ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಬಿರುಕು, ಡಿಸಿ ಪರಿಶೀಲನೆ

ಮಡಿಕೇರಿ, ಜುಲೈ 05 : ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕೆ ಜಾಯ್ ಅವರು ಶುಕ್ರವಾರ ರಸ್ತೆ ಬಿರುಕು ಬಿಟ್ಟಿರುವ ಪ್ರದೇಶವನ್ನು ಪರಿಶೀಲಿಸಿದರು. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ಮಂಗಳೂರು ನಡುವಿನ ರಸ್ತೆ ಮಡಿಕೇರಿಯ ಕಾಟಿಕೇರಿ ಗ್ರಾಮದ ಬಳಿ ಬಿರುಕು ಬಿಟ್ಟಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬಿರುಕು ಬಿಟ್ಟ ಸ್ಥಳದಲ್ಲಿ ಸರಿಪಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Madikeri-Mangalu road

ಮಳೆ ಹೆಚ್ಚಾಗಿ ಬಿರುಕು ಜಾಸ್ತಿಯಾದರೆ ರಸ್ತೆ ಕುಸಿಯುವ ಅಪಾಯವಿದೆ. ಜೂನ್ ತಿಂಗಳ ಆರಂಭದಲ್ಲಿಯೇ ಈ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಕಾರು, ಬಸ್ ಸೇರಿದಂತೆ ಲಘು ವಾಹನಗಳು ಮಾತ್ರ ಸಂಚಾರ ನಡೆಸುತ್ತಿವೆ.

ಮಡಿಕೇರಿಯಿಂದ 6 ಕಿ.ಮೀ. ದೂರದ ಕಾಟಿಕೇರಿ ಜಂಕ್ಷನ್‌ನಿಂದ ಕೂಗಳತೆ ದೂರದಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿದೆ. ರಸ್ತೆ ಕುಸಿದರೆ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸುವುದು ಅನಿವಾರ್ಯವಾಗಿದೆ.

ಪರ್ಯಾಯ ಮಾರ್ಗ : ಒಂದು ವೇಳೆ ರಸ್ತೆ ಸಂಪೂರ್ಣವಾಗಿ ಕುಸಿದು ಹೋದರೆ ಮೂರು ಮಾರ್ಗಗಳ ಮೂಲಕ ಮಂಗಳೂರನ್ನು ತಲುಪಬಹುದಾಗಿದೆ.

* ಮೈಸೂರು-ಕುಶಾಲನಗರ-ಸೋಮವಾರಪೇಟೆ-ಸಕಲೇಶಪುರ-ಮಂಗಳೂರು
* ಮೈಸೂರು-ಹುಣಸೂರು-ಗೋಣಿಕೊಪ್ಪ-ವಿರಾಜಪೇಟೆ-ಸುಳ್ಯ-ಮಂಗಳೂರು
* ಬೆಂಗಳೂರು-ಹಾಸನ-ಶಿರಾಡಿ-ಮಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+