ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು: ನಿಗೂಢ ಶಬ್ದಕ್ಕೆ ಕಾರಣ ಹುಡುಕಿದ್ದಾರೆ ವಿಜ್ಞಾನಿಗಳು

By Manjunatha
|
Google Oneindia Kannada News

Recommended Video

Kodagu Floods : ಕೊಡಗಿನಲ್ಲಿ ಭೂಮಿಯಡಿಯಿಂದ ಬಂದ ನಿಗೂಢ ಶಬ್ದಕ್ಕೆ ವಿಜ್ಞಾನಿಗಳು ಕೊಟ್ಟ ಕಾರಣ?

ಮಡಿಕೇರಿ, ಆಗಸ್ಟ್ 29: ಮಳೆ ಅಬ್ಬರಿಸಿ ಆರ್ಭಟಿಸಿರುವ ಕೊಡಗಿನಲ್ಲಿ ಈಗ ಅಲ್ಲಲ್ಲಿ ಭೂಮಿ ಅಡಿಯಿಂದ ಶಬ್ದ ಕೇಳಿ ಬರುತ್ತಿರುವುದು ಜನರಲ್ಲಿ ಆತಂಕ ತಂದಿತ್ತು. ಇದು ಭೂಕಂಪನವೋ ಎಂಬ ಅನುಮಾನ ಮೂಡಿತ್ತು. ಇದರ ಬಗ್ಗೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

ಮಡಿಕೇರಿಯ ಜವಾಹರ್ ವಿದ್ಯಾಲಯದಲ್ಲಿ ಆಗಸ್ಟ್‌ 23ರಂದೇ ಭೂಮಿಯ ಕಂಪನ ಮಾಪನ ಮಾಡುವ ಸೆಸ್ಮೋಗ್ರಾಫ್ ಯಂತ್ರವನ್ನು ಗಣಿ ಮತ್ತು ಭೂವಿಜ್ಞಾನ ತಜ್ಞರು ಅಳವಡಿಸಿದ್ದರು.

ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!

ಕೊಡಗಿನಲ್ಲಿ ಭಾರಿ ಮಳೆ ಆಗುತ್ತಿದ್ದ ಸಮಯ ಕೂಡ ಕೆಲವು ಪ್ರದೇಶಗಳಲ್ಲಿ ಭಾರಿ ಸದ್ದಾದ ಬಗ್ಗೆ ವರದಿಯಾಗಿದ್ದವು. ಅಪಾರ ಭೂಕುಸಿತ ಕೂಡ ಉಂಟಾಗಿತ್ತು. ಹಾಗಾಗಿ ಇದು ಭೂಕಂಪನದ ಪರಿಣಾಮ ಎನ್ನಲಾಗಿತ್ತು. ಆದರೆ ಇದನ್ನು ತಜ್ಞರು ತಳ್ಳಿಹಾಕಿದ್ದಾರೆ.

Geologists finding reasons for mysterious sounds in Kodagu

ಚಿತ್ರಗಳು : ಮಳೆ, ಗುಡ್ಡ ಕುಸಿತ, ಅಪಾರ ನಷ್ಟದ ಬಳಿಕ ಕೊಡಗುಚಿತ್ರಗಳು : ಮಳೆ, ಗುಡ್ಡ ಕುಸಿತ, ಅಪಾರ ನಷ್ಟದ ಬಳಿಕ ಕೊಡಗು

ಕೊಪ್ಪ ತಾಲ್ಲೂಕಿನ ಕೆಲ ಗ್ರಾಮಗಳ ಬಳಿ ಭಾರಿ ಸದ್ದು ಕೇಳಿ ಬಂದ ವರದಿಯಾಗಿತ್ತು. ಅಲ್ಲಿಗೂ ತೆರಳಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಇದು ಅತಿಯಾದ ಮಳೆಯಾದಾಗ ಕೇಳಿ ಬರುವ ಶಬ್ದ ಎಂದು ಹೇಳಿದ್ದಾರೆ.

Geologists finding reasons for mysterious sounds in Kodagu

ಅತಿಯಾದ ಮಳೆಯಾದಾಗ ಅಂತರ್ಜಲ ಹೆಚ್ಚುಕೊಂಡು ಬಂಡೆಗಳ ನಡುವೆ ಹರಿಯಾವ ಈ ರೀತಿಯ ಸದ್ದಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ರೀತಿಯ ಸದ್ದಾಗಲು 2-3 ರೀತಿಯ ಕಾರಣಗಳು ಇರುತ್ತವೆ ಪೂರ್ಣ ಪರಿಶೀಲನೆ ನಡೆಸಿದ ಬಳಿಕ ಕಾರಣ ಗೊತ್ತಾಗುತ್ತದೆ ಎಂದಿದ್ದಾರೆ.

English summary
In some parts of flood affected Kodagu some mysterious loud sound coming from earth. Geologists investigating the reason behind the sounds. they already put a Seismograph to measure the earth movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X