'ಯುಪಿಯಲ್ಲಿ ಬಿಜೆಪಿ ತೊರೆಯುವ ಶಾಸಕರು ಇನ್ನೂ ಇದ್ದಾರೆ' ಶರದ್ ಪವಾರ್

ಲಕ್ನೋ ಜನವರಿ 13: ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರದಿಂದ ಅತೃಪ್ತ ಶಾಸಕರು ಬಿಜೆಪಿ ಸೇರಿ ಮೈತ್ರಿ ಸರ್ಕಾರ ಕುಸಿದು ಬಿತ್ತು. ಬಿಜೆಪಿ ಅಧಿಕಾರದ ಗದ್ದುಗೇರಿತು. ಇದೇ ರೀತಿ ಉತ್ತರಪ್ರದೇಶದಲ್ಲಿ ಬಿಜೆಪಿ ನೆಲಕ್ಕಚ್ಚಲಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ ಕಳೆದ ಕೆಲ ದಿನಗಳಿಂದ ಉತ್ತಪ್ರದೇಶದಲ್ಲಿ ಅತೃಪ್ತ ಶಾಸಕರು ಬಿಜೆಪಿ ಪಕ್ಷಕ್ಕೆ ಗುಡ್ ಬಾಯ್ ಹೇಳುತ್ತಿದ್ದಾರೆ. ಜೊತೆಗೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದು ಬಿಜೆಪಿಗೆ ಬುಹುದೊಡ್ಡ ತಲೆ ನೋವಾಗಿದೆ. ಉತ್ತರಪ್ರದೇಶ ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಾಗಲೇ ಶಾಸಕರ ಈ ನಡೆ ಪಕ್ಷದ ಬೇರನ್ನೇ ಅಲುಗಾಡಿಸಿದೆ. ಸಾಲದಕ್ಕೆ ಬಿಜೆಪಿ ವಿರುದ್ಧ ಶಾಸಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ಬಹುದೊಡ್ಡ ಕಂಟಕವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಮಾತ್ರವಲ್ಲದೇ ಇನ್ನೂ ಕೆಲ ಶಾಸಕರು ಬಿಜೆಪಿ ತೊರೆಯುತ್ತಾರೆಂದು ಹೇಳಲಾಗುತ್ತಿದ್ದು ಈ ಬಾರಿ ಉತ್ತರಪ್ರದೇಶ ಚುನಾವಣೆ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಉತ್ತರ ಪ್ರದೇಶದ ನಾಲ್ವರು ಬಿಜೆಪಿ ಶಾಸಕರು ಇಂದು ಪಕ್ಷವನ್ನು ತೊರೆಯಬಹುದು ಎಂದು ಹೇಳಿದ್ದಾರೆ. "ಬಿಜೆಪಿ ನಾಯಕರೊಬ್ಬರು ಪಕ್ಷ ಬಿಟ್ಟು ಒಂದು ದಿನವೂ ಕಳೆದಿಲ್ಲ. ಅದಾಗಲೇ ಸಾಲಿಡಿದು ಶಾಸಕರು ಬಿಜೆಪಿ ತೊರೆಯುತ್ತಿದ್ದಾರೆ. ಇನ್ನೂ 13 ಶಾಸಕರು ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಿದ್ದಾರೆ. ನಾಲ್ವರು ಬಿಜೆಪಿ ಶಾಸಕರು ಇವತ್ತೇ ಪಕ್ಷ ತೊರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ" ಎಂದು ಪವಾರ್ ಹೇಳಿದ್ದಾರೆ.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್, ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ ಎಂದು ಘೋಷಿಸಿದರು. "ನಾವು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಒಂದು ಸ್ಥಾನವನ್ನು ಘೋಷಿಸಲಾಗಿದೆ ಮತ್ತು ಇತರ ಸ್ಥಾನಗಳಿಗೆ ಮಾತುಕತೆ ನಡೆಯುತ್ತಿದೆ. ಯುಪಿಯಲ್ಲಿ ರಚನೆಯಾಗುವ ಮೈತ್ರಿಗೆ ನಾವು ಬೆಂಬಲ ನೀಡುತ್ತೇವೆ" ಎಂದು ಮಲಿಕ್ ಹೇಳಿದರು.

