ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ಉದ್ದದ ಗಂಗಾ ಎಕ್ಸ್​ಪ್ರೆಸ್ ವೇ ಯೋಜನೆ ಘೋಷಿಸಿದ ಯೋಗಿ

|
Google Oneindia Kannada News

ಲಕ್ನೋ, ಜನವರಿ 30: ಪ್ರಯಾಗ್ ರಾಜ್ ನಲ್ಲಿ ಕುಂಭಮೇಳದ ನಡುವೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಭೆಯಲ್ಲ್ ಕೈಗೊಂಡ ನಿರ್ಧಾರದಂತೆ ಉತ್ತರ ಪ್ರದೇಶ ಸರ್ಕಾರವು ವಿಶ್ವದ ಅತಿ ಉದ್ದದ ಗಂಗಾ ಎಕ್ಸ್​ಪ್ರೆಸ್ ವೇ ಯೋಜನೆ ಘೋಷಿಸಿದೆ.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 36 ಸಾವಿರ ಕೋಟಿ ರೂ. ಮೊತ್ತದ ಗಂಗಾ ಏಕ್ಸ್ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಮೀರತ್ ನಿಂದ ಆರಂಭವಾಗುವ ಎಕ್ಸ್ ಪ್ರೆಸ್ ವೇ ಅಮ್ರೋಹಾ, ಬುಲಂದ್ ಶಹರ್, ಬದೌನ್, ಶಹಜನ್ ಪುರ್, ಫರುಖಾಬಾದ್, ಹರ್ದೋಯಿ, ಕನೌಜ್, ಉನ್ನಾವೋ,ರಾಯ್ ಬರೇಲಿ, ಪ್ರತಾಪ್ ಘರ್ ಮೂಲಕ ಸಾಗಲಿದೆ ಅಂತಿಮವಾಗಿ ಪ್ರಯಾಗರಾಜ್​ತಲುಪಲಿದೆ.. ಈ ಯೋಜನೆಗೆ ಕೇಂದ್ರ ಸರ್ಕಾರದ ನೆರವಿನ ಬಗ್ಗೆ ಮಾಹಿತಿಯಿಲ್ಲ.

ಪ್ರಯಾಗ್ ನಲ್ಲಿ ಮಂಗಳವಾರ ಯೋಗಿ ಸಂಪುಟ ಸಭೆ, ಸಿನಿಮಾ ವೀಕ್ಷಣೆಪ್ರಯಾಗ್ ನಲ್ಲಿ ಮಂಗಳವಾರ ಯೋಗಿ ಸಂಪುಟ ಸಭೆ, ಸಿನಿಮಾ ವೀಕ್ಷಣೆ

ಉರಿಗೆ ಜಿಎಸ್​ಟಿ ವಿನಾಯಿತಿ: ಮುಖ್ಯಮಂತ್ರಿ ಯೋಗಿ ಹಾಗೂ 28 ಸಚಿವರು ಸಂಪುಟ ಸಭೆ ಬಳಿಕ ಸರ್ಜಿಕಲ್ ಸ್ಟ್ರೈಕ್ ಆಧಾರಿತ 'ಉರಿ' ಚಿತ್ರ ವೀಕ್ಷಿಸಿದರು. ಸಂಪುಟ ಸಭೆಯಲ್ಲಿ ಈ ಚಿತ್ರಕ್ಕೆ ರಾಜ್ಯ ಜಿಎಸ್​ಟಿ ವಿನಾಯಿತಿ ಘೋಷಿಸಲಾಗಿದೆ.

UP Cabinet approves construction of Ganga Expressway

ಗಂಗಾ ಎಕ್ಸ್​ಪ್ರೆಸ್ ವೇ ಅಂತರ: 600 ಕಿ.ಮೀ ಅಂತರವಾಗಿ, ಹೆದ್ದಾರಿ ಯೋಜನೆಗಾಗಿ 6,556 ಹೆಕ್ಟೇರು ಭೂ ಪ್ರದೇಶವನ್ನು ವಶಪಡಿಸಿಕೊಳ್ಳಲಾಗುತ್ತದೆ.

ಮಹರ್ಷಿ ವಾಲ್ಮೀಕಿ ಆಶ್ರಮ ಹಾಗೂ ಮಹರ್ಷಿ ಭಾರದ್ವಾಜ್ ಆಶ್ರಮದ ಅಭಿವೃದ್ಧಿ, ಬುಲಂದ್ ಖಂಡ್ ಎಕ್ಸ್ ಪ್ರೆಸ್ ವಿಸ್ತರಣೆ ಮುಂತಾದ ಯೋಜನೆಗಳಿಗೆ ಸಂಪುಟದಿಂದ ಸಮ್ಮತಿ ಸಿಕ್ಕಿದೆ. ಈ ನಡುವೆ ಜನಪ್ರಿಯ ಚಿತ್ರ 'ಉರಿ' ಗೆ ತೆರಿಗೆ ವಿನಾಯತಿ ನೀಡಲಾಗಿದೆ.

English summary
In a Cabinet meeting during the ongoing Kumbh Mela, the Uttar Pradesh government on Tuesday approved the construction of the Ganga Expressway. UP CM Yogi Adityanath said that this will be the longest expressway in the world. The expressway will be constructed for better connectivity of Allahabad with western districts of UP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X