ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮೃತದೇಹವನ್ನು ತಿಂದ ನಾಯಿ: ವೈರಲ್ ವಿಡಿಯೋ

ಲಕ್ನೋ, ನವೆಂಬರ್ 27: ಸ್ಟ್ರೆಚರ್‌ನಲ್ಲಿ ಇರಿಸಲಾಗಿದ್ದ ಮೃತ ಬಾಲಕಿಯ ದೇಹವನ್ನು ನಾಯಿಯೊಂದು ಕಚ್ಚಿ ತಿನ್ನುವ ಹೃದಯ ಹಿಂಡುವಂತಹ ವಿಡಿಯೋವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದ ಸಂಭಾಳ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.

ಅಪಘಾತವೊಂದರಲ್ಲಿ ಬಾಲಕಿ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಂಭಾಳ್ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಆದರೆ ಮೃತದೇಹವನ್ನು ಆಸ್ಪತ್ರೆಯ ಮೆಟ್ಟಿಲನ ಬಳಿ ಸ್ಟ್ರೆಚರ್ ಒಂದರಲ್ಲಿ ನಿರ್ಲಕ್ಷ್ಯದಿಂದ ಇರಿಸಲಾಗಿತ್ತು. ಹೆಣ್ಣು ನಾಯಿಯೊಂದು ಬಾಲಕಿಯ ದೇಹವನ್ನು ಕಚ್ಚಿ ತಿನ್ನುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಆಘಾತಕಾರಿ ಘಟನೆಯ ದೃಶ್ಯವನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.

ಬಾಲಕಿಯ ತಂದೆಯ ಕಣ್ಣೀರು

ಬಾಲಕಿಯ ತಂದೆಯ ಕಣ್ಣೀರು

'ಆ ದೇಹ ನನ್ನ ಮಗಳದ್ದು. ಅವಳು ಅಪಘಾತದಲ್ಲಿ ಮೃತಪಟ್ಟಿದ್ದಳು. ಎರಡು ಗಂಟೆ ಹಿಂದೆ ದೇಹವನ್ನು ಆಸ್ಪತ್ರೆಗೆ ತರಲಾಗಿತ್ತು. ಆದರೆ ಅದನ್ನು ಅವರು ನೋಡಿಯೇ ಇಲ್ಲ. ನಾಯಿಗಳು ದೇಹವನ್ನು ತಿನ್ನುತ್ತಿವೆ. ಇದು ಆಸ್ಪತ್ರೆ ಸಿಬ್ಬಂದಿಯ ಸ್ಪಷ್ಟ ನಿರ್ಲಕ್ಷ್ಯವನ್ನು ತೋರಿಸುತ್ತದೆ' ಎಂದು ಮೃತ ಬಾಲಕಿಯ ದುರ್ದೈವಿ ತಂದೆ ಕಣ್ಣೀರಿಟ್ಟಿದ್ದಾರೆ.

ತನಿಖೆಗೆ ಸಮಿತಿ ರಚನೆ

ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅಮಿತಾ ಸಿಂಗ್ ತಿಳಿಸಿದ್ದಾರೆ. ಘಟನೆಗೆ ಹೊಣೆಗಾರರಾಗಿ ತಪ್ಪಿತಸ್ಥರೆಂದು ಕಂಡುಬಂದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವ್ಯಾಪಕ ಆಕ್ರೋಶ

ವ್ಯಾಪಕ ಆಕ್ರೋಶ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆಯೂ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳ ಒಳಭಾಗದಲ್ಲಿ ನಾಯಿಗಳು ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಪಾದಗಳ ಒಳ ಹೊಕ್ಕಿದ್ದ ಇಲಿಗಳು

ಪಾದಗಳ ಒಳ ಹೊಕ್ಕಿದ್ದ ಇಲಿಗಳು

ಆರೋಗ್ಯ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ ಇದೇ ರೀತಿಯ ಘಟನೆ ಆಗ್ರಾದ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬಂದಿತ್ತು. ಮೇ ತಿಂಗಳಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಮಹಿಳಾ ಕ್ಯಾನ್ಸರ್ ರೋಗಿ ಅವರನ್ನು ಯಾರೂ ನೋಡಿಕೊಳ್ಳದೆ ನಾಲ್ಕು ದಿನ ಹಾಗೆಯೇ ಬಿಟ್ಟಿದ್ದರು. ರೋಗಿಯ ಗಂಡ ಆಕೆಗೆ ಹೊದಿಸಲಾಗಿದ್ದ ಬ್ಲಾಂಕೆಟ್ ತೆಗೆದಾಗ ಆಕೆಯ ಪಾದದ ಭಾಗಗಳನ್ನು ಇಲಿಗಳು ತಿಂದಿರುವುದು ಪತ್ತೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+