• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಶಾಲನಗರ; ಅಪಘಾತದಲ್ಲಿ ರಸ್ತೆ ಮೇಲೇ ಜೀವ ಬಿಟ್ಟ ಮೂರರ ಕಂದಮ್ಮ

By ಮಡಿಕೇರಿ ಪ್ರತಿನಿಧಿ
|

ಮಡಿಕೇರಿ, ಡಿಸೆಂಬರ್ 16: ಸರ್ಕಾರಿ ಬಸ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂರು ವರ್ಷದ ಮಗುವೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಶಾಲನಗರದ ಬೈಚನಹಳ್ಳಿಯಲ್ಲಿ ನಡೆದಿದೆ.

ಗೊಂದಿಬಸವನಹಳ್ಳಿಯ ನಿವಾಸಿಗಳಾದ ಪರಮೇಶ್ವರ್ ಮತ್ತು ಗೀತಾ ದಂಪತಿಯ ಮಗ ಪೃಥ್ವಿ (3) ಸಾವಿಗೀಡಾದ ಮಗು. ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ದಂಪತಿ ಮತ್ತು ಮಗು ಸ್ಕೂಟರ್ ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಬೈಕ್ ಅಪಘಾತದಲ್ಲಿ ಇಬ್ಬರ ಸಾವು; ರಸ್ತೆಯಲ್ಲೇ ಬಿದ್ದು ನರಳಿದ ಗಾಯಾಳು

ದೇವಸ್ಥಾನದಿಂದ ಮನೆಗೆ ದಂಪತಿ ಹಿಂದಿರುಗುತ್ತಿದ್ದ ಸಂದರ್ಭ ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿದ್ದು, ಮಗುವಿನ ತಲೆ ಮೇಲೆ ಬಸ್ ನ ಹಿಂಬದಿ ಚಕ್ರ ಹರಿದಿದೆ. ಸ್ಥಳದಲ್ಲೇ ಮಗು ಸಾವಿಗೀಡಾಗಿದೆ.

ಸ್ಥಳಕ್ಕೆ ಸಂಚಾರಿ ಪೋಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಮತ್ತು ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

English summary
A three-year-old child has died on the spot in an accident between a government bus and a scooter in Baichhanahalli, Kushalanagar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X