ಕಾವೇರಿ ನದಿಗೆ ಸ್ನಾನ ಮಾಡಲು ಹೋದ ಬಾಲಕ ದೀಪಾವಳಿ ದಿನವೇ ನೀರುಪಾಲು
ಕೊಡಗು, ನವೆಂಬರ್ 02: ಎಮ್ಮೆ ಮಾಡುವಿನಲ್ಲಿ ಸ್ನಾನಕ್ಕೆಂದು ತೆರಳಿದ ವಿದ್ಯಾರ್ಥಿ ದೀಪಾವಳಿ ದಿನವೇ ಕಾವೇರಿ ನದಿಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ನಾಪೋಕ್ಲುನಲ್ಲಿ ನಡೆದಿದೆ. ನಾಪೋಕ್ಲು ಬಳಿಯ ಎಮ್ಮೆ ಮಾಡು ಗ್ರಾಮದಲ್ಲಿರುವ ಕಾವೇರಿ ನದಿಯಲ್ಲಿ ಶುಕ್ರವಾರ ಸಂಜೆ ಈ ನಡೆದ ದುರ್ಘಟನೆ.
ಎಮ್ಮೆಮಾಡು ಗ್ರಾಮದ ನಿವಾಸಿ ಅನೀಫ್ ಎಂಬುವರ ಪುತ್ರ ಉವೈಸ್ (13)ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಉವೈಸ್ ಎಮ್ಮೆಮಾಡುವಿನ ಅನಾಥಾಶ್ರಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದಾನೆ. ಎಮ್ಮೆ ಮಾಡುವಿನ ಕುದಿಲ್ ಎಂಬಲ್ಲಿ ಆಟವಾಡಲು ತೆರಳಿದ್ದ ಉವೈಸ್ ಸ್ನೇಹಿತರೊಂದಿಗೆ ಕಾವೇರಿ ನದಿಗೆ ಸ್ನಾನಕ್ಕೆ ತೆರಳಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಆಯತಪ್ಪಿ ನದಿ ನೀರಿನಲ್ಲಿ ಮುಳುಗಿ ಉವೈಸ್ ಸಾವನ್ನಪ್ಪಿದ್ದಾನೆ.

ಬಾಲಕ ನದಿಯಲ್ಲಿ ಬಾಲಕ ಕೊಚ್ಚಿ ಹೋದ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ನಾಪೋಕ್ಲು ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ನಡೆಸಿದರೂ ಈವರೆಗೂ ಮೃತ ದೇಹ ಪತ್ತೆಯಾಗಿಲ್ಲ. ವಿಪರೀತ ಮಳೆ ಹಾಗೂ ರಾತ್ರಿಯಾದ ಕಾರಣ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿದ್ದು, ಶೋಧ ಕಾರ್ಯ ಮುಂದುವರಿಸುವುದಾಗಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ನಾಗಲಿಂಗೇಶ್ವರ ವಿವಿದೋದ್ದೇಶ ಸೌಹಾರ್ಧ ಸಹಕಾರಿ ಸಂಘದಲ್ಲಿ 50.53 ಲಕ್ಷ ಹಣ ದುರ್ಬಳಕೆಮೈಸೂರು, ನವೆಂಬರ್ 02: ಮೈಸೂರಿನ ಬೋಗಾದಿಯಲ್ಲಿರುವ ನಾಗಲಿಂಗೇಶ್ವರ ವಿವಿದೋದ್ದೇಶ ಸೌಹಾರ್ಧ ಸಹಕಾರಿ ಸಂಘದಲ್ಲಿ ಹಣ ದುರ್ಬಳಕೆ ಮಾಡಿದ ಸಹೋದರಿಯರ ಮೇಲೆ ಸಂಘದ ಸಿಇಓ ಎಫ್‌ಐಆರ್ ದಾಖಲಿಸಿದ್ದಾರೆ. ಸಂಘದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಿನಿ(29) ಹಾಗೂ ಈಕೆ ಅಕ್ಕ ಪದ್ಮಿನಿ ಮೇಲೆ ಸಿಇಓ ಮಹದೇವ ನಂದೀಶ್ ಪ್ರಕರಣ ದಾಖಲಿಸಿದ್ದಾರೆ.
2019 ರಿಂದ ಅಶ್ವಿನಿ ಸಂಘದಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು 2023 ಏಪ್ರಿಲ್ 1 ರಿಂದ ಏಕಾಏಕಿ ಬರುವುದನ್ನ ನಿಲ್ಲಿಸಿದ್ದಾರೆ. ಲೆಕ್ಕಗಳ ಆಡಿಟ್ ಮಾಡಿದಾಗ 2020-21 ನೇ ಸಾಲಿನಲ್ಲಿ 19.82 ಲಕ್ಷ ಹಾಗೂ 2022-23 ನೇ ಸಾಲಿನಲ್ಲಿ 33.71 ಲಕ್ಷ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಅಶ್ವಿನಿ ಸಹೋದರಿ ಪದ್ಮಿನಿಗೂ ಸಂಘಕ್ಕೂ ಯಾವುದೇ ರೀತಿಯ ಸಂಭಂಧವಿಲ್ಲದಿದ್ದರೂ ಫೈಲ್‌ಗಳನ್ನ ಪದ್ಮಿನಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ಸಂಘದ ಲೆಕ್ಕದಲ್ಲಿ 50.53 ಲಕ್ಷ ಹಣ ದುರ್ಬಳಕೆ ಮಾಡಿರುವ ಸಹೊದರಿಯರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications