ಮುಸ್ಲಿಂ ಲೀಗ್ ಎಂಬ ವೈರಸ್ ಸೋಂಕಿಗೆ ತುತ್ತಾದ ಕಾಂಗ್ರೆಸ್: ಯೋಗಿ ಟೀಕೆ
ಲಕ್ನೋ, ಏಪ್ರಿಲ್ 5: ಮುಸ್ಲಿಂ ಲೀಗ್ ಎನ್ನುವುದು 'ಮಾರಣಾಂತಿಕ ವೈರಸ್' ಇದ್ದಂತೆ ಮತ್ತು ಕಾಂಗ್ರೆಸ್ ಅದರ ಸೋಂಕಿಗೆ ಒಳಗಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೇಲಿ ಮಾಡಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಚುನಾವಣೆಯಲ್ಲಿ ಗೆದ್ದರೆ ವೈರಸ್ ಇಡೀ ದೇಶದಾದ್ಯಂತ ಹರಡುತ್ತದೆ ಎಂದು ಅವರು ಹೇಳಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, 'ಮುಸ್ಲಿಂ ಲೀಗ್ ಒಂದು ವೈರಸ್. ಇದು ಯಾರಿಗಾದರೂ ಸೋಂಕು ತಗುಲಿದರೆ ಅವರನ್ನು ಉಳಿಸಲು ಸಾಧ್ಯವಾಗದಂತಹ ವೈರಸ್. ಇಂದು ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ ಅದರ ಸೋಂಕಿಗೆ ತುತ್ತಾಗಿದೆ. ಒಂದು ವೇಳೆ ಅವರು ಗೆದ್ದರೆ ಏನಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ? ವೈರಸ್ ಇಡೀ ದೇಶದುದ್ದಕ್ಕೂ ಹರಡುತ್ತದೆ' ಎಂದಿದ್ದಾರೆ.
1857 के स्वतंत्रता संग्राम में मंगल पांडे के साथ पूरा देश अंग्रेजों के खिलाफ मिल कर लड़ा था, फिर ये मुस्लिम लीग का वायरस आया और ऐसा फैला कि पूरे देश का ही बंटवारा हो गया
— Chowkidar Yogi Adityanath (@myogiadityanath) 5 April 2019
आज फिर वही खतरा मंडरा रहा।
हरे झण्डे फिर से लहर रहे।
कांग्रेस मुस्लिम लीग वायरस से संक्रमित है, सावधान रहिये।
ಇದರ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಅವರು, 1857ರ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಇಡೀ ದೇಶವು ಮಂಗಲ್ ಪಾಂಡೆ ಅವರ ಪರವಾಗಿ ನಿಂತು ಬ್ರಿಟಿಷರ ವಿರುದ್ಧ ಹೋರಾಡಿತು. ಬಳಿಕ ಮುಸ್ಲಿಂ ಲೀಗ್ ವೈರಸ್ ಬಂದಿತು.
ಅದು ಯಾವ ರೀತಿ ವ್ಯಾಪಿಸಿತು ಎಂದರೆ ದೇಶವೇ ವಿಭಜನೆಯಾಯಿತು. ಈಗ ಮತ್ತೆ ಅದೇ ಭೀತಿ ಆವರಿಸಿದೆ. ಹಸಿರು ಬಾವುಟಗಳು ಮತ್ತೆ ಹಾರಾಡುತ್ತಿವೆ. ಕಾಂಗ್ರೆಸ್ ಮುಸ್ಲಿಂ ಲೀಗ್ ವೈರಸ್‌ನಿಂದ ಸೋಂಕಿತಗೊಂಡಿದೆ. ಎಚ್ಚರ! ಎಂದಿದ್ದಾರೆ.












Click it and Unblock the Notifications