Kumta Elections : ಕುಮಟಾದಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿ
ಕುಮಟಾ, ಮಾರ್ಚ್ 24: ಉತ್ತರಕನ್ನಡ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ ಕುಮಟಾ. ಇದು ಕರಾವಳಿ ಪಟ್ಟಣವಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಕಾರವಾರದಿಂದ 60 ಕಿ.ಮೀ. ದೂರದಲ್ಲಿ ಅಂಕೋಲಾದಿಂದ 36 ಕಿ.ಮೀ ಮತ್ತು ಹೊನ್ನಾವರದಿಂದ ಸುಮಾರು 2 ಕಿ.ಮಿ ದೂರದಲ್ಲಿ ಕುಮಟಾ ಇದೆ. ಪ್ರಕೃತಿ ಸೊಬಗಿಗೆ ಕುಮಟಾ ಹೆಸರುವಾಸಿಯಾಗಿದ್ದು ವನ್ನಳ್ಳಿ, ಕಾಗಲ ಮತ್ತು ಧಾರೇಶ್ವರ ಬೀಚ್‍ಗಳು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತವೆ. ಶಾಂತೇರಿ ಕಾಮಾಕ್ಷಿ ದೇವಾಲಯ, ಮಹಾಲಸ ದೇವಾಲಯ, ಹೆಗಡೆ, ಬಾಡಾದ ಅಮ್ಮನವರ ದೇವಾಲಯಗಳು ಪ್ರಸಿದ್ದಿ ಪಡೆದಿದೆ.

ಕುಮಟಾದ ಹಳೆಯ ಹೆಸರು ಕುಂಭಾಪುರ. ಬ್ರಿಟಿಷರ ಕಾಲದಲ್ಲಿ ಕುಮಟಾ ಪಟ್ಟಣವು ಮುಂಬಯಿ ಪ್ರಾಂತ್ಯವಾಗಿ ಉತ್ತರ ಕನ್ನಡದ ಒಂದು ಭಾಗವಾಗಿತ್ತು. ಇಲ್ಲಿ ವಿಶೇಷವಾಗಿ ಹತ್ತಿ, ಗಂಧದ ಕೆತ್ತನೆ ಕೆಲಸ ಪ್ರಮುಖವಾಗಿದ್ದು ವ್ಯಾಪಾರ ವಹಿವಾಟಿನಲ್ಲೂ ಹೆಸರುವಾಸಿಯಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ೦ದ ಇಂಗ್ಲೆಂಡಿಗೆ ಸರಬರಾಜಾಗುತ್ತಿದ್ದ ಹತ್ತಿಯು ಕುಮಟಾ ಹತ್ತಿಯೆಂದೇ ಪ್ರಸಿದ್ಧವಾಗಿತ್ತು. ಕುಮಟಾ ತೆಂಗಿನ ಕಾಯಿಯಲ್ಲೂ ಪ್ರಸಿದ್ಧಿ ಪಡೆದಿದೆ. ಬೃಹದಾಕಾರದ ಶಿಲಾರೂಪಗಳಿರುವ ಯಾಣ, ಶಿವನ ಆತ್ಮಲಿಂಗವಿರುವ ಸ್ಥಳ ಗೋಕರ್ಣ, ಮಿರ್ಜಾನ್ ಕೋಟೆಗಳು ಕುಮಟಾದ ಪ್ರಮುಖ ಆಕರ್ಷಣೆಗಳು.
ಗಂಗಾವಳಿ, ಶರಾವತಿ ನದಿ ದಂಡೆಗಳ ಮಧ್ಯದಲ್ಲಿರುವ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ತುಸು ಜೋರಾಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ಜಿದ್ದಾಜಿದ್ದಿಗೆ ರಣರಂಗವಾಗಿ ಮಾರ್ಪಟ್ಟಿದೆ. ಕುಮಟಾ ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿ ಯಾವುದೇ ಪಕ್ಷ ಸತತವಾಗಿ ಗೆದ್ದ ಉದಾಹರಣೆ ಇಲ್ಲ. ಸರದಿಯಂತೆ ಅವಧಿಗೊಂದು ಪಕ್ಷ ಇಲ್ಲಿ ಆಡಳಿತ ನಡೆಸಿವೆ.

1999- 2004ರವರೆಗೆ ಕುಮಟಾದಲ್ಲಿ ಮೋಹನ ಶೆಟ್ಟಿ ಶಾಸಕರಾಗಿದ್ದರು. ಆದರೆ 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ದಿನಕರ ಶೆಟ್ಟಿ ಮೋಹನ ಶೆಟ್ಟಿಯವರನ್ನು ಸೋಲಿಸಿ ಮೊದಲಿಗೆ ಶಾಸಕರಾದರು. 2013ರ ಚುನಾವಣೆಯಲ್ಲಿ ಮೋಹನ ಶೆಟ್ಟಿ ಪತ್ನಿ ಶಾರದಾ ಶೆಟ್ಟಿ (ಕಾಂಗ್ರೆಸ್) ಚುನಾವಣೆಯಲ್ಲಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ದಿನಕರ ಶೆಟ್ಟಿ ಮತ್ತೆ ಶಾಸಕರಾದರು. ವಿಶೇಷವೆಂದರೆ ಇವರೆಲ್ಲ ಒಂದೇ ಕುಟುಂಬದವರು.
