ಉತ್ತರ ಪ್ರದೇಶದಲ್ಲಿ ಆಂಬುಲೆನ್ಸ್ ಅಪಘಾತ; ಐವರು ಸಾವು
ಲಖ್ನೋ, ಜನವರಿ 26: ದಾರಿ ಬದಿ ನಿಂತಿದ್ದ ಟ್ರಕ್ ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಡೋದಿ ಜಿಲ್ಲೆಯ ಗೋಪಿಗಂಜ್ ನಲ್ಲಿ ನಡೆದಿದೆ.
ಮಂಗಳವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಅಸಂಸೋಲ್ ನಿಂದ ಆಂಬುಲನ್ಸ್ ರಾಜಸ್ಥಾನದ ಚಿತ್ತೋರ್ ಘರ್ ಕಡೆಗೆ ಶವವನ್ನು ಸಾಗಿಸುತ್ತಿತ್ತು. ಈ ಸಂದರ್ಭ ಅಪಘಾತ ಸಂಭವಿಸಿದೆ.

ಆಂಬುಲೆನ್ಸ್ ಅತಿ ವೇಗವಾಗಿ ಚಲಿಸುತ್ತಿದ್ದು, ಮಂಜು ಆವರಿಸಿದ್ದರಿಂದ ರಸ್ತೆ ಬದಿ ನಿಂತಿದ್ದ ಟ್ರಕ್ ಕಾಣದೇ ಅದಕ್ಕೆ ರಭಸವಾಗಿ ಡಿಕ್ಕಿ ಹೊಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕ ಒಳಗೊಂಡಂತೆ ಆಂಬುಲೆನ್ಸ್ ನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಬಡೋದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications