ವಾರಣಾಸಿಯಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನೆದ ಪ್ರಧಾನಿ ಮೋದಿ
ವಾರಣಾಸಿ, ಜನವರಿ 22: ವಾರಣಾಸಿಯಲ್ಲಿ 'ಪ್ರವಾಸಿ ಭಾರತ್ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನಪಿಸಿಕೊಂಡು ಸಂತಾಪ ಸೂಚಿಸಿದ್ದಾರೆ.
ಭಾಷಣ ಆರಂಭಿಸಿದ ಕೂಡಲೇ ಸಿದ್ದಗಂಗಾ ಶ್ರೀಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆ ಸಂತಾಪ ಸೂಚಿಸುತ್ತೇನೆ ಎಂದರು.

ಸಿದ್ದಗಂಗಾ ಮಠಕ್ಕೆ ಹೋದಾಗ ಅವರು ನನ್ನನ್ನು ಮಗನಂತೆ ಕಾಣುತ್ತಿದ್ದರು, ಸ್ನೇಹದಿಂದ ಇರುತ್ತಿದ್ದರು, ಅನೇಕ ಬಾರಿ ಅವರ ಆಶೀರ್ವಾದ ಪಡೆವ ಪುಣ್ಯ ನನಗೆ ಒದಗಿತ್ತು ಎಂದು ಮೋದಿ ಹೇಳಿದರು.
ಅಂತಹಾ ಮಹಾನ್ ಸಂತ, ಮಹಾ ಋಷಿ ಅವರ ಅಗಲಿಕೆ ನಮ್ಮೆಲ್ಲರಿಗೂ ದುಖಃ ತಂದಿದೆ ಎಂದ ಮೋದಿ, ಮಾನವ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ದೇಶ ನೆನಸುತ್ತದೆ ಎಂದರು.

ಅಗಲಿದ ಮಹಾನ್ ಚೇತನಕ್ಕೆ ಆದರಪೂರ್ವಕವಾಗಿ ಅವರಿಗೆ ನಮಿಸುತ್ತೇವೆ ಎಂದು ಮೋದಿ ಅವರು ಹೇಳಿದರು. ಮೋದಿ ಅವರು ಇಂದು ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸುತ್ತಿಲ್ಲ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂತಿಮ ದರ್ಶನಕ್ಕೆ ಬರುವವರಿದ್ದಾರೆ.












Click it and Unblock the Notifications