ಅಖಿಲೇಶ್ ಯಾದವ್ ಗೆ ಜೀವ ಬೆದರಿಕೆ ಹಾಕಿದ್ರಾ ಬಿಜೆಪಿ ನಾಯಕರು?

ಕಾನ್ಪುರ್, ಫೆಬ್ರವರಿ.16: ಭಾರತೀಯ ಜನತಾ ಪಕ್ಷದ ನಾಯಕರೊಬ್ಬರಿಂದ ತಮಗೆ ಪ್ರಾಣ ಬೆದರಿಕೆಯಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ತಮ್ಮ ಮೊಬೈಲ್ ಗೆ ಕರೆ ಮಾಡಿದ ಬಿಜೆಪಿ ನಾಯಕರೊಬ್ಬರು ಪ್ರಾಣ ಬೆದರಿಕೆಯೊಡ್ಡಿದ್ದಲ್ಲೇ, ಮೆಸೇಜ್ ಕೂಡಾ ಮಾಡಿದ್ದಾರೆ ಎಂದು ಅಖಿಲೇಶ್ ದೂರಿದ್ದಾರೆ.

ಇದಕ್ಕೂ ಮುನ್ನ ಕನೌಜ್ ನಲ್ಲಿರುವ ಸಮಾಜವಾದಿ ಪಕ್ಷದ ಕಚೇರಿ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಅಖಿಲೇಶ್ ಯಾದವ್ ಭಾಷಣ ಮಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಎದ್ದುನಿಂತ ಜೈ ಶ್ರೀರಾಮ್ ಎಂದು ಕೂಗಿದ ಘಟನೆಯು ನಡೆದಿದೆ.

ದೇಶದಲ್ಲಿ ಆಗುತ್ತಿರುವ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅಖಿಲೇಶ್ ಯಾದವ್ ಮಾತನಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಎದ್ದು ನಿಂತು ನೀವು ಮುಖ್ಯಮಂತ್ರಿ ಆದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾನೆ.

Akhilesh Yadav Get A Threat Call From BJP Leader

ಸಮೀಪಕ್ಕೆ ಬಂದ ಪ್ರಶ್ನೆ ಕೇಳು ಎಂದ ಅಖಿಲೇಶ್:

ಜನರ ಮಧ್ಯೆದಲ್ಲಿ ಎದ್ದು ನಿಂತ ವ್ಯಕ್ತಿಯ ಪ್ರಶ್ನೆ ಅಖಿಲೇಶ್ ಯಾದವ್ ಅವರಿಗೆ ಅರ್ಥವಾಗಲಿಲ್ಲ. ಹೀಗಾಗಿ ಸಮೀಪಕ್ಕೆ ಬಂದು ಕೇಳು ಎಂದು ತಿಳಿಸುತ್ತಿದ್ದಂತೆ ವ್ಯಕ್ತಿಯು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ. ನೀನು ಬಿಜೆಪಿಯವನೇ ಎಂದು ಪ್ರಶ್ನಿಸುತ್ತಿದ್ದಂತೆ ವ್ಯಕ್ತಿಯು ತಾನು ಶಿವ, ವಿಷ್ಣು, ರಾಮ ಮತ್ತು ಕೃಷ್ಣನನ್ನು ಪೂಜಿಸುವವನು ಎಂದು ಕೂಗಿದ್ದಾನೆ.

ಇನ್ನು, ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ವ್ಯಕ್ತಿಯು ಗುಗ್ರಾಪುರ್ ಗ್ರಾಮದ ಗೋವಿಂದ್ ಶುಕ್ಲಾ ಎಂದು ಗುರುತಿಸಲಾಗಿದ್ದು, ಪದವೀಧರನಾಗಿರುವ ವ್ಯಕ್ತಿ ಕಾನ್ಪುರ್ ನಲ್ಲಿ ಎಲ್ಎಲ್ ಬಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+