• search

ಪ್ರಯಾಗರಾಜ್ ನಲ್ಲಿ ಮದುವೆಗೆ ನಿರ್ಬಂಧ, ಆಕ್ರೋಶ ಹುಟ್ಟಿಸಿದ ಯೋಗಿ ನಡೆ

Subscribe to Oneindia Kannada
For lucknow Updates
Allow Notification
For Daily Alerts
Keep youself updated with latest
lucknow News
    ಪ್ರಯಾಗರಾಜ್‍ನಲ್ಲಿ ಮದುವೆಗೆ ನಿರ್ಬಂಧ, ಆಕ್ರೋಶ ಹುಟ್ಟಿಸಿದ ಯೋಗಿ ನಡೆ | Oneindia Kannada

    ಪ್ರಯಾಗರಾಜ್, ಡಿಸೆಂಬರ್ 03: ಉತ್ತರ ಪ್ರದೇಶದ ಪ್ರಯಾಗರಾಜ್(ಅಲಹಾಬಾದ್) ನಲ್ಲಿ ಕುಂಭಮೇಳ ನಡೆಯುವ ಸಂದರ್ಭದಲ್ಲಿ ಮದುವೆಗಳಿಗೆ ನಿರ್ಬಂಧ ವಿಧಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    ಈಗಾಗಲೇ ಮದುವೆ ದಿನಾಂಕಗಳು ನಿಕ್ಕಿಯಾಗಿ, ಪ್ರಯಾಗರಾಜ್ ನಲ್ಲಿ ಛತ್ರಗಳನ್ನೂ ನಿಗದಿಮಾಡಲಾಗಿದೆ. ಆದರೆ ಇನ್ನೊಂದು ತಿಂಗಳಲ್ಲಿ ಸ್ಥಳ ಬದಲಿಸುವುದು ಹೇಗೆ? ಈಗಾಗಲೇ ಆಮಂತ್ರಣಗಳನ್ನೂ ಹಂಚಿಯಾಗಿದೆ. ಯಾರ ಓಲೈಕೆಗೆ ಈ ನಿರ್ಧಾರ ಎಂದು ಹಲವರು ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ.

    ಸರಿಯಾಗಿ ಕೇಳಿ, ಯೋಗಿ ಆದಿತ್ಯನಾಥ ಭಜರಂಗಿಯನ್ನು 'ದಲಿತ' ಅಂದಿಲ್ಲ!

    ಅಷ್ಟಕ್ಕೂ ಈ ದಿಡೀರ್ ನಿರ್ಧಾರಕ್ಕೆ ಕಾರಣ, 2019 ರ ಜನವರಿ 15 ರಿಂದ ಮಾರ್ಚ್ 04ರವರೆಗೆ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಇದರಿಂದ ಸ್ಥಳಾವಕಾಶದ ಕೊರತೆಯೂ ಆಗಬಹುದು, ಮತ್ತು ಕಾನೂನು ಸುವ್ಯವಸ್ಥೆಯನ್ನೂ ಕಾಪಾಡಬೇಕಾದ ಅತಗ್ಯ ಇರುವುದರಿಂದ ಪ್ರಯಾಗ್ ರಾಜ್ ನಲ್ಲಿ ಮದುವೆ ಸಮಾರಂಭಗಳು ನಡೆಯದಂತೆ ನಿರ್ಬಂಧ ಹೇರಲಾಗಿದೆ. ಆದರೆ ಈ ನಿರ್ಧಾರವನ್ನು ಮೊದಲೇ ಕೈಗೊಂಡಿದ್ದರೆ ಪರವಾಗಿರಲಿಲ್ಲ, ಇದೀಗ ಏಕಾಏಕಿ ನಿರ್ಧಾರ ತೆಗೆದುಕೊಂಡರೆ ಮದುವೆ ನಿಗದಿಯಾಗಿರುವವರು ಏನು ಮಾಡಬೇಕು. ಸಾವಿರು ಜನರಿಗೆ ಹಂಚಿದ ಆಮಂತ್ರಣದಲ್ಲಿ ಬದಲಾವಣೆ ಮಾಡುವುದು ಹೇಗೆ, ಹೊಸ ಛತ್ರವನ್ನು ಹುಡುಕುವುದು, ತರಾತುರಿಯಲ್ಲಿ ಬುಕ್ ಮಾಡಿ ಮದುವೆ ಮಾಡೋದು ಸುಲಭವೇ? ಎಂಬುದು ಜನರ ಅಂಬೋಣ.