Four BJP MLAs to resign today Sharad Pawar

Recommended Video

      mekedatu padayatra ಕೊನೆಗೊಳಿಸಿದ್ದಕ್ಕೆ ಕಾರಣ ತಿಳಿಸಿದ Siddaramaiah | Oneindia Kannada
      ಗುರುವಾರ ಬಿಜೆಪಿ ತೊರೆದು ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸಿರುವ ಉತ್ತರ ಪ್ರದೇಶದ ಮಾಜಿ ಸಚಿವ ಧರಂ ಸಿಂಗ್ ಸೈನಿ ಅವರು ಆಜ್ ತಕ್‌ಗೆ ಮಾತನಾಡಿ, "ಜನವರಿ 20 ರವರೆಗೆ ಪ್ರತಿ ದಿನ ಒಬ್ಬ ಯುಪಿ ಸಚಿವರು ಮತ್ತು ಒಬ್ಬ ಬಿಜೆಪಿ ಶಾಸಕ ರಾಜೀನಾಮೆ ನೀಡುತ್ತಾರೆ" ಎಂದು ಬಿಗ್ ಶಾಕ್ ಕೊಟ್ಟಿದ್ದಾರೆ. ನೀವು ಬಿಜೆಪಿಯನ್ನು ಏಕೆ ತೊರೆದಿದ್ದೀರಿ ಎಂಬ ಪ್ರಶ್ನೆಗೆ ಸೈನಿ ಅವರು, "ಪಕ್ಷದಲ್ಲಿ ನಾನು ಹೇಳುವುದನ್ನು ಕೇಳುವವರು ಯಾರೂ ಇರಲಿಲ್ಲ, 140 ಶಾಸಕರು ಧರಣಿ ಕುಳಿತು ಬೆದರಿಕೆ ಹಾಕಿದರು" ಎಂದು ಅವರು ಹೇಳಿದರು.

      ಧೌರಾಹಾ ಕ್ಷೇತ್ರದ ಬಿಜೆಪಿ ಶಾಸಕ ಬಾಲ ಪ್ರಸಾದ್ ಅವಸ್ತಿ ಇಂದು ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಐದು ಬಾರಿ ಶಾಸಕರಾಗಿರುವ ಅವರು ಶೀಘ್ರದಲ್ಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಲಿದ್ದಾರೆ. ಬಿಧುನಾ ಶಾಸಕ ವಿನಯ್ ಶಾಕ್ಯ ಅವರು ಯುಪಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ರಾಜೀನಾಮೆ ನೀಡಿದರು. ವಿನಯ್ ಶಾಕ್ಯ ಕಳೆದ ಮೂರು ದಿನಗಳಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಎಂಟನೇ ಯುಪಿ ಶಾಸಕರಾಗಿದ್ದಾರೆ. ಇಂದು ಮುಂಜಾನೆ ಶಾಸಕ ಮುಖೇಶ್ ಶರ್ಮಾ ಕೇಸರಿ ಪಕ್ಷವನ್ನು ತೊರೆದಿದ್ದಾರೆ. ವಿನಯ್ ಶಾಕ್ಯ ಅವರು ಯುಪಿ ಶಾಸಕಾಂಗ ಸಭೆಯಲ್ಲಿ ಬಿಧುನಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ."ಸ್ವಾಮಿ ಪ್ರಸಾದ್ ಮೌರ್ಯ ಅವರು ದೀನದಲಿತರ ಧ್ವನಿ ಮತ್ತು ಅವರು ನಮ್ಮ ನಾಯಕ. ನಾನು ಅವರೊಂದಿಗೆ ಇದ್ದೇನೆ" ಎಂದು ಶಾಕ್ಯ ಅವರು ಪಕ್ಷಕ್ಕೆ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+