'ಉತ್ತರಪ್ರದೇಶದಲ್ಲಿ ಸ್ಮಶಾನಗಳನ್ನು ನಿರ್ಮಿಸಿ ಜನರನ್ನು ಅಲ್ಲಿಗೆ ಕಳಿಸುವ ಸರ್ಕಾರ' ಕೇಜ್ರಿವಾಲ್

ಲಕ್ನೋ, ಜನವರಿ 3: ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವುದರಿಂದ ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಜೊತೆಗೆ ಪರಸ್ಪರ ವಾಗ್ದಾಳಿಗಳು ಜೋರಾಗಿವೆ. ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ತೀವ್ರ ದುರ್ಬಲವಾಗಿದೆ. ಇದರಿಂದ ಉತ್ತರ ಪ್ರದೇಶದಲ್ಲಿ ಅಪಾರ ಸಂಖ್ಯೆಯ ಸಾವುಗಳಿಗೆ ಕಾರಣವಾಗಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲಕ್ನೋದಲ್ಲಿ ನಡೆದ ಬೃಹತ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿಶ್ವದ ಅತ್ಯಂತ ಕೆಟ್ಟ ಕೋವಿಡ್ ನಿರ್ವಹಣೆಯನ್ನು ಮಾಡಿದೆ ಎಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ಯೋಗಿ ಆದಿತ್ಯನಾಥ್ ಸರ್ಕಾರವು 'ಉತ್ತರ ಪ್ರದೇಶದಲ್ಲಿ ಕೇವಲ ಸ್ಮಶಾನಗಳನ್ನು ನಿರ್ಮಿಸಿದೆ. ಆದರೆ ಅನೇಕ ಜನರನ್ನು ಅಲ್ಲಿಗೆ ಕಳುಹಿಸಲು ವ್ಯವಸ್ಥೆ ಮಾಡಿದೆ ಎಂಬುದು ವಿಷಾದನೀಯ' ಎಂದು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಖಾರವಾಗಿ ನುಡಿದಿದ್ದಾರೆ.

ಪಕ್ಷ ರಾಜ್ಯದ ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಆದರೆ ಅದನ್ನು ಮುಚ್ಚಿಡುವ ಕಸರತ್ತಿನಲ್ಲಿ ರಾಜ್ಯ ಸರ್ಕಾರ ಜಾಹೀರಾತುಗಳಿಗಾಗಿ ಲಕ್ಷಾಂತರ ಖರ್ಚು ಮಾಡುತ್ತಿದೆ. ಯುಪಿ ಸರ್ಕಾರ ಯುಎಸ್ ನಿಯತಕಾಲಿಕೆಗಳಲ್ಲಿ 10 ಪುಟಗಳ ಜಾಹೀರಾತುಗಳನ್ನು ನೀಡಿತು. ಜನರ ಕಷ್ಟಪಟ್ಟು ದುಡಿದ ಹಣದೊಂದಿಗೆ ಚೆಲ್ಲಾಟವಾಡಿದೆ ಎಂದು ಅವರು ಆರೋಪಿಸಿದರು.

On Covid Deaths, Arvind Kejriwals Crematorium Jab At Yogi Adityanath
'2017 ರಲ್ಲಿ ಬಿಜೆಪಿಯ ಅತಿ ಎತ್ತರದ ನಾಯಕ (ಪ್ರಧಾನಮಂತ್ರಿ ನರೇಂದ್ರ ಮೋದಿ) ಉತ್ತರ ಪ್ರದೇಶದಲ್ಲಿ 'ಕಬ್ರೀಸ್ತಾನ್' (ಸ್ಮಶಾನಗಳು) ಮಾಡಬೇಕು ಎಂದು ಹೇಳಿದ್ದರು' ಎಂದು ಕೇಜ್ರಿವಾಲ್ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಲ್ಲಿ ಉಲ್ಲೇಖಿಸಿದ್ದಾರೆ. 'ದುರದೃಷ್ಟವಶಾತ್ ಯೋಗಿ ಆದಿತ್ಯನಾಥ್ ಅವರು ಕಳೆದ ಐದು ವರ್ಷಗಳಲ್ಲಿ ಕೇವಲ ಸ್ಮಶಾನಗಳನ್ನು ನಿರ್ಮಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ನಾಗರಿಕರನ್ನು ಅಲ್ಲಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ' ಎಂದು ಕೇಜ್ರಿವಾಲ್ ಹರಿಹಾಯ್ದಿದ್ದಾರೆ. ಅವರ ಪಕ್ಷವು ಮುಂಬರುವ ಚುನಾವಣೆಯಲ್ಲಿ ಗೋವಾದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.

ಕೇಜ್ರಿವಾಲ್ ಅವರು, ತಮ್ಮ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ 850 ಹೋರ್ಡಿಂಗ್‌ಗಳನ್ನು ಹಾಕಿದ್ದಾರೆ, ಆದರೆ ಅವರ ಸರ್ಕಾರ(ಬಿಜೆಪಿ) ದೆಹಲಿಯಲ್ಲಿ ಕೇವಲ 108 ಹೋರ್ಡಿಂಗ್‌ಗಳನ್ನು ಹಾಕಿದೆ ಎಂದು ಯುಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. 'ಕೆಲವೊಮ್ಮೆ ಇವರು ಉತ್ತರ ಪ್ರದೇಶ ಅಥವಾ ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರಾ ಎಂದು ಜನರು ಆಶ್ಚರ್ಯ ಪಡುತ್ತಾರೆ,'' ಎಂದು ಲೇವಡಿ ಮಾಡಿದ್ದಾರೆ.

ಪ್ರತಿಸ್ಪರ್ಧಿಗಳು ಉತ್ತರಪ್ರದೇಶದಲ್ಲಿ ಸ್ಮಶಾನಗಳನ್ನು ನಿರ್ಮಿಸುವಲ್ಲಿ ಉತ್ತಮವಾಗಿದ್ದರೂ, "ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಹೇಗೆ ನಿರ್ಮಿಸುವುದು" ಎಂದು ನಮಗೆ ತಿಳಿದಿದೆ ಎಂದು ಹೇಳಿದರು. ನಾನು ಅದನ್ನು ದೆಹಲಿಯಲ್ಲಿ ಮಾಡುತ್ತೇನೆ. ಹಾಗೆಯೇ ಉತ್ತರ ಪ್ರದೇಶದಲ್ಲಿಯೂ ಮಾಡುತ್ತೇನೆ ಎಂದು ಪಂಜಾಬ್‌ನಲ್ಲಿಯೂ ಅಭಿವೃದ್ಧಿ ಪಿಚ್ ಮಾಡುತ್ತಿರುವ ದೆಹಲಿ ಮುಖ್ಯಮಂತ್ರಿ ದೆಹಲಿಯಲ್ಲಿ ತಮ್ಮ ಸರ್ಕಾರದ ಕೆಲಸವನ್ನು ಪ್ರದರ್ಶಿಸಿದರು.

ಮುಂದಿನ ವರ್ಷದ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. 2022ರ ನಂತರದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ಚುನಾವಣೆಗಳು ನಡೆಯಲಿವೆ. ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+