ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲೆಗೆ ಭೇಟಿ

ಬೆಂಗಳೂರು, ಆಗಸ್ಟ್ 23: ಕೊಡಗು ಜಿಲ್ಲೆಯಲ್ಲಿ ಭಾರಿ ಪ್ರವಾಹ ಹಿನ್ನೆಲೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 24ರಂದು ಶುಕ್ರವಾರ ಕೊಡಗಿಗೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ9ಗಂಟೆಗೆ ಹಾರಂಗಿ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಬಳಿಕತೀವ್ರ ಮಳೆಹಾನಿಗೊಳಗಾದ ಪ್ರದೇಶಗಳಾದ ಕುಶಾಲನಗರ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.15ಕ್ಕೆ ಮಾದಾಪುರದ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. 11.15ಕ್ಕೆ ನಗರದಲ್ಲಿರುವ ಮೈತ್ರಿ ಭವನಕ್ಕೆ ಭೇಟಿ ನೀಡಿ, ಬಳಿಕ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರಾವಳಿ, ಕೊಡಗು ಭಾಗದಲ್ಲಿ ಕಳೆದ ಎರಡು ವಾರಗಳಿಂದ ಸುರಿದ ಭಾರಿ ಮಳೆಗೆ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ.ಸಾವಿರಾರು ಎಕರೆ ಜಮೀನು ನಾಶವಾಗಿದೆ, ಶನರು ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ವಾಸಿಸುವಂತಾಗಿದೆ. ಇದೀಗ ಈ ಪ್ರವಾಹಕ್ಕೆ ಸೋಮಾಲಿ ಜೆಟ್‌ ಚಂಡಮಾರುತವೇ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Defence minister Nirmala Sitharaman to visit Kodagu

ಈ ಪ್ರದೇಶಗಳು ಮೊದಲಿನಂತಾಗಲು ವರ್ಷಗಳೇ ತಗುಲಬಹುದು ಎಂದು ಅಂದಾಜಿಸಲಾಗಿದೆ, ಸಾವಿರಾರು ಕಾಫಿ ಪ್ರದೇಶಗಳು ಕೂಡ ಪ್ರವಾಹಕ್ಕೆ ಆಹುತಯಾಗಿದೆ, ನೂರಾರು ಮನೆಗಳು ಧರೆಗುರುಳಿದೆ, ಅಲ್ಲಿನ ಜನತೆಗೆ ರೋಗ ರುಜಿನ ಭೀತಿಯೂ ಕಾಡುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಲು ನಿರ್ಮಲಾ ಸೀತಾರಾಮನ್‌ ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+