಿಸಲಾಗಿದೆ. ಕೊಡಗು ಜಿಲ್ಲೆಯಿಂದ ತೆರಳುವ ವಾಹನಗಳು ಹೋಗುವ ರಾಷ್ಟ್ರೀಯ ಹೆದ್ದಾರಿ 275 ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‌ಪೋಸ್ಟ್ ನಿರ್ಮಿಸುವಂತೆ ತಿಳಿಸಲಾಗಿದೆ.
ಅಗತ್ಯ ಎಚ್ಚರಿಕೆ ವಹಿಸಬೇಕು. ನಿಗಾ ಡಿವು ಜೊತೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ನಿಯಮ ಉಲ್ಲಂಘಿಸುವವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಭಾರಿ ಮಳೆ ಮುಂದುವರಿಯುವ ಸಾಧ್ಯತೆ
ಕೆಲವು ದಿವಸಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನದಿಗಳು ತುಂಬಿ ಹರಿಯುತ್ತಿವೆ. ಇಲ್ಲಿನ ಜಲಪಾತಗಳು ಭೊರ್ಗರೆಯುತ್ತಿವೆ. ಭಾನುವಾರ 131ಮಿಲಿ ಮೀಟರ್ ಮಳೆ ಆಗಿದೆ. ಮುಂದಿನ ಸುಮಾರು ಎಂಟರಿಂದ ಹತ್ತು ದಿನ ಈ ಭಾಗದಲ್ಲಿ ಅತ್ಯಧಿಕ ಮಳೆ ಆಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.












Click it and Unblock the Notifications