ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ಕಾರಿನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತ ಪ್ರಜ್ಞೆ ತಪ್ಪಿದ ಅರ್ಪಿತಾ

|
Google Oneindia Kannada News

ಕೋಲ್ಕತ್ತಾ ಜುಲೈ 29: ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರಿಗೆ ಆಪ್ತರಾಗಿರುವ ಅರ್ಪಿತಾ ಮುಖರ್ಜಿ ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅಲ್ಲದೆ, ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ ಅವರನ್ನು ಬಂಧಿಸಿದೆ. ಅರ್ಪಿತಾ ಇಲ್ಲಿಯವರೆಗೆ ಸಾಧಾರಣವಾಗಿ ಕಾಣುತ್ತಿದ್ದರೂ ಇಂದು ವೈರಲ್ ಆದ ವಿಡಿಯೋದಲ್ಲಿ ಅವರು ಅಳುತ್ತಿರುವುದು ಕಂಡುಬಂದಿದೆ. ಜೊತೆಗೆ ಮಾಹಿತಿ ಪ್ರಕಾರ ಅರ್ಪಿತಾ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ, ಈ ಇಡೀ ವಿಷಯದಲ್ಲಿ ಪಾರ್ಥ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಇದೀಗ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ವಶಪಡಿಸಿಕೊಂಡ ಹಣದ ರಾಶಿಯ ಫೋಟೋಗಳು ವೈರಲ್ ಆಗುತ್ತಿದ್ದು ಸಾಮಾನ್ಯ ಜನರು ಮತ್ತು ರಾಜ್ಯದ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರಿವೆ. ಇಲ್ಲಿಯವರೆಗೆ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ವಿವಿಧ ಮನೆಗಳಲ್ಲಿ ನಡೆಸಿದ ಶೋಧದಲ್ಲಿ 50 ಕೋಟಿಗಳಷ್ಟು ದಾಖಲೆಯ ನಗದನ್ನು ಇಡಿ ವಶಕ್ಕೆ ಪಡೆದಿದೆ.

ಪ್ರವಾದಿ ಕುರಿತ ವಿವಾದ: ದೆಹಲಿ ಕೋಲ್ಕತ್ತಾ, ಉತ್ತರಪ್ರದೇಶದಲ್ಲಿ ಹೆಚ್ಚಾದ ಪ್ರತಿಭಟನೆಪ್ರವಾದಿ ಕುರಿತ ವಿವಾದ: ದೆಹಲಿ ಕೋಲ್ಕತ್ತಾ, ಉತ್ತರಪ್ರದೇಶದಲ್ಲಿ ಹೆಚ್ಚಾದ ಪ್ರತಿಭಟನೆ

ಅರ್ಪಿತಾಗೆ ವೈದ್ಯಕೀಯ ಪರೀಕ್ಷೆ

ಅರ್ಪಿತಾ ಅವರನ್ನು ಇಂದು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆ ಕರೆದೊಯ್ಯುತ್ತಿರುವ ಸುದ್ದಿ ಮಾಧ್ಯಮಗಳಿಗೆ ಸಿಕ್ಕ ಕೂಡಲೆ ಹಲವು ಪತ್ರಕರ್ತರು ಅಲ್ಲಿ ಜಮಾಯಿಸಿದ್ದರು. ಅಷ್ಟರಲ್ಲಿ ಆಕೆ ಇಡಿ ಕಾರಿನಲ್ಲಿ ಅಳಲು ತೋಡಿಕೊಂಡರು. ಅವರ ಕೆಲವು ಚಿತ್ರಗಳು/ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದಾದ ಬಳಿಕ ಭದ್ರತಾ ಸಿಬ್ಬಂದಿ ಆಕೆಯನ್ನು ಪರೀಕ್ಷೆಗೆಂದು ಆಸ್ಪತ್ರೆಯೊಳಗೆ ಕರೆದೊಯ್ದಿದ್ದು, ಅಲ್ಲಿ ಆಕೆ ಪ್ರಜ್ಞೆ ತಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಅವರ ಸ್ಥಿತಿ ಈಗ ಚೆನ್ನಾಗಿದೆ ಎಂದು ಹೇಳಲಾಗುತ್ತಿದೆ.

ಬಂಧನದ ಬಳಿಕ ಪಾರ್ಥ ಹೇಳಿಕೆ

ಬಂಧನದ ಬಳಿಕ ಪಾರ್ಥ ಹೇಳಿಕೆ

ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಅವರು ಗುರುವಾರ ಕ್ಯಾಬಿನೆಟ್ ಸಭೆ ಕರೆದಿದ್ದರು. ಸಭೆಯಲ್ಲಿ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಲಾಯಿತು. ಈ ನಿರ್ಧಾರದ ಒಂದು ಗಂಟೆಯ ನಂತರ ಟಿಎಂಸಿ ಕೂಡ ಅವರನ್ನು ವಜಾ ಮಾಡಿದೆ. ಪಾರ್ಥ್ ಈಗ ಒಬ್ಬಂಟಿಯಾಗಿದ್ದಾರೆ. ಶುಕ್ರವಾರ ಪಾರ್ಥ ಅವರನ್ನು ಇಡಿ ಅಧಿಕಾರಿಗಳು ಕರೆದುಕೊಂಡು ಹೋಗುತ್ತಿದ್ದಾಗ, ತಾನು ಪಿತೂರಿಗೆ ಬಲಿಯಾಗಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಜೊತೆಗೆ ಕಾಲವೇ ಉತ್ತರಿಸುತ್ತದೆ ಎಂದು ಹೇಳಿದರು.

