ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ ಎಸ್ಪಿ ಅನೂಪ್ ಕುಮಾರ್ ಶೆಟ್ಟಿ ವರ್ಗಾವಣೆಗೆ ತಡೆ

|
Google Oneindia Kannada News

ಕೊಪ್ಪಳ, ಮಾರ್ಚ್ 27 : ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅನೂಪ್ ಕುಮಾರ್ ಶೆಟ್ಟಿ ಮುಂದುವರೆಯಲಿದ್ದಾರೆ. ವರ್ಗಾವಣೆ ಪ್ರಶ್ನಿಸಿ ಅನೂಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಿಎಟಿ ಏ.16ಕ್ಕೆ ಮುಂದೂಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಗಳವಾರ ಕೇಂದ್ರಿಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಈ ಕುರಿತು ಆದೇಶ ಹೊರಡಿಸಿದೆ. ಮುಂದಿನ ಆದೇಶದ ತನಕ ಅನೂಪ್ ಕುಮಾರ್ ಶೆಟ್ಟಿ ಅವರು ಎಸ್ಪಿಯಾಗಿ ಮುಂದುವರೆಯುವಂತೆ ಸೂಚಿಸಿದೆ.

ಸರ್ಕಾರಕ್ಕೆ ಮುಖಭಂಗ : ಕೊಪ್ಪಳ ಎಸ್ಪಿ ವರ್ಗಾವಣೆಗೆ ಸಿಎಟಿ ತಡೆಸರ್ಕಾರಕ್ಕೆ ಮುಖಭಂಗ : ಕೊಪ್ಪಳ ಎಸ್ಪಿ ವರ್ಗಾವಣೆಗೆ ಸಿಎಟಿ ತಡೆ

ಕರ್ನಾಟಕ ಸರ್ಕಾರ ಮಾರ್ಚ್ 9ರಂದು ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಕೊಪ್ಪಳ ಎಸ್ಪಿ ಅನೂಪ್ ಕುಮಾರ್ ಶೆಟ್ಟಿ ಅವರನ್ನು ಬೆಂಗಳೂರಿನ ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

CAT adjourns Koppal SP Anoop Kumar shetty transfer case hearing

1 ವರ್ಷಕ್ಕಿಂತ ಮೊದಲು ವರ್ಗಾವಣೆ ಮಾಡಿದ್ದನ್ನು ಅನೂಪ್ ಕುಮಾರ್ ಶೆಟ್ಟಿ ಸಿಎಟಿಯಲ್ಲಿ ಪ್ರಶ್ನಿಸಿದ್ದರು. ಸಿಎಟಿ ವರ್ಗಾವಣೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

 ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಇಂದು ಅರ್ಜಿಯ ವಿಚಾರಣೆ ನಡೆಸಿದ ಸಿಎಟಿ ಏ.16ರಂದು ವಿಚಾರಣೆಯನ್ನು ಮುಂದೂಡಿತು. ಇದರಿಂದಾಗಿ ಅನೂಪ್ ಕುಮಾರ್ ಶೆಟ್ಟಿ ಕೊಪ್ಪಳ ಎಸ್ಪಿಯಾಗಿ ಮುಂದುವರೆಯಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ 2018ರ ನೀತಿ ಸಂಹಿತೆ ಇಂದಿನಿಂದ ಜಾರಿಯಾಗಿದೆ. ಆದ್ದರಿಂದ, ಚುನಾವಣೆ ಮುಗಿಯುವ ತನಕ ಎಸ್ಪಿ ವರ್ಗಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ.

English summary
The Central Administrative Tribunal (CAT) on March 27, 2018 adjourned the hearing of Koppal superintendent of police Anoop Kumar shetty transfer case to April 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X