ಹಾರುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮ ಕೊಟ್ಟ ತಾಯಿ
ಕೊಲ್ಕತ್ತ, ಫೆಬ್ರವರಿ 4: ವಿಮಾನದಲ್ಲೇ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಕೊಲ್ಕತ್ತದಲ್ಲಿ ನಡೆದಿದೆ.
ದೋಹಾದಿಂದ ಬ್ಯಾಂಕಾಕ್ಗೆ ತೆರಳುತ್ತಿದ್ದ ವಿಮಾನದಲ್ಲಿ ಥೈಲೆಂಡ್‌ನಿಂದ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯದಲ್ಲಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ವಿಮಾನವು ಇಂದು ಮುಂಜಾನೆ ಕೊಲ್ಕತ್ತದಲ್ಲಿ ತುರ್ತು ಭೂಸ್ಪರ್ಶ ಮಾಡಿರುವುದಾಗಿ ಮಾಹಿತಿ ಲಭಿಸಿದೆ.
ವಿಮಾನದ ಸಿಬ್ಬಂದಿಗಳ ಸಹಾಯದಿಂದಾಗಿ ವಿಮಾನದಲ್ಲಿಯೇ ಹೆರಿಗೆಯಾಗಿದೆ. ಇಂದು ಮುಂಜಾನೆ 3 ಗಂಟೆಯ ಸಮಯಕ್ಕೆ ಕೊಲ್ಕತ್ತದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದ್ದು, ತಾಯಿ-ಮಗುವನ್ನು ಕೊಲ್ಕತ್ತದ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೋಹಾದಿಂದ ಬ್ಯಾಂಕಾಕ್ಗೆ ತೆರಳುತ್ತಿದ್ದಕ್ಯೂಆರ್-830 ವಿಮಾನವು ಇಂದು ಮುಂಜಾನೆ 3.09ಕ್ಕೆ ಕೊಲ್ಕತ್ತ ವಿಮಾನ ನಿಲ್ದಾಣದ ವೈದ್ಯಕೀಯ ಆದ್ಯತೆಯ ಲ್ಯಾಂಡಿಂಗ್ನಲ್ಲಿ ಇಳಿದಿದೆ. ವೈದ್ಯಕೀಯ ಆದ್ಯತೆಯ ಲ್ಯಾಂಡಿಂಗ್ಗಾಗಿ ಪೈಲೆಟ್ ಎಸ್ಒಎಸ್ ಅನ್ನು ಕೇಳಿದ್ದರು. ತಾಯಿ ಮಗು ಸುರಕ್ಷಿತವಾಗಿದ್ದಾರೆ.












Click it and Unblock the Notifications