ಹಸುವಿಗೆ ಕಾರು ಗುದ್ದಿ ನಾಲ್ಕು ಮಂದಿ ಸಾವು, ಏಳು ಮಂದಿಗೆ ಗಾಯ
ಸೀತಾಪುರ (ಉ.ಪ್ರದೇಶ), ಮಾರ್ಚ್ 08: ಹಸುವಿಗೆ ಕಾರು ಗುದ್ದಿದ ಕಾರಣ ನಾಲ್ಕು ಮಂದಿ ಸಾವನ್ನಪ್ಪಿ ಏಳು ಮಂದಿಗೆ ಗಾಯವಾಗಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸೀತಾಪುರ ಬಳಿಯ ಹರಪುರ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಎಸ್‌ಯುವಿ ಕಾರೊಂದು ಗುದ್ದಿ ಕಾರು ಪಲ್ಟಿ ಹೊಡೆದ ಕಾರಣ ಕಾರಿನಲ್ಲಿದ್ದ 11 ಜನರಲ್ಲಿ 4 ಜನ ಸಾವನ್ನಪ್ಪಿದ್ದಾರೆ, ಏಳು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಒಂದೇ ಕುಟುಂಬದವರು ಮದುವೆ ಮುಗಿಸಿ ಮರಳಿ ಬರುವಾಗ ಘಟನೆ ನಡೆದಿದೆ. ಸೀತಾಪುರ-ಲಕ್ಷ್ಮೀಪುರ ಮುಖ್ಯರಸ್ತೆಯಲ್ಲಿ ಬಡೇಲಿಯಾ ಎಂಬ ಹಳ್ಳಿಯ ಬಳಿ ಕಾರು ಬಂದಾಗ ಅಚಚಾನಕ್ ಆಗಿ ಹಸುವೊಂದು ಕಾರಿಗೆ ಎದುರಾಗಿ ಬಂದಿದೆ. ಕಾರು ಹಸುವಿಗೆ ಗುದ್ದತಂದೆ ತಡೆಯಲು ಚಾಲಕ ಯತ್ನಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ.

ಸ್ಥಳೀಯರು ಶೀಘ್ರವಾಗಿ ನೆರವಿಗೆ ಬಂದು ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಆದರೆ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು, ಏಳು ಜನ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಚಾಲ್ತಿಯಲ್ಲಿದೆ. ಗೋವಿನ ಹತ್ಯೆ ಮಾಡಿದವರು ಕಠಿಣ ಕಾನೂನು ಎದುರಿಸಬೇಕಾಗುತ್ತದೆ.












Click it and Unblock the Notifications