ತೆಲಂಗಾಣ ರಾಜ್ಯಪಾಲರ ಆದೇಶದಂತೆ ನಡೆಯಿತು, ಕೊಪ್ಪಳ ಜೋಡಿ ವಿವಾಹ

ಕೊಪ್ಪಳ, ಡಿಸೆಂಬರ್ 02 : ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ವಿವಾಹಕ್ಕೆ ಯುವತಿಯ ಮನೆಯವರ ವಿರೋಧ ಎದುರಾಗಿತ್ತು. ತೆಲಂಗಾಣ ರಾಜ್ಯಪಾಲರ ಆದೇಶದಂತೆ ಕರ್ನಾಟಕ ಪೊಲೀಸರ ಭದ್ರತೆಯಲ್ಲಿ ಇಷ್ಟ ಪಟ್ಟ ಜೋಡಿಯ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿದೆ.

ಹೌದು ಇದೊಂದು ಸ್ವಾರಸ್ಯಕರ ಪ್ರಸಂಗವಾಗಿದೆ. ತೆಲಂಗಾಣ ರಾಜ್ಯಪಾಲ ನರಸಿಂಹನ್ ಅವರು ಯುವ ಜೋಡಿಯ ಮದುವೆ ಮಾಡಿಸುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು. ಪೊಲೀಸರ ಸಮ್ಮುಖದಲ್ಲಿ ಯಾವುದೇ ಅಡೆತಡೆ ಇಲ್ಲದೆ ವಿವಾಹ ನೆರವೇರಿದೆ.

ಕೊಪ್ಪಳ ಜಿಲ್ಲೆಯ ಸಿದ್ದಾಪುರದ ಸಂಧ್ಯಾ, ವಿದ್ಯಾನಗರದ ಹರಿಕೃಷ್ಣ ಅವರ ವಿವಾಹ ಕೊಪ್ಪಳದ ಗಂಗಾವತಿಯ ವಿದ್ಯಾನಗರದ ಶ್ರೀ ರಾಮಮಂದಿರದಲ್ಲಿ ಪೊಲೀಸ್ ಭದ್ರತೆಯಲ್ಲಿ ಭಾನುವಾರ ನಡೆಯಿತು.

Police provide security for love marriage in Koppal

ಏನಿದು ಪ್ರಕರಣ? : ಸಂಧ್ಯಾ ಮತ್ತು ಹರಿಕೃಷ್ಣ ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ವಿವಾಹಕ್ಕೆ ಯುವತಿ ಮನೆಯುವರಿಂದ ವಿರೋಧ ವ್ಯಕ್ತವಾಗಿತ್ತು.

ಆದ್ದರಿಂದ, ಯುವ ಜೋಡಿ ತೆಲಂಗಾಣ ರಾಜ್ಯಪಾಲ ನರಸಿಂಹನ್ ಮತ್ತು ಮಹಿಳಾ ಮಂಡಳಿ ಬಳಿ ರಕ್ಷಣೆ ಕೋರಿದ್ದರು. ರಾಜ್ಯಪಾಲರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಮದುವೆಗೆ ಸಹಕಾರ ನೀಡುವಂತೆ ಸೂಚಿಸಿದ್ದರು.

ಪೊಲೀಸರು ಇಂದು ಕೊಪ್ಪಳದಲ್ಲಿ ಸಂಧ್ಯಾ ಮತ್ತು ಹರಿಕೃಷ್ಣ ಅವರ ವಿವಾಹವನ್ನು ಮಾಡಿಸಿದ್ದಾರೆ. ಯುವತಿಯ ಮನೆಯವರ ವಿರೋಧದ ಕಾರಣ ಪೊಲೀಸ್ ಭದ್ರೆಯಲ್ಲಿ ವಿವಾಹ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+