    ಆದರೆ ಸರ್ಕಾರ ಮಾತ್ರ ಈ ಯಾವುದರ ಬಗ್ಗೆಯೂ ಹೆಚ್ಚಾಗಿ ಚಿಂತಿಸದೆ, ಈಗಾಗಲೇ ಪ್ರಯಾಗರಾಜ್ ನಲ್ಲಿರುವ ಎಲ್ಲಾ ಛತ್ರಗಳಿಗೆ, ಸಭಾಂಗಣಗಳಿಗೆ ಅಧಿಕೃತ ಪ್ರಕಟಣೆಯನ್ನು ಕಳಿಸಿದ್ದು, ಕುಂಭಮೇಳ ನಡೆಯುವ ಅವಧಿಯಲ್ಲಿ ಯಾವುದೇ ಕಾರ್ಯಕ್ರಮ ಬುಕ್ ಆಗಿದ್ದರೆ ಅದನ್ನು ರದ್ದು ಮಾಡುವಂತೆ ಆದೇಶಿಸಿದೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ಎದ್ದಿದೆ.

    ನೋವು ಅರ್ಥವಾಗೋಲ್ಲ!

    ಮದುವೆಗಳಿಗೆ ನಿರ್ಬಂಧ ಹೇರಿರುವವರು ಮದುವೆಗಾಗಿ ತಾವು ಕಷ್ಟಪಟ್ಟು ದುಡಿದ ಹಣವನ್ನು ಸುರಿದಿರುವ ನೋವನ್ನು ಅರ್ಥಮಾಡಿಕೊಳ್ಳಲಾರರು. ಈಗಾಗಲೇ ಸಿದ್ಧತೆ ನಡೆಸಿರುವ ಮದುವೆಯನ್ನು ಬೇರೆಡೆ ಸ್ಥಳಾಂತರಿಸೋದು ಸುಲಭವೇ? ಎಂದು ಪ್ರಶ್ನಿಸಿದ್ದಾರೆ ಸಾಗರಿಕಾ ಬ್ಯಾನರ್ಜಿ

    ನಿಮ್ಮ ಮದುವೆ ದಿನಾಂಕವನ್ನು ಸರ್ಕಾರ ನಿರ್ಧರಿಸಲಿದೆ!

    ಅಂದರೆ ಇನ್ನು ಮುಂದೆ ನಿಮ್ಮ ಮದುವೆ ದಿನಾಂಕವನ್ನು ಸರ್ಕಾರ ನಿರ್ಧರಿಸಲಿದೆ ಎಂದು ಅಣಕಿಸಿದ್ದಾರೆ ಸಬಾಹ್ ಅಹ್ಮದ್ ಜುಬೇರಿ.

    ಭಗವಂತ ಹನುಮನಿಗೆ 'ಜಾತಿ ಪ್ರಮಾಣಪತ್ರ' ನೀಡಿದ ಯೋಗಿಗೆ 'ಮಹಾಮಂಗಳಾರತಿ'!

    ಯೋಗಿ ಅವರಿಗೆ ಹೇಳಿ...

    ದಯವಿಟ್ಟು ಯಾರಾದರೂ ಮುಖ್ಯಮಂತ್ರಿ ಯೋಗಿ ಅವರಿಗೆ ಹೇಳಿ... ಇದು ಅವರ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ಮೊದಲ ಕುಂಭಮೇಳವಾಗಿರಬಹುದು. ಆದರೆ ಮೊದಲ ಕುಂಭಮೇಳವಲ್ಲ ಅಂತ! ಎಂದಿದ್ದಾರೆ ಅರವಿಂದ್.

    ಹಿಂದೆಂದಾದರೂ ಭಾರತ ಇಂಥ ನಿರ್ಧಾರವನ್ನು ಕಂಡಿತ್ತಾ?

    ಭಗವಾನ್ ಹನುಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಯೋಗಿ ಆದಿತ್ಯನಾಥ್ ಮೂರು ತಿಂಗಳ ಕಾಲ ಮದುವೆಯನ್ನೇ ಪ್ರಯಾಗರಾಜ್ ನಲ್ಲಿ ನಿರ್ಬಂಧಿಸಿದ್ದಾರೆ. ಇಂಥ ನಿರ್ಧಾರವನ್ನು ಭಾರತದಲ್ಲಿ ಹಿಂದೆಂದಾದರೂ ಕಂಡಿದ್ದೆವಾ? ಬಿಜೆಪಿಯವರೇ, ಇದಕ್ಕೆ ಉತ್ತರ ಹೇಳಿ ಎಂದಿದ್ದಾರೆ ಹಶಿಮ್ ವೈ ಜೆ.

    ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಗೆ ರಾಜಸ್ಥಾನದಲ್ಲಿ ಸಕತ್ ಬೇಡಿಕೆ

    ಇನ್ನಷ್ಟು ಲಕ್ನೋ ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    People are critisizing UP CM Yogi Adityanath's decision on Ban on marriages in Prayagraj during Kumbha Mela 2019, Which is scheduled on Jan 15 to March 4th.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more