• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಎಚ್‌ಪಿ ಸಭೆ: ಅಯೋಧ್ಯೆ ತೊರೆಯಲು ಮುಸ್ಲಿಂ ಅರ್ಜಿದಾರನ ಚಿಂತನೆ

|

ಲಕ್ನೋ, ನವೆಂಬರ್ 15: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬೃಹತ್ Rally ನಡೆಸಲು ತೀರ್ಮಾನಿಸಿದ್ದು, ಮೆರವಣಿಗೆ ನಡೆಸುವ ಉದ್ದೇಶದಲ್ಲಿ ಯಾವುದೇ ಬೇರೆ ಸಮಸ್ಯೆ ಕಾಣಿಸುತ್ತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಅಯೋಧ್ಯಾ ವಿವಾದದಲ್ಲಿ ಪ್ರಮುಖ ಅರ್ಜಿದಾರನಾಗಿರುವ ಮುಸ್ಲಿಂ ವ್ಯಕ್ತಿ ತಾವು ಪಟ್ಟಣವನ್ನು ತೊರೆಯಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ.

ಅಯೋಧ್ಯೆ ವಿವಾದ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ವಿಎಚ್‌ಪಿಯ ಧರ್ಮ ಸಭಾ ಕಾರ್ಯಕ್ರಮ ನವೆಂಬರ್ 25ರಂದು ಆಯೋಜನೆಯಾಗಿದೆ. ಲಕ್ಷಾಂತರ 'ರಾಮ ಭಕ್ತರು' ಇದರಲ್ಲಿ ಪಾಲ್ಗೊಳ್ಳಲಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಜನವರಿಯಲ್ಲಿ ಈ ವಿವಾದದ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆ ಆರಂಭವಾಗಲಿದೆ. ವಿಚಾರನೆ ಬಾಕಿ ಇರುವಾಗಲೇ ಸರ್ಕಾರವು ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಚಾಲನೆ ನೀಡಬಹುದು ಎಂಬ ಆಗ್ರಹಗಳು ಕೇಳಿಬಂದಿವೆ.

ಉತ್ತರ ಪ್ರದೇಶ ಸರ್ಕಾರ ಮತ್ತು ವಿವಿಧ ಸಂಘಟನೆಗಳ ನಡೆ ಅಯೋಧ್ಯಾದ ಮುಸ್ಲಿಂ ನಿವಾಸಿಗಳನ್ನು ಚಿಂತೆಗೀಡು ಮಾಡಿದೆ.

'ಬಾಬ್ರಿ ಮಸೀದಿಯ ನಾಶದ ಸಂದರ್ಭದಲ್ಲಿ 1992ರಲ್ಲಿ ನಮ್ಮ ಮನೆಗಳನ್ನು ಸುಟ್ಟುಹಾಕಲಾಯಿತು' ಎಂದು ಅಯೋಧ್ಯಾ ಭೂಮಿ ವಿವಾದದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬೆಂಗಳೂರಲ್ಲಿ ವಿಎಚ್‌ಪಿ ರ‍್ಯಾಲಿ

1992ರಂತೆಯೇ ಬೃಹತ್ ಗುಂಪು ಇಲ್ಲಿ ಸೇರಿಕೊಂಡರೆ ಅಯೋಧ್ಯಾದಲ್ಲಿರುವ ಮುಸ್ಲಿಮರಿಗೆ ಮತ್ತು ನನಗೆ ರಕ್ಷಣೆ ನೀಡಬೇಕಾಗುತ್ತದೆ. ನನಗೆ ಭದ್ರತೆ ನೀಡದೆ ಇದ್ದರೆ ನಾನು ನವೆಂಬರ್ 25ಕ್ಕೂ ಮುನ್ನ ಬೇರೆ ಎಲ್ಲಿಗಾದರೂ ಹೋಗಬೇಕಾಗುತ್ತದೆ ಎಂದು ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಂದಿರ್ ಥಾ, ಹೈ ಔರ್ ರಹೇಗಾ: ಯೋಗಿಯಿಂದ ರಾಮಮಂದಿರ ನಿರ್ಮಾಣದ ಸೂಚನೆ

ಈಗಾಗಲೇ ಪೊಲೀಸ್ ಭದ್ರತೆ ಹೊಂದಿರುವ ಅನ್ಸಾರಿ, ನಗರದಲ್ಲಿರುವ ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಹೆಚ್ಚುವರಿ ಭದ್ರತೆಗಾಗಿ ಕೋರಿದ್ದಾರೆ.

English summary
Main petitioner of Ayodhya land issue Iqbal Ansari said that, he is ready to leave ayodhya before the VHP rally scheduled on november 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X