ಜೂಲಿಯನ್ ಅಸ್ಸಾಂಜ್ ಜೈಲಿನಲ್ಲೇ ಸಾಯಬಹುದು: ವೈದ್ಯರ ಕಳವಳ
ಲಂಡನ್,ನವೆಂಬರ್ 25: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಮುಖ ಹಗರಣಗಳನ್ನು ಬಯಲಿಗೆಳೆದ, ಪ್ರಮುಖ ಸರ್ಕಾರಗಳ ಗೌಪ್ಯ ಮಾಹಿತಿಗಳನ್ನು ಹೊರ ಹಾಕಿದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಜೈಲಿನಲ್ಲೇ ಸಾವಿಗೀಡಾಗುವ ಅಪಾಯವಿದೆ ಎಂದು ಸುಮಾರು 60 ವೈದ್ಯರು ಆತಂಕ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.
ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ವೈದ್ಯರು ಪತ್ರ ಬರೆದಿದ್ದು, 48 ವರ್ಷ ವಯಸ್ಸಿನ ಆಸ್ಟ್ರೇಲಿಯದ ಅಸಾಂಜ್ ಆರೋಗ್ಯ ತೀರಾ ಗಂಭೀರ ಸ್ಥಿತಿಯಲ್ಲಿದೆ ಎಂದಿದ್ದಾರೆ.
ಬೆಹುಗಾರಿಕೆ ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ಅಸ್ಸಾಂಜ್ ಅವರನ್ನು ಅಮೆರಿಕಕ್ಕೆ ಒಪ್ಪಿಸುವಂತೆ ಬ್ರಿಟನ್ ಸರ್ಕಾರವನ್ನು ಅಮೆರಿಕ ಸರ್ಕಾರ ಮನವಿ ಮಾಡಿದ್ದು, ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಒಪ್ಪಂದಕ್ಕೆ ಇಂಗ್ಲೆಂಡ್ ಸಹಿಹಾಕಿತ್ತು.

ಆದರೆ ಅಸ್ಸಾಂಜ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಜೈಲಿನಲ್ಲಿಯೇ ಸಾವಿಗೀಡಾಗಬಹುದು ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬೇಹುಗಾರಿಕೆ ಕಾಯ್ದೆಯಡಿ ಅಮೆರಿಕ ಅಸ್ಸಾಂಜ್ ಅವರಿಗೆ 175 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.












Click it and Unblock the Notifications