Breaking; ವಿಮಾನ ಲ್ಯಾಂಡ್‌ ಆಗುವಾಗ turbulence, 12 ಜನರಿಗೆ ಗಾಯ

ಕೋಲ್ಕತ್ತಾ, ಮೇ 02; ಮುಂಬೈ-ದುರ್ಗಾಪುರ್ ನಡುವಿನ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಟರ್ಬ್ಯೂಲೆನ್ಸ್‌ ಉಂಟಾಗಿದೆ. 12 ಪ್ರಯಾಣಿಕರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ವಿಮಾನದಲ್ಲಿ 40 ಜನರಿದ್ದರು. ಟರ್ಬ್ಯೂಲೆನ್ಸ್‌ ಉಂಟಾಗಿದ್ದರಿಂದ 12 ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯವಾಗಿದೆ. ಕೆಲವರಿಗೆ ಹೊಲಿಗೆ ಸಹ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಪೈಸ್ ಜೆಟ್ ವಕ್ತಾರರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. 189 ಆಸನ ಸಾಮರ್ಥ್ಯದ ಬೋಯಿಂಗ್ 737-800 ವಿಮಾನ ಲ್ಯಾಂಡ್ ಆಗುವಾಗ ಚಂಡಮಾರುತದ ಪ್ರಭಾವಕ್ಕೆ ಸಿಲುಕಿದೆ. ಆಗ ಟರ್ಬ್ಯೂಲೆನ್ಸ್‌ ಉಂಟಾಗಿದೆ ಎಂದು ತಿಳಿಸಿದ್ದಾರೆ.

Turbulence In Spicejet Flight 12 Passengers Injured

ಒಮ್ಮೆಯೇ ಟರ್ಬ್ಯೂಲೆನ್ಸ್‌ ಉಂಟಾಗಿದ್ದರಿಂದ ಪ್ರಯಾಣಿಕರು ಗಾಬರಿಯಾದರು. ಬ್ಯಾಗ್‌ಗಳು ಪ್ರಯಾಣಿಕರ ಮೇಲೆ ಬಿದ್ದು, ಅವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮಾನಯಾನ ಸಚಿವಾಲಯದ ನಿರ್ದೇಶಕ ಅರುಣ್ ಕುಮಾರ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಸಿಬ್ಬಂದಿ, ಪ್ರಯಾಣಿಕರು ಸೇರಿ 12 ಜನರಿಗೆ ಗಾಯಗಳಾಗಿವೆ. ಕೆಲವರಿಗೆ ತಲೆಗೆ ಪೆಟ್ಟು ಬಿದ್ದಿದೆ. ಬೆನ್ನಿಗೆ ಹೊಡೆತ ಬಿದ್ದಿದೆ ಎಂದು ಒಬ್ಬರು ಪ್ರಯಾಣಿಕರು ಹೇಳಿದ್ದಾರೆ" ಎಂದರು.

ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದುರ್ಗಾಪುರ್ ವಿಮಾನ ನಿಲ್ದಾಣದ ಸಿಬ್ಬಂದಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+