• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಶಾಲನಗರದಲ್ಲಿ ಅಪಘಾತ; ಸ್ಕೂಟರ್ ಸವಾರ ಸಾವು

By ಮಡಿಕೇರಿ ಪ್ರತಿನಿಧಿ
|

ಮಡಿಕೇರಿ, ಜನವರಿ 17: ಕುಶಾಲನಗರ ಸಮೀಪದ ಕೂಡ್ಲೂರು ರಾಜ್ಯ ಹೆದ್ದಾರಿ ಬಳಿ ಇರುವ ಮಾವಿನ ತೋಪಿನ ಬಳಿ ಕುಶಾಲನಗರ ಕಡೆಗೆ ಬರುತ್ತಿದ್ದ ಟಾಟಾ ಇಂಡಿಕಾ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಅಜೇಯ್ (22) ಸಾವನ್ನಪ್ಪಿದ್ದಾರೆ.

ಜಿಂಕೆಗೆ ಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರ!

ಅಜೇಯ್ ಮುಳ್ಳುಸೋಗೆಯ ಅಂಬೇಡ್ಕರ್ ಕಾಲೊನಿಯ ನಿವಾಸಿ. ಅಪಘಾತಗೊಂಡು ತೀವ್ರ ಗಾಯಗೊಂಡ ಅಜೇಯ್ ನನ್ನು ಕಾರು ಚಾಲಕರಾದ ಪಿರಿಯಾಪಟ್ಟಣದ ನಿವಾಸಿ ರಮೇಶ್ ಎಂಬುವವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಅಜೇಯ್ ತಕ್ಷಣವೇ ಮೃತಪಟ್ಟಿದ್ದಾರೆ. ಮೃತ ಅಜೇಯ್ ಕುಶಾಲನಗರದ ಖಾಸಗಿ ಲಾಡ್ಜ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಹಬ್ಬಕ್ಕೆಂದು ತಮಿಳುನಾಡಿಗೆ ಹೋಗಿದ್ದ ಅಜೇಯ್ ನಿನ್ನೆ ಗುರುವಾರ ಬಂದಿದ್ದು, ಕೆಲಸದ ನಿಮಿತ್ತ ಕೂಡಿಗೆಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಅಪಘಾತ ಸಂಭವಿಸಿದೆ.

English summary
Scooter rider Ajay, 22, was killed in an accident between Tata Indica car and a scooter near Kushalanagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X