ಹಾರ ಕೈಲಿಡಿದ ವರನಿಗೆ ಕಪಾಳಮೋಕ್ಷ ಮಾಡಿದ ವಧು: ಏನಿದು ವೈರಲ್ ವಿಡಿಯೋ
ಲಕ್ನೋ ಏಪ್ರಿಲ್ 19: ಮದುವೆ ಅನ್ನೋದು ಗಂಡು-ಹೆಣ್ಣಿನ ಜೀವನದಲ್ಲಿ ಮಹತ್ವದ ಘಟ್ಟ. ಗುರು ಹಿರಿಯರ ಆಶೀರ್ವಾದದೊಂದಿಗೆ ಗಂಡು-ಹೆಣ್ಣು ಹೊಸ ಬಾಳಿಗೆ ಪರಸ್ಪರ ಒಪ್ಪಿಗೆಯ ಮೇರೆಗೆ ಕಾಲಿಡುವ ದಿನ. ಆದರೆ ಈ ದಿನ ನವ ಜೋಡಿ ಕಿತ್ತಾಡಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಧುವಿಗೆ ಹಾರ ಹಾಕಲು ಮುಂದಾದ ವರನಿಗೆ ವಧು ಕಪಾಳಮೋಕ್ಷ ಮಾಡಿದ್ದಾಳೆ.
ಉತ್ತರ ಪ್ರದೇಶದ ಹಮೀರ್‌ಪುರ್‌ನಲ್ಲಿ ನಡೆದ ಈ ಮದುವೆಯಲ್ಲಿ ವರ-ವಧು ಅಲಂಕಾರಗೊಂಡು ವೇದಿಕೆ ಮೇಲಿದ್ದರು. ಇನ್ನೇನು ಅವರಿಬ್ಬರು ಹಾರ ಬದಲಾಯಿಸಿಕೊಳ್ಳುವ ಫೋಟೋವನ್ನು ಕ್ಯಾಮರಾಮನ್ ತೆಗೆಯಬೇಕಿತ್ತು. ಆಗ ಅಶ್ಚರ್ಯಕರ ಘಟನೆ ನಡೆದಿದೆ. ಹಾರಹಾಕಲು ಮುಂದಾದ ವರನಿಗೆ ಎರಡು ಮೂರು ಬಾರಿ ವಧು ಕಪಾಳಮೋಕ್ಷ ಮಾಡಿದ್ದಾಳೆ.
यूपी के हमीरपुर जिले में एक दुल्हन ने जयमाला के दौरान सांवले दूल्हे को देखते ही थप्पड़ जड़ दिए, 😅 pic.twitter.com/ZcFEIHfAWB
— Ch. krishan Bhati (@ChKrishanBhati3) April 18, 2022
ಆ ವ್ಯಕ್ತಿ ತನ್ನ ಹೆಂಡತಿಯಾಗಲಿರುವ ಹೆಂಡತಿಗೆ ಮಾಲೆ ಹಾಕಲು ಮುಂದಾಗಿದ್ದನು. ಆದರೆ ಪ್ರತಿಯಾಗಿ ಅವಳು ಅವನ ಮುಖಕ್ಕೆ ಕಪಾಳಮೋಕ್ಷ ಮಾಡಿದ್ದಾಳೆ. ಜೊತೆಗೆ ಮದುವೆಯ ಅಲಂಕಾರದಲ್ಲಿದ್ದ ಮಹಿಳೆಯು ವೇದಿಕೆಯಿಂದ ಹೊರನಡೆದು ವರ ಹಾಗೂ ನೆರೆದಿದ್ದ ಅತಿಥಿಗಳನ್ನು ದಿಗ್ಭ್ರಮೆಗೊಳಿಸಿದ್ದಾಳೆ.

ಈ ವರ್ಷ ನಡೆದ ಇದೇ ರೀತಿಯ ಘಟನೆಯಲ್ಲಿ, ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ ಕಾರಣಕ್ಕೆ ತನ್ನ ಭಾವಿ ಪತ್ನಿಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಮಹಿಳೆ ತನ್ನ ಸಂಬಂಧಿಯನ್ನು ಮದುವೆಯಾದಳು. ಕಡಲೂರು ಜಿಲ್ಲೆಯ ಪನ್ರುತಿಯಲ್ಲಿ ಈ ಘಟನೆ ನಡೆದಿದೆ. ಆದರೆ ಘಟನೆಗೆ ಕಾರಣ ತಿಳಿದು ಬಂದಿಲ್ಲ.

ಬ್ಯೂಟಿ ಸಲೂನ್ ನಡೆಸುತ್ತಿರುವ ಖ್ಯಾತ ಉದ್ಯಮಿಯೊಬ್ಬರ ಮಗಳ ನಿಶ್ಚಿತಾರ್ಥ ಜನವರಿ 20ರಂದು ನಡೆಯಬೇಕಿತ್ತು. ಜನವರಿ 19ರಂದು ನಡೆದ ವಿವಾಹ ಕಾರ್ಯಕ್ರಮದ ವೇಳೆ ವಧು ಮಂಟಪಕ್ಕೆ ಆಗಮಿಸಿದ್ದರು. ಹಾಲ್‌ಗೆ ಪ್ರವೇಶಿಸುತ್ತಿದ್ದಂತೆ ತನ್ನ ಸಂಬಂಧಿಕರೊಂದಿಗೆ ವಧು ನೃತ್ಯ ಮಾಡಿದ್ದಾಳೆ. ವಧು ಬಂದ ರೀತಿ ಇಷ್ಟವಾಗದ ವರ ಆಕೆಯೊಂದಿಗೆ ವಾಗ್ವಾದಕ್ಕಿಳಿದು ಏಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಅಂತಿಮವಾಗಿ, ವಾದವು ತೀವ್ರ ಮಾತಿನ ಘರ್ಷಣೆಯಾಗಿ ಬೆಳೆದು ವರನು ವಧುವಿಗೆ ಕಪಾಳಮೋಕ್ಷ ಮಾಡಿದ್ದಾನೆ. ಮಾತ್ರವಲ್ಲದೇ ಮಹಿಳೆ ಕೂಡ ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ಇದನ್ನು ನೋಡಿದ ವಧುವಿನ ತಂದೆ ತನ್ನ ಸಮ್ಮುಖದಲ್ಲಿ ವರನು ತನ್ನ ಮಗಳಿಗೆ ಕಪಾಳಮೋಕ್ಷ ಮಾಡುವ ಹರಸಾಹಸ ಮಾಡಿದ್ದಾನೆ ಎಂದು ಕೋಪಗೊಂಡಿದ್ದಾನೆ. ವಧುವಿನ ತಂದೆ ತನ್ನ ಸಂಬಂಧಿಕರೊಂದಿಗೆ ಚರ್ಚೆ ನಡೆಸಿದರು ಮತ್ತು ವಿಲ್ಲುಪುರಂನ ತಮ್ಮ ಸಂಬಂಧಿಗೆ ನಿಗದಿತ ದಿನಾಂಕದಂದು ತನ್ನ ಮಗಳನ್ನು ಮದುವೆ ಮಾಡಲು ನಿರ್ಧರಿಸಿದರು. ನಂತರ ಮಹಿಳೆ ತನ್ನ ಸಂಬಂಧಿಯನ್ನು ಮದುವೆಯಾದಳು.












Click it and Unblock the Notifications