ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ ರಾಣಿ ಎಲಿಜಬೆತ್‌ಗೆ ಕೋವಿಡ್‌ ದೃಢ

|
Google Oneindia Kannada News

ಲಂಡನ್‌, ಫೆಬ್ರವರಿ 20: ರಾಣಿ ಎಲಿಜಬೆತ್ (95) ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಬಕಿಂಗ್‌ಹ್ಯಾಮ್‌ನ ಅರಮನೆ ಮಾಹಿತಿ ನೀಡಿದೆ. ಈ ಬಗ್ಗೆ ಯುಕೆ ಅಧಿಕಾರಿಗಳು ಭಾನುವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

""ರಾಣಿ ಇಂದು ಕೋವಿಡ್‌ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ," ಎಂದು ಬಕಿಂಗ್ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ. "ಶೀತವನ್ನೂ ಒಳಗೊಂಡಂತೆ ಅವರಿಗೆ ಕೋವಿಡ್‌ನ ಸೌಮ್ಯ ರೋಗಲಕ್ಷಣಗಳಿವೆ. ಈ ವಾರ ಅವರು ತಮ್ಮ ವಿಂಡ್ಸರ್ ಕ್ಯಾಸಲ್ ನಿವಾಸದಲ್ಲಿ ಅಲ್ಪ ಪ್ರಮಾಣದಲ್ಲಿ ಕರ್ತವ್ಯಗಳನ್ನು ಮುಂದುವರಿಸುವ ನಿರೀಕ್ಷೆಯಿದೆ," ಎಂದು ಬಕಿಂಗ್‌ಹ್ಯಾಮ್‌ನ ಅರಮನೆ ಹೇಳಿದೆ.

"ಅವರು ವೈದ್ಯಕೀಯ ಆರೈಕೆಯನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಮತ್ತು ಎಲ್ಲಾ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ," ಎಂದು ಕೂಡಾ ವರದಿ ಉಲ್ಲೇಖ ಮಾಡಿದೆ. ರಾಣಿಯ ಮಗ, ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಇಬ್ಬರೂ ಈ ತಿಂಗಳ ಆರಂಭದಲ್ಲಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ.

COVID: Queen Elizabeth Tests Positive

ರಾಣಿ ಎಲಿಜಬೆತ್‌ ಅವರ ಹಿರಿಯ ಮಗ ಪ್ರಿನ್ಸ್ ಚಾರ್ಲ್ಸ್ ಫೆಬ್ರುವರಿ 10 ರಂದು ವಿಂಡ್ಸರ್‌ನಲ್ಲಿ ತಾಯಿಯನ್ನು ಭೇಟಿಯಾಗಿದ್ದರು. ಅದಾದ ಎರಡು ದಿನಗಳಲ್ಲಿ ಚಾರ್ಲ್ಸ್‌ ಅವರಿಗೆ ಕೋವಿಡ್‌ ಇರುವುದು ದೃಢವಾಗಿತ್ತು. ಈಗ ಬೇರೆ ಯಾರಿಗೆ ಕೊವಿಡ್‌ ಸೋಂಕು ದೃಢಪಟ್ಟಿದೆ ಎಂಬುವುದು ಸ್ಪಷ್ಟವಾಗಿಲ್ಲ.

Recommended Video

Sourav Ganguly ಸಪೋರ್ಟ್ ಇದ್ರೂ ಸಾಹಾಗೆ ದ್ರಾವಿಡ್ ಮೋಸ‌ ಮಾಡಿದ್ದು ಹೇಗೆ? | Oneindia Kannada

95 ವರ್ಷದ ರಾಣಿ ಎಲಿಜಬೆತ್ ಈಗಾಗಲೇ ಮೂರು ಡೋಸ್‌ ಕೊರೊನಾ ವೈರಸ್‌ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ. ಕೋವಿಡ್‌ ಪಾಸಿಟಿ‌ವ್‌ಗೆ ಒಳಗಾಗುವ ಜನರು ಕನಿಷ್ಠ ಐದು ದಿನಗಳವರೆಗೆ ಸ್ವಯಂ-ಪ್ರತ್ಯೇಕಿಸಬೇಕಾಗುತ್ತದೆ, ಆದರೂ ಮುಂಬರುವ ವಾರದಲ್ಲಿ ಇಂಗ್ಲೆಂಡ್‌ಗೆ ಆ ನಿರ್ಬಂಧವನ್ನು ತೆಗೆದುಹಾಕಲು ಬ್ರಿಟಿಷ್ ಸರ್ಕಾರ ಯೋಜಿಸಿದೆ.

English summary
The 95-year-old monarch is experiencing "mild" cold-like symptoms, according to a Buckingham Palace statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X