ಕಾಶಿ ವಿಶ್ವನಾಥನಿಗೆ ನಮಿಸಿ 'ನಮೋ' ವಿರುದ್ಧ ಹರಿಹಾಯ್ದ ಪ್ರಿಯಾಂಕಾ ಗಾಂಧಿ
ಕಾಶಿ, ಮಾರ್ಚ್ 20: ಗಂಗಾ ಯಾತ್ರೆ ಮೂಲಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಇಂದು ಖ್ಯಾತ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದರು.
ಸಾಂಪ್ರದಾಯಿಕ ಕೆಂಪು ಖಾದಿ ಸೀರೆ, ಕೊರಳಿಗೆ ರುದ್ರಾಕ್ಷಿ ಮಾಲೆ ಧರಿಸಿ, ಹಣೆಗೆ ತಿಲಕವಿಟ್ಟಿದ್ದ ಪ್ರಿಯಾಂಕಾ ಗಾಂಧಿ ಅವರು ಬೃಹತ್ ರೋಡ್ ಶೋ ಮಾಡಿದರು. ಪ್ರಿಯಾಂಕಾ ಗಾಂಧಿ ಅವರನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಅವರು, ಮೋದಿ ಅವರು ಜನರನ್ನು ಮೋಸ ಮಾಡುವುದನ್ನು ಬಿಡಬೇಕು ಎಂದು ಪ್ರಿಯಾಂಕ ಗಾಂಧಿ ಹರಿಹಾಯ್ದರು.

ಗಾಂಧಿ ಕುಟುಂಬವನ್ನು ಬೈಯುದನ್ನು ಬಿಟ್ಟು, ನಿಮ್ಮ ಸರ್ಕಾರದ ಸಾಧನೆಗಳನ್ನು ಬಗ್ಗೆ ಹೇಳಿ, ಯೋಗಿ ಆದಿತ್ಯನಾಥ ಅವರ ಆಡಳಿತದಲ್ಲಿ ರೈತರು, ಶ್ರಮಿಕರಿಗೆ ನೆಮ್ಮದಿ ಇಲ್ಲದಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಜನರ ಜನತೆಯೂ ನಡೆಸಿದ ಪ್ರಿಯಾಂಕಾ ಗಾಂಧಿ ಅವರು ಜನರೊಂದಿಗೆ, ಮಾತನಾಡಿದರು, ಮೋದಿ ಸರ್ಕಾರದ ಕೊರತೆಗಳನ್ನು ಜನರ ಮುಂದಿಡುವ ಯತ್ನ ಮಾಡಿದರು.












Click it and Unblock the Notifications