ಕೊರೊನಾ ವಿರುದ್ಧದ ಹೋರಾಟ; ತಂದೆಯ ಅಂತ್ಯಕ್ರಿಯೆ ತ್ಯಜಿಸಿದ ಸಿಎಂ ಯೋಗಿ

ಲಕ್ನೋ, ಏಪ್ರಿಲ್ 20: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತಂದೆ ಆನಂದ ಸಿಂಗ್ ಬಿಸ್ಟಾ ಅವರು ಇಂದು ನಿಧನರಾಗಿದ್ದಾರೆ.

ಆದರೆ, ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಯೋಗಿ ಆದಿತ್ಯನಾಥ ತಿಳಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವುದರಿಂದ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.

ಬೆಳಿಗ್ಗೆ ಅವರ ತಂದೆ ನಿಧನರಾದ ಸುದ್ದಿ ಬಂದಾಗ ಸಿಎಂ ಯೋಗಿ ಅವರು ಕೊರೊನಾ ಕುರಿತು ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಆದರೂ ಅವರು ಧೃತಿಗೆಡದೆ ಸಭೆ ಮುಂದುವರೆಸಿ, ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದರು.

UP CM Yogi Adityanath Not Attending His Father Funerals

ಬಳಿಕ ಪತ್ರದಲ್ಲಿ ಅವರು, 23 ಕೋಟಿ ಜನರ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದ್ದೇನೆ. ಇಂತಹ ಸಂಕಟ ಸಮಯದಲ್ಲಿ ಜನರ ಜೊತೆ ಇರಬೇಕಾಗಿದೆ. ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅವರ ತತ್ವಾದರ್ಶಗಳೇ ನನ್ನ ಬದುಕಿನ ದಾರಿ ದೀಪವಾಗಿದ್ದವು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಯೋಗಿ ಅವರ ತಂದೆ ದೀರ್ಘಕಾಲದಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು. ಅವರು ಇಂದು ಬೆಳಿಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+