ಸೋಮವಾರಪೇಟೆ; ದುಷ್ಕರ್ಮಿಗಳ ಕೃತ್ಯಕ್ಕೆ ಆಹುತಿಯಾದ ನೂರಾರು ಎಕರೆ ಅರಣ್ಯ
ಮಡಿಕೇರಿ, ಏಪ್ರಿಲ್ 01: ಮಡಿಕೇರಿಯ ಸೋಮವಾರಪೇಟೆ ಸಮೀಪದ ಕಾರೆಕೋಪ್ಪದ ಬಳಿ ಯಡವನಾಡು ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ದುಷ್ಕರ್ಮಿಗಳು ಬೆಂಕಿ ಹತ್ತಿಸಿದ್ದು, ಇವರ ದುಷ್ಕೃತ್ಯಕ್ಕೆ ನೂರಾರು ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ. ಬೆಂಕಿ ನಂದಿಸಲು ಪ್ರಯತ್ನಿಸಿದರೂ ಒಂದು ಕಡೆಯಿಂದ ಬೆಂಕಿ ನಂದಿಸಿದರೆ ಮತ್ತೊಂದು ಕಡೆಯಿಂದ ಬೆಂಕಿ ಹೊತ್ತಿಕೊಂಡಿದ್ದರಿಂದ ಬೆಂಕಿ ಆರಿಸಲಾಗದೇ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡುವಂತಾಯಿತು.

ಕಾರಿಕೊಪ್ಪದಿಂದ ಯಾಡವನಾಡುವರೆಗೆ ಬೆಂಕಿ ವ್ಯಾಪಿಸಿತ್ತು. ಬೆಂಕಿ ನಂದಿಸಲು ಸೋಮವಾರಪೇಟೆ, ಕುಶಾಲನಗರ, ಮಾಡಿಕೇರಿಗಳಿಂದ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಶಮಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.












Click it and Unblock the Notifications