Kumta Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ದಿನಕರ ಶೆಟ್ಟಿ(ಬಿಜೆಪಿ) | 59,392 | ಶಾರದಾ ಶೆಟ್ಟಿ(ಕಾಂಗ್ರೆಸ್) | 26,642 |
| 2013 | ಶಾರದಾ ಶೆಟ್ಟಿ(ಕಾಂಗ್ರೆಸ್) | 36,756 | ದಿನಕರ ಶೆಟ್ಟಿ(ಜೆಡಿಎಸ್) | 36,336 |
| 2008 | ದಿನಕರ ಶೆಟ್ಟಿ(ಜೆಡಿಎಸ್) | 30,792 | ಮೋಹನ್ ಕೃಷ್ಣ ಶೆಟ್ಟಿ (ಕಾಂಗ್ರೆಸ್) | 30,772 |
ಪರೇಶ ಮೇಸ್ತ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್
ಈ ಬಾರಿ ಚುನಾವಣಾ ಪರಿಸ್ಥಿತಿ ಭಿನ್ನವಾಗಿದೆ. ಪರೇಶ ಮೇಸ್ತ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಮತ್ತು ತೀವ್ರ ಹೋರಾಟದ ಬಳಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭರವಸೆ ಇದ್ದರೂ ಮತಗಳ ಸರ್ಜರಿ ಅಷ್ಟೊಂದು ಸಲೀಸಾಗಿಲ್ಲ. ಕುಮಟಾದಲ್ಲಿ ಕಾಂಗ್ರೆಸ್‌ನಿಂದ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಈಗಾಗಲೇ ಚುನಾವಣಾ ತಯಾರಿ ನಡೆಸಿದ್ದಾರೆ. ಆದರೆ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ತಮ್ಮ ಪುತ್ರನಿಗೆ ಕುಮಟಾದಿಂದ ಟಿಕೆಟ್ ಕೊಡಿಸಲು ಮುಂದಾಗಿರುವುದು ಇತರೆ ಆಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ದಿನಕರ ಶೆಟ್ಟಿಗೆ ತಮ್ಮ ಕೊನೆಯ ಚುನಾವಣೆ
ಹಾಲಿ ಶಾಸಕರಾಗಿರುವ ಬಿಜೆಪಿಯ ದಿನಕರ ಶೆಟ್ಟಿ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಆದರೆ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ದದಿದೆ. ಇದು ಬಿಜೆಪಿಯ ಹಿರಿಯ ನಾಯಕರಿಗೆ ಧರ್ಮ ಸಂಕಟ ತಂದಿದೆ. ಇಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೇರಿ ಹಲವರು ಟಿಕೆಟ್ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಮಧ್ಯೆ ಮಾಜಿ ರಾಜ್ಯಪಾಲರು ಆಗಿರುವ ಮಾರ್ಗರೇಟ್ ಆಳ್ವಾ ಅವರು ತಮ್ಮ ಪುತ್ರನಾದ ನಿವೇದಿತ ಆಳ್ವಾಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಪಂಚರತ್ನ ರಥಯಾತ್ರೆಯಿಂದ ಜೆಡಿಎಸ್‌ಗೆ ಬಲ
ಈ ಮಧ್ಯೆ ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆಯಿಂದ ಜೆಡಿಎಸ್‌ಗೆ ಬಲ ಬಂದಿದೆ. ಇಲ್ಲಿನ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಉತ್ಸಾಹಿ ಯುವಕರ ಪಡೆ ಕಟ್ಟಿಕೊಂಡು ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದಾರೆ. ಇಲ್ಲಿ ರಾಷ್ಟ್ರೀಯ ಪಕ್ಷಗಳ ಮಧ್ಯೆ ವ್ಯಕ್ತಿಗತವಾಗಿ ಜೆಡಿಎಸ್ ಪ್ರಬಲವಾಗಿಯೇ ಇದೆ. ಕುಮಟಾದ ನಿರ್ಣಾಯಕ ಸಮುದಾಯಗಳಲ್ಲಿ ಒಂದಾಗಿರುವ ಹಾಲಕ್ಕಿ ಸಮುದಾಯ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಕಸರತ್ತು ನಡೆಸುತ್ತಿದೆ. ಇಲ್ಲಿ ತಮ್ಮ ಸಮುದಾಯ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನ ನಡೆಸಲಾಗುತ್ತಿದೆ.
ಹೊನ್ನಾವರ ತಾಲೂಕಿನ ಅರ್ಧ ಭಾಗ
ಕುಮಟಾ ವಿಧಾನಸಭಾ ಕ್ಷೇತ್ರ ಪೂರ್ಣ ಕುಮಟಾ ತಾಲೂಕಿನ ಜತೆಗೆ ಹೊನ್ನಾವರ ತಾಲೂಕಿನ ಅರ್ಧ ಭಾಗವನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ನಾಮಧಾರಿ, ಮೀನುಗಾರ, ಹಾಲಕ್ಕಿಗಳು, ಪಟಗಾರರು, ಬ್ರಾಹ್ಮಣರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1.84 ಲಕ್ಷ ಮತದಾರರಿದ್ದಾರೆ. ಇದರಲ್ಲಿ ಪುರುಷರು 90,208, ಮಹಿಳೆಯರು 88,776 ಮಂದಿ ಇದ್ದಾರೆ. ಮೊದಲೇ ಹೇಳಿದಂತೆ ಒಂದೇ ಪಕ್ಷ ಇಲ್ಲಿ ಅಧಿಕಾರ ಹಿಡಿದ ಉದಾಹರಣೆ ಕಮ್ಮಿ. ಆದ್ದರಿಂದ ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications