ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5.7 ಲಕ್ಷ ರು. ಮೌಲ್ಯದ ಚಿನ್ನದ ಮಾಸ್ಕ್‌ ಖರೀದಿಸಿದ ಭೂಪನಿಗೆ ನೆಟ್ಟಿಗರ ಛೀಮಾರಿ

|
Google Oneindia Kannada News

ಕೋಲ್ಕತ್ತಾ, ನವೆಂಬರ್‌ 12: ಕೊರೊನಾ ವೈರಸ್‌ ಸೋಂಕಿನಿಂದ ನಮ್ಮನ್ನು ನಾವು ಸುರಕ್ಷಿತವಾಗಿಸಲು ಮಾಸ್ಕ್‌ ಅತ್ಯಗತ್ಯವಾಗಿದೆ. ಮಾಸ್ಕ್‌ ಧರಿಸಿ ಮನೆಯಿಂದ ಹೊರ ಹೋಗುವುದು ನಮ್ಮ ಜೀವನದ ಸಾಮಾನ್ಯ ಭಾಗವಾಗಿದೆ. ಸಮಯ ಕಳೆದಂತೆ ಮಾಸ್ಕ್‌ ಒಂದು ಟ್ರೆಂಡ್‌ ಎಂಬಂತೆ ಆಗಿದೆ. ಈ ಬೆನ್ನಲ್ಲೇ ಕೆಲವರು ಚಿನ್ನ ಹಾಗೂ ವಜ್ರದ ಮೂಲಕ ಮಾಸ್ಕ್‌ ಮಾಡಿಸಿಕೊಂಡು ಧರಿಸಿ ಸುದ್ದಿಯಾಗಿದ್ದು ಇದೆ.

ಈಗ ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬ 5.7 ಲಕ್ಷ ರು. ಮೌಲ್ಯದ ಚಿನ್ನದ ಮಾಸ್ಕ್‌ ಖರೀದಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಶ್ರೀಮಂತ ವ್ಯಕ್ತಿಯೋರ್ವ 5.7 ಲಕ್ಷ ರು. ಮೌಲ್ಯದ ಚಿನ್ನದ ಮಾಸ್ಕ್‌ ಅನ್ನು ಖರೀದಿ ಮಾಡಿದ್ದಾರೆ.

3.5 ಲಕ್ಷ ವೆಚ್ಚದ ಚಿನ್ನದ ಮಾಸ್ಕ್ ಮಾಡಿಸಿಕೊಂಡ ಮತ್ತೊಬ್ಬ ಉದ್ಯಮಿ3.5 ಲಕ್ಷ ವೆಚ್ಚದ ಚಿನ್ನದ ಮಾಸ್ಕ್ ಮಾಡಿಸಿಕೊಂಡ ಮತ್ತೊಬ್ಬ ಉದ್ಯಮಿ

ಈ ಮಾಸ್ಕ್‌ ಅನ್ನು ಚಂದನ್‌ ದಾಸ್‌ ಎಂಬ ಆಭರಣ ತಯಾರಕ ಸಿದ್ಧಪಡಿಸಿದ್ದಾರೆ. ಈ ಚಂದನ್‌ ದಾಸ್‌ ವಿನೂತನ ವಿನ್ಯಾಸಗಳಲ್ಲಿ ಆಭರಣ ತಯಾರಿ ಮಾಡುವುದರಲ್ಲಿ ಸ್ಥಳೀಯವಾಗಿ ಪ್ರಸಿದ್ಧರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

 West Bengal Man Buys Customised Gold Mask Worth Rs 5.7 Lakh, Netizens Slams

ದುರ್ಗಾ ಪೂಜೆಗಾಗಿ 108 ಗ್ರಾಮ್‌ ತೂಕದ ಚಿನ್ನದ ಮಾಸ್ಕ್‌!

ಮಾಧ್ಯಮಗಳ ಪ್ರಕಾರ, ಚಂದನ್‌ ದಾಸ್‌ ಎಂಬ ಆಭರಣ ತಯಾರಕ ನಗರದ ವ್ಯಾಪಾರಿ ಓರ್ವನಿಗಾಗಿ 108 ಗ್ರಾಮ್‌ ತೂಕದ ಚಿನ್ನದ ಮಾಸ್ಕ್‌ ಅನ್ನು ಸಿದ್ಧಪಡಿಸಿದ್ದಾನೆ. 5.7 ಲಕ್ಷ ರು. ಮೌಲ್ಯದ ಈ ಚಿನ್ನದ ಮಾಸ್ಕ್‌ ಅನ್ನು ತಯಾರಿ ಮಾಡಲು ಚಂದನ್‌ ದಾಸ್‌ 15 ದಿನಗಳನ್ನು ತೆಗೆದುಕೊಂಡಿದ್ದಾರೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಈ ಚಿನ್ನದ ಮಾಸ್ಕ್‌ ಅನ್ನು ತಯಾರಿ ಮಾಡಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಈ ದುರ್ಗಾ ಪೂಜೆಯ ಸಂದರ್ಭದಲ್ಲಿ ತನ್ನ ಬಳಿ ಇರುವ ಆಸ್ತಿಯ ಪ್ರದರ್ಶನ ಮಾಡುವ ನಿಟ್ಟಿನಲ್ಲೇ ಈ ಮಾಸ್ಕ್‌ ಅನ್ನು ತಯಾರಿ ಮಾಡಿಸಿಕೊಂಡಿರುವ ಈ ಉದ್ಯಮಿ, ಸುತ್ತ ಮುತ್ತಲಿನ ಜನರು ಹುಬ್ಬೇರಿಸಿಕೊಳ್ಳುವಂತೆ ಮಾಡಿದ್ದಾರೆ.

ಈ ವ್ಯಕ್ತಿ ಧರಿಸಿರುವ ಮಾಸ್ಕ್‌ಗೆ 3 ಲಕ್ಷ: ಇದ್ರಿಂದ ವೈರಸ್ ಬರಲ್ವಾ?ಈ ವ್ಯಕ್ತಿ ಧರಿಸಿರುವ ಮಾಸ್ಕ್‌ಗೆ 3 ಲಕ್ಷ: ಇದ್ರಿಂದ ವೈರಸ್ ಬರಲ್ವಾ?

ಟ್ವಿಟ್ಟರ್‌ನಲ್ಲಿ ವ್ಯಾಪಾರಿಯ ವಿರುದ್ಧ ಆಕ್ರೋಶ

5.7 ಲಕ್ಷ ರು. ಮೌಲ್ಯದ ಚಿನ್ನದ ಮಾಸ್ಕ್‌ ಅನ್ನು ಮಾಡಿಸಿಕೊಂಡ ವ್ಯಾಪಾರಿಯ ವಿರುದ್ಧ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪತ್ರಕರ್ತೆ ರಿತುಪರ್ಣ ಚಟರ್ಜಿ, "ಇದರ ಹಿಂದಿನ ಉದ್ದೇಶವಾದರೂ ಏನು?," ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬರು, "ಕೊರೊನಾ ವೈರಸ್‌ ಸೋಂಕಿನಿಂದಾಗಿ ಪ್ರಾಣ ತೆತ್ತ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲದೆಯೇ ತಮ್ಮ ಶ್ರೀಮಂತಿಕೆಯ ದರ್ಪ ತೋರಿಸುವುದು ಮುಂದುವರಿದಿದೆ," ಎಂದಿದ್ದಾರೆ.

"ನಾನು ಪ್ರಮಾಣಿಕವಾಗಿ ಹೇಳಬೇಕಾದರೆ, ಎಲ್ಲಾ ಆಭರಣಗಳ ಬಗ್ಗೆಯೂ ನನಗೆ ಇದೇ ಪ್ರಶ್ನೆ. ನನ್ನ ಪತ್ನಿ ಆಭರಣ ಖರೀದಿ ಮಾಡಿದ ಬಳಿಕ ನಾನು ಕೇಳುವುದು ಇದೇ ಪ್ರಶ್ನೆಯನ್ನು. ಇದರ ಹಿಂದಿನ ಉದ್ದೇಶವಾದರೂ ಏನು," ಎಂದು ಮತ್ತೋರ್ವ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನಾನು ಅತೀ ದುಭಾರಿಯಾದ ಹಾಗೂ ಯಾವುದೇ ಉಪಯೋಗಕ್ಕೆ ಬಾರದ ವಸ್ತುವನ್ನು ನೋಡಿದೆ. ಅದು ಈ ಚಿನ್ನದ ಮಾಸ್ಕ್‌," ಎಂದು ಚಿನಿ ಎಂಬ ಹೆಸರಿನ ಟ್ವಿಟ್ಟರ್‌ ಖಾತೆಯಲ್ಲಿ ವ್ಯಕ್ತಿಯೊಬ್ಬರು ಟೀಕಿಸಿದ್ದಾರೆ.

"ಹೊಸದಾಗಿ ಶ್ರೀಮಂತಿಕೆ ಬಂದ ವ್ಯಕ್ತಿಯ ನಾಚಿಗೆಯೇ ಇಲ್ಲದ ಕಾರ್ಯ ಇದು," ಮತ್ತೋರ್ವರು ಉಲ್ಲೇಖ ಮಾಡಿದ್ದಾರೆ. ಇನ್ನು ಕವಿತಾ ಕಾರ್ತಿಕ್‌ ಎಂಬವರು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುತ್ತಾ, "ಇದು ಚಿನ್ನದ ಕೊರೊನಾ ಸೋಂಕನ್ನು ತಡೆಯಲು ತಯಾರಿಸಿ ಮಾಸ್ಕ್‌," ಎಂದು ವ್ಯಂಗ್ಯವಾಡಿದ್ದಾರೆ. ಹಾಗೆಯೇ "ಐದು ರೂಪಾಯಿಯ ಮಾಸ್ಕ್‌ ನಮಗೆ ಇದಕ್ಕಿಂತ ಸುರಕ್ಷಿತ," ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಟಿಐ ಸುದ್ದಿ ಸಂಸ್ಥೆಯ ಪತ್ರಕರ್ತರೊಬ್ಬರು, "ಕೊರೊನಾ ವೈರಸ್‌ ಮಾರ್ಗಸೂಚಿಯಂತೆ ನಾವು ಮಾಸ್ಕ್ ಅನ್ನು ಯಾವ ರೀತಿಯಾಗಿ ಧರಿಸಲಾಗುತ್ತದೆಯೋ ಅದೇ ರೀತಿಯಾಗಿ ಈ ಮಾಸ್ಕ್‌ ಅನ್ನು ಧರಿಸುತ್ತಾರೋ ಏನೋ. ಇದೊಂದು ಮಿನುಗುವ ಹೂಡಿಕೆ ಅಷ್ಟೇ," ಎಂದು ಅಭಿಪ್ರಾಯಿಸಿದ್ದಾರೆ.

Recommended Video

ಕಂಗನಾ ಪ್ರಕಾರ ಸ್ವಾತಂತ್ರ್ಯ ಸಿಕ್ಕಿದ್ದು ಮೋದಿ ಅಧಿಕಾರಕ್ಕೆ ಬಂದ್ಮೇಲಂತೆ!! ನೀವೇನಂತೀರಾ? | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
West Bengal Man Buys Customised Gold Mask Worth Rs 5.7 Lakh, Netizens Slams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X