ಕೋಲ್ಕತ್ತಾದಲ್ಲಿ ಟಿಎಂಸಿ ಮುಖಂಡನ ಸೇರಿದಂತೆ ಮೂವರ ಹತ್ಯೆ
ಕೋಲ್ಕತ್ತಾ, ಡಿಸೆಂಬರ್ 14: ಕೋಲ್ಕತ್ತಾದಲ್ಲಿ ಬುಧವಾರ ಸಂಜೆ ನಡೆದ ದಾಳಿಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ನ ಸ್ಥಳೀಯ ಮುಖಂಡರೊಬ್ಬರು ಸೇರಿಂತೆ ಮೂವರನ್ನು ಹತ್ಯೆಗೈಯ್ಯಲಾಗಿದೆ.
ಕೋಲ್ಕತ್ತಾದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಜೋಯ್ ನಗರ್ ನ ಪೆಟ್ರೋಲ್ ಪಂಪ್ ಬಳಿ ಟಿಎಂಸಿ ಮುಖಂಡ ಸೈಫುದ್ದಿನ್ ಖಾನ್ ಅವರಿದ್ದ ಕಾರಿನ ಮೇಲೆ ಬಾಂಬ್ ದಾಳಿ ನಡೆಸಿದ ದುಷ್ಕರ್ಮಿಗಳು ಮೂವರನ್ನು ಕೊಂದಿದ್ದಾರೆ.
ಟಿಎಂಸಿ ಶಾಸಕ ಬಿಸ್ವಂತ್ ದಾಸ್ ಅವರನ್ನು ಕೊಲ್ಲುವುದು ದುಷ್ಕರ್ಮಿಗಳ ಉದ್ದೇಶವಾಗಿತ್ತು. ಆದರೆ ಅವರು ಕೆಲವೇ ಕ್ಷಣಗಳ ಮುಂಚೆ ಕಾರಿನಿಂದ ಇಳಿದುಕೊಂಡಿದ್ದರಿಂದ ಈ ದುರಂಟದಿಂದ ಪಾರಾಗಿದ್ದಾರೆ. ಈ ವಿಷಯವನ್ನು ಸ್ವತಃ ಬಿಸ್ವಂತ್ ಸಿಂಗ್ ಅವರೇ ಪೊಲೀಸರಿಗೆ ತಿಳಿಸಿದ್ದಾರೆ.

ಈ ದಾಳಿಯನ್ನು ಸಿಪಿಐ(ಎಂ) ಮತ್ತು ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ನ ಕೆಲವು ಸದಸ್ಯರು ಮಾಡಿಸಿದ್ದಾರೆ ಎಂದು ಬಿಸ್ವಂತ್ ದಾಸ್ ಆರೋಪಿಸಿದ್ದಾರೆ.












Click it and Unblock the Notifications