ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ

ಬೆಂಗಳೂರು, ಆಗಸ್ಟ್ 18: ಕೊಡಗಿನಲ್ಲಿ ಮಹಾಮಳೆ ಮುಂದುವರೆದಿರುವ ಪರಿಣಾಮ ಅಲ್ಲಿರುವ ಸೇನಾಸಿಬ್ಬಂದಿಯಿಂದ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಮತ್ತಷ್ಟು ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ 70 ಸೇನಾ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ವಾಯುಸೇನಾ ಅಧಿಕಾರಿಗಳಿಂದ ಸಾವಿರಕ್ಕೂ ಹೆಚ್ಚಿನ ಸೇನಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ, ಇನ್ನೂ ಹೆಚ್ಚಿನ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ಎಚ್ಡಿಕೆ ಪತ್ರ ಬರೆದಿದ್ದಾರೆ.

ಕೊಡಗಿನಲ್ಲಿ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ, ಕೊಡಗಿನಲ್ಲಿ ನೆರೆ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆ ಕೈಗೊಳ್ಳುವ ಹಿನ್ನೆಲೆ, ಭಾರತೀಯ ಸೇನೆಯ ಹೆಲಿಕ್ಯಾಪ್ಟರ್‌ಗಳನ್ನು ಕಳುಹಿಸುವಂತೆ ಕೂಡ ಮನವಿ ಮಾಡಿದ್ದಾರೆ.

HDK seeks additional military aid to Coorg rescue operation

ಮಳೆ ಹಾನಿ ಪರಿಸ್ಥಿತಿ ಕಾರ್ಯ ವೀಕ್ಷಿಸಲು ಐಎಎಫ್‌ ಹೆಲಿಕ್ಯಾಪ್ಟರ್‌ ನೀಡುವಂತೆ ದೂರವಾಣಿ ಮೂಲಕ ಮ,ನವಿ ಮಾಡಿದ್ದು, ಬಳಿಕ ಪತ್ರ ರವಾನಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ.ಮುಂದುವರೆದಿದೆ.

ಕೊಡಗು ಜಿಲ್ಲೆಗೆ ಇಂದು(ಆ.18)ರಂದು ಕುಮಾರಸ್ವಾಮಿ ಭೇಟಿ. ನೀಡಲಿದ್ದಾರೆ. 600 ಕ್ಕೂ ಹೆಚ್ಚು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ವರ್ಷಧಾರೆಯಿಂದ 200ಕ್ಕೂ ಹೆಚ್ಚು ಮಂದಿ‌ ಕಣ್ಮರೆಯಾಗಿದ್ದಾರೆ, 70ಯೋಧರಿಂದ ನಡೆಯುತ್ತಿದೆ ರಕ್ಷಣಾ ಕಾರ್ಯ ನಡೆಯುತ್ತಿದೆ. 1500ಮಂದಿಗೆ ಗಂಜಿ‌ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.

ಮಡಿಕೇರಿ ಗಂಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಟೀ, ಬಿಸ್ಕೆಟ್ , ಬ್ರೆಡ್ ವಿತರಣೆ ಮಾಡಲಾಗುತ್ತಿದೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಸಾ ರಾ ಮಹೇಶ್ ನೇತೃತ್ವದದಲ್ಲಿ ಸಭೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+