ಕೊರೊನಾ ಸೋಂಕಿತೆ ಮೇಲೆ ವೈದ್ಯನಿಂದ ಅತ್ಯಾಚಾರಕ್ಕೆ ಯತ್ನ!

ಲಕ್ನೌ, ಜುಲೈ 24: ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರ ಹಾಗೂ ಪ್ರಯತ್ನಗಳು ನಡೆಯುತ್ತಿರುವ ಹಲವು ಘಟನೆಗಳು ವರದಿಯಾಗಿದೆ. ಈಗ ಉತ್ತರ ಪ್ರದೇಶದ ಅಲಿಗ್ರಹ ದೀನ ದಯಾಳ್ ಆಸ್ಪತ್ರೆಯಲ್ಲಿ ಹೊಸ ಪ್ರಕರಣ ದಾಖಲಾಗಿದೆ.

ಕೊರೊನಾ ಕರ್ತವ್ಯದಲ್ಲಿದ್ದ 30 ವರ್ಷದ ವೈದ್ಯ, 25 ವರ್ಷದ ಸೋಂಕಿತೆ ಮಹಿಳೆಗೆ ಲೈಂಗಿಕ ಕಿರುಕುಳು ನೀಡಿದ್ದಾನೆ, ಅಷ್ಟೆ ಅಲ್ಲದೇ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದಾನೆ ಎಂದು ದೂರು ದಾಖಲಾಗಿದೆ. ಈ ಸಂಬಂಧ ಆಸ್ಪತ್ರೆಯ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಆಸ್ಪತ್ರೆ ವೈದ್ಯರು ಮಹಿಳೆಯ ಐಸೋಲೇಶನ್ ವಾರ್ಡ್‌ಗೆ ಹೋಗಿರುವುದು ಕಂಡು ಬಂದಿದೆ. ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ವೈದ್ಯರು ದಾಖಲಾತಿ ಅವಧಿಯಲ್ಲಿ ಎರಡು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.

Doctor has Tried To Rape on COVID 19 Woman patient

ಮಹಿಳೆಯ ದೂರಿನ ಅನ್ವಯ ಸ್ಥಳಿಯ ಪೊಲೀಸರು ಸೆಕ್ಷನ್ 354 (ಕಿರುಕುಳ) ಮತ್ತು 376 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಹ ಪ್ರಶ್ನಿಸಿದ್ದಾರೆ.

ಅಂದ್ಹಾಗೆ, 25 ವರ್ಷದ ಮಹಿಳೆ ಅಲಿಗ್ರಹದಲ್ಲಿ ನೆಲೆಸಿದ್ದು, ದೆಹಲಿಯಲ್ಲಿ ಕೆಲಸ ಮಾಡುತ್ತಾಳೆ. ಮನೆಗೆ ಬಂದ ವೇಳೆ ಕೊವಿಡ್ ರೋಗದ ಲಕ್ಷಣಗಳು ಕಂಡು ಬಂದಿದೆ. ಬಳಿಕ, ಆಸ್ಪತ್ರೆಗೆ ದಾಖಲಾಗಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+