ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ತಾಯಿಯನ್ನು ಹೊಡೆದು ಕೊಂದ ದುಷ್ಕರ್ಮಿಗಳು

ಕಾನ್ಪುರ, ಜನವರಿ 18: ಉತ್ತರ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿ ಕುಟುಂಬದ ಮೇಲಿನ ಆರೋಪಿಗಳ ಕ್ರೌರ್ಯದ ಮತ್ತೊಂದು ಘಟನೆ ವರದಿಯಾಗಿದೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಗಳು ಸಂತ್ರಸ್ತೆಯ ತಾಯಿಗೆ ಮನಬಂದಂತೆ ಥಳಿಸಿದ್ದರಿಂದ ಅವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕಾನ್ಪುರದಲ್ಲಿ ನಡೆದಿದೆ.

Recommended Video

      ಡಿಕೆಶಿಗೆ ಕೆಪಿಸಿಸಿ ಯೋಗ, ಹೈಕಮಾಂಡ್ ಎದುರು ಸಿದ್ದು ಹೊಸರಾಗ! | DK SHIVAKUMAR | KPCC | CONGRESS | CENTRAL

      2018ರಲ್ಲಿ 13 ವರ್ಷದ ಬಾಲಕಿ ಮೇಲೆ ಅಬಿದ್, ಮಿಂಟು, ಮಹಬೂಬ್, ಚಾಂದ್ ಬಾಬು, ಜಮೀಲ್ ಮತ್ತು ಫಿರೋಜ್ ಎಂಬ ಆರು ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿಗಳ ಪೈಕಿ ನಾಲ್ವರನ್ನು 2018ರಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.

      ಅಪ್ರಾಪ್ತ ವಯಸ್ಸಿನ ಬಾಲಕಿಯ ಮನೆಗೆ ಕಳೆದ ಗುರುವಾರ ನುಗ್ಗಿದ ಆರೋಪಿಗಳು, ಪ್ರಕರಣ ಹಿಂದಕ್ಕೆ ಪಡೆದುಕೊಳ್ಳುವಂತೆ ಕುಟುಂಬಕ್ಕೆ ಆಗ್ರಹಿಸಿದ್ದಾರೆ. ಅದಕ್ಕೆ ಅವರು ಒಪ್ಪದಿದ್ದಾಗ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕಿಯ ತಾಯಿ ಹಾಗೂ ಮತ್ತೊಬ್ಬ ಸಂಬಂಧಿ ಮಹಿಳೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ತಾಯಿ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

      ವಿಡಿಯೋದಲ್ಲಿ ಸೆರೆ

      ವಿಡಿಯೋದಲ್ಲಿ ಸೆರೆ

      ಈ ಘಟನೆಯ ಎರಡು ಸಣ್ಣ ವಿಡಿಯೋಗಳು ಹರಿದಾಡುತ್ತಿವೆ. ಕುಟುಂಬ ವಾಸವಿದ್ದ ಮನೆಯ ಮಹಡಿಯಿಂದ ಐದು ಸೆಕೆಂಡುಗಳ ವಿಡಿಯೋದಲ್ಲಿ ಕೆಂಪು ಕುರ್ತಾ ಧರಿಸಿದ ಮಹಿಳೆಯೊಬ್ಬರು ನೆಲದ ಮೇಲೆ ಬಿದ್ದಿದ್ದು, ಆಕೆ ಸುತ್ತಲೂ ಬಿಳಿ ಕುರ್ತಾ ಧರಿಸಿ ನಿಂತಿದ್ದ ವ್ಯಕ್ತಿಗಳು ಮುಖಕ್ಕೆ ಒದೆಯುವ ದೃಶ್ಯ ಸೆರೆಯಾಗಿದೆ. ಮತ್ತೊಂದು ಸಣ್ಣ ವಿಡಿಯೋದಲ್ಲಿ ಕಾನ್ಪುರ ಆಸ್ಪತ್ರೆಯಲ್ಲಿ ಕುಟುಂಬವನ್ನು ಪೊಲೀಸರು ಸುತ್ತುವರಿದಿರುವುದು ಕಾಣಿಸುತ್ತದೆ.

      ಆಯುಧದಿಂದ ಹಲ್ಲೆ

      ಆಯುಧದಿಂದ ಹಲ್ಲೆ

      ಜ.9ರಂದು ಈ ಘಟನೆ ನಡೆದಿತ್ತು. ಮನೆಗೆ ನುಗ್ಗಿದ್ದ ಆರೋಪಿಗಳು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದರು. ಬಾಲಕಿಯ ತಾಯಿ ಮತ್ತು ಜಜ್ಮುವಾ ಪ್ರದೇಶದ ಬಿಜೆಪಿ ನಾಯಕಿಯಾಗಿರುವ ಚಿಕ್ಕಮ್ಮ ಇಬ್ಬರೂ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಾಯಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಬಾಲಕಿಯ ಚಿಕ್ಕಮ್ಮ ಕಾಶಿರಾಂ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಮೂವರು ಆರೋಪಿಗಳ ಬಂಧನ

      ಮೂವರು ಆರೋಪಿಗಳ ಬಂಧನ

      ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಇನ್ನು ಮೂವರು ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ ಎಂದು ಕಾನ್ಪುರ ಪೊಲೀಸರು ತಿಳಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮಹಬೂಬ್‌ಗೆ ಜ. 12ರಂದು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸ್ಥಳೀಯ ಥಾಣಾ ಪೊಲೀರು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪವನ್ನು ಕಾನ್ಪುರ ಪೊಲೀಸ್ ಮುಖ್ಯಸ್ಥ ಅನಂತ್ ದೇವ್ ನಿರಾಕರಿಸಿದ್ದಾರೆ. ಆದರೆ ಈ ಬಗ್ಗೆ ದೂರು ನೀಡಿದರೆ ಅದರ ಕುರಿತೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

      2018ರಲ್ಲಿ ನಡೆದ ಘಟನೆ

      2018ರಲ್ಲಿ ನಡೆದ ಘಟನೆ

      2018ರಲ್ಲಿ ಸಣ್ಣ ಮಳಿಗೆಯೊಂದರಲ್ಲಿ ಮಹಿಳೆಯ ಮಗಳ ಮೇಲೆ ಆರು ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದಕ್ಕೆ ಬಾಲಕಿಯ ತಂಗಿ ಸಾಕ್ಷಿಯಾಗಿದ್ದಳು. ನಾಲ್ವರು ಆರೋಪಿಗಳ ವಿರುದ್ಧ ಸೆಕ್ಷನ್ 354ಸಿ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+