ಮಲ್ಯ ಕೈತಪ್ಪಲಿದೆ ಲಂಡನ್ನಿನ ಬಂಗಲೆ, ಚಿನ್ನದ ಕಮೋಡ್!
ಲಂಡನ್, ನವೆಂಬರ್ 22: ಭಾರತದ ಬ್ಯಾಂಕುಗಳಲ್ಲಿ ಸಾಲ ಮಾಡಿ, ತೀರಿಸದೆ ಉದ್ದೇಶಪೂರ್ವಕ ಸುಸ್ತಿದಾರನಾಗಿರುವ ಮಲ್ಯ ಅವರು ಸದ್ಯ ಲಂಡನ್ ನಿವಾಸಿ.
ಸ್ವಿಸ್ ನ ಯುಬಿಎಸ್ ಬ್ಯಾಂಕಿಗೆ 88000 ಬ್ರಿಟಿಷ್ ಪೌಂಡ್ ಪಾವತಿಸಬೇಕಿರುವ ಮಲ್ಯ ಅವರು ಕಾರ್ನ್ ವಾಲ್ ಟೆರಾಸ್ ನಲ್ಲಿರುವ ತಮ್ಮ ಅರಮನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೆಂಟ್ರಲ್ ಲಂಡನ್ನಿನಲ್ಲಿರುವ ನಿವಾಸವನ್ನು ಬೋಗ್ಯಕ್ಕೆ ಪಡೆದಿದ್ದು, 20.4 ಮಿಲಿಯನ್ ಪೌಂಡ್ ಮೊತ್ತ ಪಾವತಿಸಬೇಕಿದೆ.
62 ವರ್ಷ ವಯಸ್ಸಿನ ಮಲ್ಯ ಅವರ ರೋಸ್ ಕ್ಯಾಪಿಟಲ್ ವೆಂಚರ್ಸ್ ಮೂಲಕ ಈ ಬಂಗಲೆಯನ್ನು ಬೋಗ್ಯಕ್ಕೆ ಪಡೆಯಲಾಗಿದ್ದು, ಮಲ್ಯ ಅವರ ತಾಯಿ ಲಲಿತಾ, ಮಗ ಸಿದ್ದಾರ್ಥ ಅವರು ಮನೆ ಮೇಲೆ ಹಕ್ಕಿದೆ.

ಭಾರತದ ಬ್ಯಾಂಕುಗಳಿಗೆ ನೀಡಬೇಕಿರುವ 9,000 ಕೋಟಿ ರು ಸಾಲ ಪಾವತಿ, ಮನಿಲಾಂಡ್ರಿಂಗ್, ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಸ್ಕಾಟ್ ಲ್ಯಾಂಡ್ ಯಾರ್ಡ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದು, ಮುಂದಿನ ತಿಂಗಳು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ.
ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್ ಆದೇಶದಂತೆ ಭಾರತದ 13 ಬ್ಯಾಂಕುಗಳು 1,145 ಮಿಲಿಯನ್ ಪೌಂಡ್ ಮೊತ್ತವನ್ನು ಮಲ್ಯರಿಂದ ಪಡೆಯಬಹುದಾಗಿದ್ದು, ಇದಕ್ಕಾಗಿ ವಿಶ್ವದೆಲ್ಲೆಡೆ ಇರುವ ಅವರ ಆಸ್ತಿಯನ್ನು ಜಪ್ತಿ ಮಾಡಬಹುದಾಗಿದೆ.












Click it and Unblock the Notifications