ಹಸು ಸಗಣಿ ಕುರಿತು ಸಂಶೋಧನೆ ಮಾಡಿ: ವಿಜ್ಞಾನಿಗಳಿಗೆ ಕೇಂದ್ರ ಸಚಿವರ ಸಲಹೆ
ಮಥುರಾ, ಜನವರಿ 15: ಹಸುವಿನ ಸಗಣಿಯ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸುವಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿಜ್ಞಾನಿಗಳಿಗೆ ಸಲಹೆ ನೀಡಿದ್ದಾರೆ.
ಹಸು ಹಾಲು ಕೊಡುವುದನ್ನು ನಿಲ್ಲಿಸಿದ ನಂತರವೂ ರೈತರಿಗೆ ಅವುಗಳನ್ನು ಸಾಕುವುದು ಆರ್ಥಿಕವಾಗಿ ಲಾಭದಾಯಕವಾಗುವಂತೆ ಮಾಡಲು ಈ ಸಂಶೋಧನೆ ನೆರವಾಗಬಹುದು ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಡೆದ 12 ರಾಜ್ಯಗಳ ಉಪ ಕುಲಪತಿಗಳು ಮತ್ತು ವಶುವೈದ್ಯ ಅಧಿಕಾರಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಬೀದಿ ದನಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ ಎಂದು ಗಿರಿರಾಜ್ ಸಿಂಗ್ ಹೇಳಿದರು.

ರೈತರು ಹಸುಗಳ ಸಗಣಿಯಿಂದ ಮತ್ತು ಮೂತ್ರದಿಂದಲೂ ಹಣ ಸಂಪಾದನೆ ಮಾಡಲು ಸಾಧ್ಯವಾದರೆ ಅವರು ಗೊಡ್ಡು ಹಸುಗಳನ್ನು ಹೊರಹಾಕುವುದಿಲ್ಲ ಎಂದರು.
ಹಾಲು, ಸಗಣಿ ಮತ್ತು ಗೋಮೂತ್ರಗಳ ಮೌಲ್ಯವರ್ಧನೆ ಮಾಡುವುದರಿಂದ ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಕೊಡುಗೆ ಸಿಗುತ್ತದೆ. ಕೃಷಿಗೆ ತೊಡಗಿಸುವ ವೆಚ್ಚ ಕಡಿಮೆಯಾದರೆ ಹಳ್ಳಿಗಳು ಮತ್ತು ರೈತರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.












Click it and Unblock the Notifications