'ಇಷ್ಟೊಂದು ಹಣ ಇದೆ ಎಂಬ ಕಲ್ಪನೆಯೇ ಇರಲಿಲ್ಲ' ಅರ್ಪಿತಾ

'ಇಷ್ಟೊಂದು ಹಣ ಇದೆ ಎಂಬ ಕಲ್ಪನೆಯೇ ಇರಲಿಲ್ಲ' ಅರ್ಪಿತಾ

ಮತ್ತೊಂದೆಡೆ, ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪ್ರತಿದಿನ ಹೊಸ ಹೊಸ ಬಹಿರಂಗಪಡಿಸುವಿಕೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಅರ್ಪಿತಾ ಜಾರಿ ನಿರ್ದೇಶನಾಲಯಕ್ಕೆ ಅಲ್ಲಿ ಇಷ್ಟೊಂದು ಹಣ ಇದೆ ಎಂಬ ಕಲ್ಪನೆಯೇ ಇರಲಿಲ್ಲ ಎಂದು ಹೇಳಿದ್ದರು. ಫ್ಲಾಟ್‌ನ ಮುಚ್ಚಿದ ಕೋಣೆಗಳಲ್ಲಿ ಪಾರ್ಥ ಚಟರ್ಜಿ ಒಬ್ಬರೇ ಹೋಗುತ್ತಿದ್ದರು. ಆದರೆ, ಬಂಧನಕ್ಕೆ ಮೂರು ದಿನ ಮೊದಲು ಅರ್ಪಿತಾ ಅಲ್ಲಿ ಕಾಣಿಸಿಕೊಂಡಿದ್ದರು. ಇದುವರೆಗಿನ ದಾಳಿಯಲ್ಲಿ ಇಡಿ ಅರ್ಪಿತಾ ಅವರಿಂದ 50 ಕೋಟಿಗೂ ಹೆಚ್ಚು ಮೌಲ್ಯದ ನಗದನ್ನು ವಶಪಡಿಸಿಕೊಂಡಿದೆ. ಇದಲ್ಲದೇ 4.31 ಕೋಟಿ ಮೌಲ್ಯದ ಚಿನ್ನಾಭರಣ, ದುಬಾರಿ ಉಡುಗೊರೆ ಇತ್ಯಾದಿಗಳು ಪತ್ತೆಯಾಗಿವೆ. ಈ ಹಣವನ್ನು ನೇಮಕಾತಿ ಹಗರಣದಿಂದ ಸಂಗ್ರಹಿಸಲಾಗಿದೆ ಎಂದು ಇಡಿ ಶಂಕಿಸಿದೆ.

ಸಚಿವ ಸ್ಥಾನದಿಂದ ಚಟರ್ಜಿ ವಜಾ

ಸಚಿವ ಸ್ಥಾನದಿಂದ ಚಟರ್ಜಿ ವಜಾ

ಅರ್ಪಿತಾ ಮುಖರ್ಜಿ ಒಡೆತನದ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೆಚ್ಚಿತ್ತು. ಪ್ರತಿಪಕ್ಷಗಳು ಪಾರ್ಥ ಚಟರ್ಜಿ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದವು. ಆರಂಭದಲ್ಲಿ ತನ್ನ ಸಚಿವರ ಬೆಂಬಲಕ್ಕೆ ನಿಂತಿದ್ದರೂ, ಮಮತಾ ಬ್ಯಾನರ್ಜಿ ಶೀಘ್ರದಲ್ಲೇ ಕಳಂಕಿತ ಸಚಿವರನ್ನು ವಜಾಗೊಳಿಸಿದರು. ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಾತಿಗಾಗಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಆಪ್ತರಾಗಿದ್ದ ಪಾರ್ಥ ಚಟರ್ಜಿಯವರು ಈಗ ಅವರಿಗೆ ಭಾರೀ ಮುಜುಗರವನ್ನುಂಟುಮಾಡಿದ್ದಾರೆ. ಅವರ ವಿರುದ್ಧದ ಭ್ರಷ್ಟಾಚಾರದ ಪುರಾವೆಯಾಗಿ ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಹುದ್ದೆಗಳಿಂದ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.

Recommended Video

ಆತುರ ಪಟ್ಟು ಶುಬ್ಮನ್ ಗಿಲ್ ವಿಚಾರದಲ್ಲಿ ಮಾಡಿದ ಎಡವಟ್ಟಿನಿಂದ RCB ಗೆ ಭಾರಿ ಅವಮಾನ | *Cricket | OneIndia Kannada

English summary
Teacher Recruitment Scam: VIDEO: Arpita wept bitterly in ED's car, fainted inside the hospital. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X